Gold Smuggling: ರನ್ಯಾ ರಾವ್ ಪ್ರಕರಣದಲ್ಲಿ ಇಬ್ಬರು ಸಚಿವರ ಸಹಭಾಗಿತ್ವ ಗಂಭೀರ ಸ್ವರೂಪದ್ದು: ಬಿಜೆಪಿ ಶಾಸಕ

ಹುಬ್ಬಳ್ಳಿ, ಮಾರ್ಚ್‌ 14: ಕನ್ನಡ ನಟಿ ರನ್ಯಾ ರಾವ್ ಚಿನ್ನ ಕಳ್ಳ ಸಾಗಾಣೆ ಪ್ರಕರಣದವು ದಿನದಿಂದ ದಿನಕ್ಕೆ ಹೊಸ ಹೊಸ ಟ್ವಿಸ್ಟ್ ಪಡೆಯುತ್ತಿದೆ. ಪ್ರಕರಣದಲ್ಲಿ ಇಬ್ಬರು ರಾಜ್ಯ ಸಚಿವರು ಕೈವಾಡ ಪಾತ್ರದ ಬಗ್ಗೆ ಹೆಚ್ಚಿನ ಚರ್ಚೆ ಆಗುತ್ತಿದೆ. ನಟಿ ರನ್ಯಾ ರಾವ್ ಪ್ರಕರಣ ಗಂಭೀರ ಪ್ರಕರಣ ತನಿಖೆ ಆಗಲಿ ಎಂದು ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ ಹಾಗೂ ಶಾಸಕ ಮಹೇಶ್ ಟೆಂಗಿನಕಾಯಿ ಆಗ್ರಹಿಸಿದರು.

ಶುಕ್ರವಾರ ನಗರಕ್ಕೆ ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ರನ್ಯಾ ರಾವ್ ಪ್ರಕರಣ ಪ್ರಕರಣದಲ್ಲಿ ಇಬ್ಬರು ಸಚಿವರ ಭಾಗಿತ್ವ ವಿಚಾರ ಬಹಳ ಗಂಭೀರ ಸ್ವರೂಪದ್ದು ಆಗಿದೆ. ಸರ್ಕಾರ ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಸಿಐಡಿ), ಜಾರಿ ನಿರ್ದೇಶನಾಲಯ (ಇಡಿ) ಮತ್ತು ಅಪಾರದ ತನಿಖಾ ದಳ (ಸಿಐಡಿ) ಕೊಟ್ಟು ಹಿಂಪಡೆಯಲಾಗಿದೆ. ಸದ್ಯ ಪ್ರಕರಣ ತನಿಖೆ ಹಂತದಲ್ಲಿದೆ, ಸಮಗ್ರ ತನಿಖೆ ನಡೆಸಿ ಜನರಿಗೆ ಸತ್ಯ ತಿಳಿಸಬೇಕು ಎಂದು ಆಗ್ರಹಿಸಿದರು.

Discuss on Two Ministers Involved in Ranya Rao Gold Smuggling case Mahesh Tenginakai Reacts

ರಾಜ್ಯ ಸರ್ಕಾರದ ಇಬ್ಬರು ಸಚಿವರು ಈ ಚಿನ್ನ ಅಕ್ರಮ ಸಾಗಾಣೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಚರ್ಚೆ ಗರಿಗೆದರಿದೆ. ಚಿನ್ನ ಕಳ್ಳ ಸಾಗಾಣೆ ಇದೊಂದು ಅಪರಾಧ ಚಟುವಟಿಕೆಯಾಗಿದೆ. ಅಧಿಕಾರಿಗಳ ಕಣ್ತಿಪ್ಪಿಸಿ ಇಂತ ಘಟನೆ ನಡೆಯುವುದು, ಆಸ್ಪದ ಕೊಡುವುದು ಖಂಡನಾರ್ಹ ಎಂದರು.

Take a Poll

ಅಂಗನವಾಡಿ ರೇಷನ್ ಕಳ್ಳತನ!

ಇನ್ನೂ ಹುಬ್ಬಳ್ಳಿಯಲ್ಲಿ ಅಂಗನವಾಡಿ ರೇಷನ್ ಕಳ್ಳತನ ಪ್ರಕರಣ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ಅಂಗನವಾದಿ ಕಳ್ಳತನದ ಪ್ರಕರಣದ ತನಿಖೆ ಸರಿಯಾಗಿ ನಡೆಯುತ್ತಿಲ್ಲ. ಫೋನ್ ಕಾಲ್ ಬಂದ ತಕ್ಷಣ ಎಲ್ಲವು ಬದಲಾಗಿದೆ. ಅಪರಾಧಿಕಗಳು ಅಪರಾಧಿಗಳು ಕಣ್ಣೆದುರೆ ಇದ್ದರೂ ಹಿಡಿದಿಲ್ಲ ಎಂದು ತಿಳಿಸಿದ್ದಾರೆ. ಹಾಗಾದರೆ ಇದೆಲ್ಲವು ಯಾರ ವೈಫಲ್ಯ ಎಂದು ಅವರು ಪೊಲೀಸರ ನಡೆಯನ್ನು ಪ್ರಶ್ನಿಸಿದರು.

ಅಂಗನವಾಡಿ ರೇಷನ್ ಕಳ್ಳರನ್ನು ಇದುವರೆಗೂ ಬಂಧಿಸಲು ಆಗಿಲ್ಲ ಅಂದ್ರೆ ಹೇಗೆ?. ಲುಕ್ ಔಟ್ ನೋಟಿಸ್ ಕೊಡೋಕೆ ವಾಪಸ್ ಪಾಕಿಸ್ತಾನ್ ಕ್ಕೆ ಕಳಿಸಿದ್ದೀರಾ? ಎಂದು ಗರಂ ಆದರು.

Discuss on Two Ministers Involved in Ranya Rao Gold Smuggling case Mahesh Tenginakai Reacts

ಸಭಾ ಅಧ್ಯಕ್ಷರ ಮುಂದೆಯೇ ಸುಳ್ಳು ಹೇಳ್ಳಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಪತಿಫಾರೂಕ್ ಕಾಲ್ ರೆಕಾರ್ಡ್ ತೆಗೆಸಿದ್ರೆ ಯಾರಿಗೆ ಕರೆ ಹೋಗಿತ್ತು ಎಂದು ಗೊತ್ತಾಗುತ್ತದೆ. ಪೊಲೀಸರಿಗೆ ಒತ್ತಡ ಇಲ್ಲಾ ಎಂದು ಹೇಳಿರಬಹುದು. ಆದರೆ ಅವರು ಒತ್ತಡದಲ್ಲಿದ್ದಾರೆ. ಅದಕ್ಕೆ ಕಳ್ಳರನ್ನು ಬಂಧಿಸಲು ಆಗಿಲ್ಲ.

ಉತ್ತಮ ಕಮಿಷನರ್ ಎಂದು ಹೆಸರು ಮಾಡಿರುವ ನೀವು ಈ ಪ್ರಕರಣದ ಆರೋಪಿಗಳನ್ನು ಹಿಡಿಯಬೇಕು. ಇಷ್ಟು ದೊಡ್ಡ ಪ್ರಕರಣ ಒಂದೇ ಹೊಡೆತಕ್ಕೆ ಸ್ಪ್ಯಾಶ್ ಆಗುತ್ತೆ ಎಂದರೆ ಏನರ್ಥ? ಎರಡೂ ಎಫ್ಐಆರ್ ಆಗಿದ್ದಕ್ಕೆ ಪ್ರಕರಣ ನಿಂತಿದೆ ಎಂದರು ಎಂದು ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ಶಶಿಕುಮಾಮರ್ ಕುರಿತು ಪ್ರತಿಕ್ರಿಯಿಸಿದರು.

ಡಿಸಿಎಂ ಔತಣಕೂಟದಲ್ಲಿ ಬಿಜೆಪಿ ಶಾಸಕರು ಭಾಗಿ

ಡಿಸಿಎಂ ಡಿಕೆ ಶಿವಕುಮಾರ್ ಔತಣಕೂಟದಲ್ಲಿ ಬಿಜೆಪಿ ಶಾಸಕರು ಭಾಗಿಯಾದ ವಿಚಾರ, ಡಿಕೆ ಶಿ ಅವರು ಪ್ರೀತಿಯಿಂದ ಊಟಕ್ಕೆ ಕರೆದಿರಬೇಕು, ಹೋಗಿದ್ದಾರೆ. ಇತ್ತೀಚೆಗೆ ಎಲ್ಲ ಶಾಸಕರನ್ನು ಕರೆದಿದ್ದರು. ಮೂರು ಪಕ್ಷದವರು ಇದ್ದರು. ನಮ್ಮಲ್ಲಿ ಯಾವುದು ಭಿನ್ನಮತ ಇಲ್ಲಾ. ಸಣ್ಣ ಮಟ್ಟದಲ್ಲಿ ಬೆಳವಣಿಗೆಗಳು ಆಗುತ್ತಿವೆ. ಈ ತಿಂಗಳಲ್ಲಿ ಎಲ್ಲವು ಶಮನ ಆಗುತ್ತದೆ. ಅಧ್ಯಕ್ಷರ ಬದಲಾವಣೆ ಹೈಕಮಾಂಡ್ ತೀರ್ಮಾನ ಮಾಡುತ್ತಾರೆ ಎಂದು ವಿವಿಧ ಪ್ರಶ್ನೆಗಳಿಗೆ ಉತ್ತರಿಸಿದರು.

ಕಾಂಗ್ರೆಸ್ ನ ತುಷ್ಟಿಕರಣ ಅತಿಶಯೋಕ್ತಿ ಆಗಬಾರದು, ಮುಸ್ಲಿಂ ಮೀಸಲಾತಿ ಹೆಚ್ಚಳ ಪ್ರಸ್ತಾಪ ವಿಚಾರ ಕುರಿತು ಮಾತನಾಡಿದ ಅವರು, ಇದೆಲ್ಲ ಒಪ್ಪಲು ಸಾಧ್ಯವಿಲ್ಲ ಜಾತಿಗೊಂದು ಮೀಸಲಾತಿ ನೀಡಿದರೆ, ರಾಜ್ಯ ಪರಿಸ್ಥಿತಿ ಎಲ್ಲಿಗೆ ಹೋಗುತ್ತದೆ ಎಂಬುದನ್ನು ಯೋಚಿಸಬೇಕು ಎಂದು ಸರ್ಕಾರದ ನಡೆಗೆ ಅಸಮಾಧಾನ ವ್ಯಕ್ತಪಡಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+