ಕರ್ನಾಟಕ ವಿವಿಯಲ್ಲಿ ಜ.20ರಿಂದ 'ಧಾರವಾಡ ಸಾಹಿತ್ಯ ಸಂಭ್ರಮ'

Posted By:
Subscribe to Oneindia Kannada

ಧಾರವಾಡ, ಡಿಸೆಂಬರ್ 21: ಧಾರವಾಡ ಸಾಹಿತ್ಯ ಸಂಭ್ರಮ ಐದನೇ ಆವೃತ್ತಿ ಜನವರಿ 20ರಿಂದ ಮೂರು ದಿನ ನಡೆಯಲಿದ್ದು, ರಾಷ್ಟೀಯ ಜಲನೀತಿ, ಎಡ-ಬಲಗಳ ನಡುವೆ, ರಾಷ್ಟ್ರೀಯ ಜ್ವಲಂತ ಸಮಸ್ಯೆಗಳ ಕುರಿತು ವಿಶೇಷ ಗೋಷ್ಠಿ ನಡೆಯಲಿದೆ ಎಂದು ಧಾರವಾಡ ಸಾಹಿತ್ಯ ಸಂಭ್ರಮ ಟ್ರಸ್ಟ್ ನ ಅಧ್ಯಕ್ಷ ಡಾ. ಗಿರಡ್ಡಿ ಗೋವಿಂದರಾಜು ತಿಳಿಸಿದರು.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 15 ಕವಿಗೋಷ್ಠಿ. ಕೆಲ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ತಿಳಿಸಿದರು. ಐದನೇ ಅವೃತ್ತಿಯನ್ನು ಕೆ.ಎಸ್.ನಿಸ್ಸಾರ್ ಅಹಮದ್ ಉದ್ಘಾಟಿಸಲಿದ್ದಾರೆ. ವಿಮರ್ಶಕ ಜಿ.ಎಚ್. ನಾಯಕ ಅವರು ಆಶಯ ಭಾಷಣ ಮಾಡಲಿದ್ದು, ಸಮಾರೋಪ ಭಾಷಣ ಗುರುಲಿಂಗ ಕಾಪಸೆ ನೆರವೇರಿಸಲಿದ್ದಾರೆ ಎಂದರು.

ಪ್ರಸಿದ್ಧ ಪುರಾಣಶಾಸ್ತ್ರಜ್ಞ ಮುಂಬೈನ ದೇವದತ್ತ ಪಟ್ಟನಾಯಕ ಅವರು ಈ ಬಾರಿ ಸಂಭ್ರಮದ ಗೋಷ್ಠಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಸುಮತೀಂದ್ರ ನಾಡಿಗ, ಸುಂದರ ಸಾರುಕ್ಕೈ, ಲಕ್ಷ್ಮೀಶ ತೋಳ್ಪಾಡಿ, ವೈದೇಹಿ, ನಾ. ಡಿಸೋಜಾ, ಮಲ್ಲಿಕಾ ಘಂಟಿ, ಕೆ. ಸತ್ಯನಾರಾಯಣ. ನಟರಾಜ್‌ ಹುಳಿಯಾರ್, ಓ.ಎಲ್‌. ನಾಗಭೂಷಣ ಸ್ವಾಮಿ ಮೊದಲಾದ ಲೇಖಕರು ಸಂವಾದದಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಅವರು ತಿಳಿಸಿದರು.[ಕರ್ನಾಟಕ ವಿವಿಯಲ್ಲಿ ಜ.22ರಿಂದ 'ಧಾರವಾಡ ಸಾಹಿತ್ಯ ಸಂಭ್ರಮ']

dharwad sahitya sambrama programme janaury-20 to-23 in dharwad

ಮೊದಲ ದಿನ ಪೂರ್ಣಿಮಾ ಭಟ್‌ ಕುಲಕರ್ಣಿ ಅವರಿಂದ ಶಾಸ್ತ್ರೀಯ ಗಾಯನ, ಎರಡನೇ ದಿನ ಧಾರವಾಡ ರಂಗಾಯಣ ತಂಡ ಪ್ರಸ್ತುತಪಡಿಸುವ 'ತಮಾಷಾ' ನಾಟಕ ಪ್ರದರ್ಶನ ಹಾಗೂ ಮೂರನೇ ದಿನ ಟಿ.ಎಸ್‌. ನಾಗಾಭರಣ ಅವರ ನಿರ್ದೇಶನದ ಇನ್ನೂ ಬಿಡುಗಡೆಯಾಗದ 'ಅಲ್ಲಮ' ಚಿತ್ರ ಪ್ರದರ್ಶನ ನಡೆಯಲಿದೆ' ಎಂದರು.[ಜನವರಿ 16ರಿಂದ ಧಾರವಾಡ ಸಾಹಿತ್ಯ ಸಂಭ್ರಮ]

'ಈ ಬಾರಿಯೂ vividlipi.com ಅಂತರಜಾಲ ತಾಣದ ಮೂಲಕ ಸಂಭ್ರಮದ ನೇರ ಪ್ರಸಾರಕ್ಕೆ ಟ್ರಸ್ಟ್‌ ಯೋಜನೆ ರೂಪಿಸಿದೆ. ಸಂಭ್ರಮದಲ್ಲಿ ಪಾಲ್ಗೊಳ್ಳುವ ಆಸಕ್ತರಿಗೆ ಆನ್‌ಲೈನ್‌ ನೋಂದಣಿ ಡಿ. 24ರ ಬೆಳಿಗ್ಗೆ 10ಕ್ಕೆ ಆರಂಭವಾಗಲಿದೆ. www.dharwadsahityasambhrama.com ಜಾಲತಾಣದ ಮೂಲಕ ಹೆಸರು ನೋಂದಾಯಿಸಿ ಕೊಳ್ಳಬಹುದಾಗಿದೆ. ನೋಂದಣಿ 300 ಪ್ರತಿನಿಧಿಗಳಿಗೆ ಮಾತ್ರ ಸೀಮಿತವಾಗಿದ್ದು, ಪ್ರವೇಶ ಶುಲ್ಕ ₹ 750ಕ್ಕೆ ನಿಗದಿಪಡಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಮೊಬೈಲ್‌ ಸಂಖ್ಯೆ 98454 47002 ಸಂಪರ್ಕಿಸಬದಾಗಿದೆ ಡಾ. ಗಿರಡ್ಡಿ ಗೋವಿಂದರಾಜ ತಿಳಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka university, kannada sahithya parishath, prajavani daily organizes Dharwad sahitya sambrama progaramme on janauary 20 in Dharwad. This programme going on janaury 20th to 23th.
Please Wait while comments are loading...