Dharwad Lok Sabha Election Result 2024: ಯಾರಾಗಲಿದ್ದಾರೆ ಪೇಡಾನಗರಿಯ ಅಧಿಪತಿ?
Dharwad Lok Sabha Election 2024: ಈಗಾಗಲೇ ರಾಜ್ಯದಲ್ಲಿ ಲೋಕಸಭಾ ಚುನಾವಣೆ 2024ರ ಎರಡು ಹಂತದ ಲೋಕಸಭಾ ಚುನಾವಣೆ ಮುಗಿದಿದ್ದು, ಫಲಿತಾಂಶಕ್ಕೆ ಇನ್ನು ಕೇವಲ ಒಂದು ವಾರ ಅಷ್ಟೇ ಬಾಕಿಯಿದೆ. ಇನ್ನು ಮೇ 7ರಂದು ಧಾರವಾಡ ಲೋಕಸಭಾ ಕಣಕ್ಕೆ ಚುನಾವಣೆ ನಡೆದಿದ್ದು, ಈ ಬಾರಿ ಯಾರು ವಿಜಯದ ಮಾಲೆ ಹಾಕಿಕೊಳ್ಳಲಿದ್ದಾರೆ ಎನ್ನುವ ಮುನ್ನೋಟವನ್ನು ಇಲ್ಲಿ ತಿಳಿಯಿರಿ.
ಈ ಬಾರಿ ಧಾರವಾಡ ಲೋಕಸಭಾ ಕ್ಷೇತ್ರದಿಂದ ಬಿಜೆಪಿಯಿಂದ ಪ್ರಹ್ಲಾದ್ ಜೋಶಿ ಮತ್ತು ಕಾಂಗ್ರೆಸ್‌ನಿಂದ ವಿನೋದ್ ಅಸೂಟಿ ಅವರು ಕಣಕ್ಕಿಳಿದಿದ್ದರು. ಈ ಇಬ್ಬರಲ್ಲಿ ಕ್ಷೇತ್ರದಲ್ಲಿ ಹೆಚ್ಚು ವರ್ಚಸ್ಸು ಹೊಂದಿರುವವರು ಯಾರು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರಾ ಹಣಾಹಣಿ ಏರ್ಪಟ್ಟಿದ್ದು, ಸತತವಾಗಿ ನಾಲ್ಕು ಬಾರಿ ಗೆಲುವಿನ ನಗೆ ಬೀರಿ ಇದೀಗ ಬಿಜೆಪಿಯ ಪ್ರಲ್ಹಾದ್ ಜೋಶಿ ಅವರು 5ನೇ ಬಾರಿಯ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಇನ್ನು ಕಾಂಗ್ರೆಸ್‌ನಿಂದ ಹೊಸಮುಖ ವಿನೋದ ಅಸೂಟಿ ಪ್ರಹ್ಲಾದ್ ಜೋಶಿಯವರಿಗೆ ಎದುರಾಳಿಯಾಗಿದ್ದಾರೆ.
ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿ ಅವರ ಪ್ಲಸ್
* ಕ್ಷೇತ್ರದ ರಾಜಕೀಯದಲ್ಲಿ ಪಳಗಿದವರಾಗಿದ್ದಾರೆ.
* ಅಪಾರ ಅನುಭವವುಳ್ಳ ಧೀರ್ಘಾವಧಿ ರಾಜಕೀಯದ ಅನುಭವ ಹೊಂದಿದ್ದಾರೆ.
ಪ್ರಹ್ಲಾದ್ ಜೋಶಿ ಅವರ ಮೈನಸ್
* ಮೀಸಲಾತಿ ವಿಚಾರದಲ್ಲಿ ಜೋಶಿಯವರಿಗೆ ಹಿನ್ನೆಡೆಯಾಗುವ ಸಾಧ್ಯತೆ ಇದೆ.
* ಶೆಟ್ಟರ್ ಅವರಿಗೆ ಧಾರವಾಡ ಕ್ಷೇತ್ರದಿಂದ ಟಿಕೆಟ್ ತಪ್ಪಿರುವುದು ಹೊಡೆತ ಕೊಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ವಿನೋದ್ ಅಸೂಟಿ ಅವರ ಪ್ಲಸ್
* ಮೀಸಲಾತಿ ಕೈತಪ್ಪಿದ ಕಾರಣದಿಂದ ಜಾತಿ ಮೀರಿ ವಿನೋದ್ ಅಸೂಟಿಗೆ ಬೆಂಬಲ ಸಿಗುವ ಸಾಧ್ಯತೆಯಿದೆ.
* ಹೊಸ ಮುಖವನ್ನು ಗೆಲ್ಲಿಸಿದರೆ, ಏನಾದರೂ ಮೀಸಲಾತಿ ವಿಚಾರದಲ್ಲಿ ಬದಲಾವಣೆ ಆಗಬಹುದು ಎನ್ನುವ ನಿರೀಕ್ಷೆಯೂ ಇರಬಹುದು.
ವಿನೋದ್ ಅಸೂಟಿ ಅವರ ಮೈನಸ್
* ಮತ್ತೊಂದೆಡೆ ವಿನೋದ ಅಸೂಟಿ ಕೆಲ ವರ್ಷಗಳಿಂದ ಮಾತ್ರ ರಾಜಕಾರದಲ್ಲಿ ಗುರುತಿಸಿಕೊಂಡಿದ್ದಾರೆ.
* ಮೊದಲ ಬಾರಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದವರಾಗಿದ್ದಾರೆ. ಆದ್ದರಿಂದ ಹಿನ್ನಡೆಯಾಗುವ ಸಾಧ್ಯತೆಯಿದೆ.
ಇನ್ನು ದಿಂಗಾಲೇಶ್ವರ ಸ್ವಾಮೀಜಿ ಅವರು ಸ್ಪರ್ಧೆಯಿಂದ ಹಿಂದೆ ಸರಿದಿದ್ದರು. ಪ್ರಲ್ಹಾದ್ ಜೋಶಿ ಅವರು ಬ್ರಾಹ್ಮಣ ಸಮುದಾಯದವರಾಗಿದ್ದು, ವಿನೋದ ಅಸೂಟಿ ಕುರುಬ ಕುಟುಂಬದವರಾಗಿದ್ದಾರೆ. ಆದರೂ ಕ್ಷೇತ್ರದಲ್ಲಿ ಜಾತಿ ಮೀರಿ ಪ್ರೀತಿ ತೋರಿದ ಉದಾಹರಣೆಗಳಿವೆ. 1951ರಿಂದ 1991ರವರೆಗೆ ನಡೆದ ಚುನಾವಣೆಗಳಲ್ಲಿ ಕಾಂಗ್ರೆಸ್ ಸತತ ಗೆಲುವು ದಾಖಲಿಸಿದ್ದು, 1996ರಿಂದ ಸತತ ಸೋಲನುಭವಿಸಿದ್ದು, 1996ರಿಂದ ಬಿಜೆಪಿ ವಿಜಯದ ಮಾಲೆಯನ್ನು ಹಾಕಿಕೊಳ್ಳುತ್ತಲೇ ಬಂದಿದೆ.
ಹಾವೇರಿ ಜಿಲ್ಲೆಯ ಶಿಗ್ಗಾವಿ ಸಹಿತ 8 ವಿಧಾನಸಭಾ ಕ್ಷೇತ್ರಗಳು ಧಾರವಾಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿವೆ. ಬಿಜೆಪಿ ಮತ್ತು ಕಾಂಗ್ರೆಸ್ ಶಾಸಕರು ತಲಾ 4 ಕ್ಷೇತ್ರಗಳಲ್ಲಿದ್ದಾರೆ. ಇನ್ನು ಜಗದೀಶ್ ಶೇಟ್ಟರ್ ಅವರು ಕಾಂಗ್ರೆಸ್‌ಗೆ ಸೇರ್ಪಡೆಯಾಗಿ ಪುನಃ ಬಿಜೆಪಿಗೆ ಮರಳಿದ್ದದ್ದು, ಅವರು ಧಾರವಾಡ ಕ್ಷೇತ್ರದ ಬಿಜೆಪಿ ಟಿಕೆಟ್ ಮೇಲೆ ಕಣ್ಣಿಟ್ಟಿದ್ದರು. ಆದರೆ ಕೊನೆಗೂ ಈ ಕ್ಷೇತ್ರದ ಟಿಕೆಟ್ ಕೈತಪ್ಪಿದ್ದು, ಈ ಹಿನ್ನೆಲೆ ಲಿಂಗಾಯತ ಸಮುದಾಯದ ಶೆಟ್ಟರ್ ಅವರನ್ನು ಬೆಳಗಾವಿ ಕ್ಷೇತ್ರದಿಂದ ಸ್ಪರ್ಧೆಗಿಳಿಸಲಾಯಿತು. ಇದೇ ವಿಚಾರ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೂ ಕಾರಣವಾಯಿತು.
2013ರಿಂದ ಕಾಂಗ್ರೆಸ್‌ನಲ್ಲಿರುವ ವಿನೋದ ಅವರು, 2018ರಲ್ಲಿ ನವಲಗುಂದ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲನುಭವಿಸಿದ್ದರು. ಇನ್ನು ಮತ್ತೊಂದೆಡೆ ನಾಲ್ಕು ಅವಧಿಯ ಅಭಿವೃದ್ಧಿ ಕಾರ್ಯ, ನರೇಂದ್ರ ಮೋದಿ ಪ್ರಭೆಯನ್ನು ಪ್ರಹ್ಲಾದ್ ಜೋಶಿ ಅಬರು ನಂಬಿದ್ದಾರೆ. ಹಾಗೆಯೇ ಕಾಂಗ್ರೆಸ್‌ನ 5 ಗ್ಯಾರಂಟಿ ಯೋಜನೆಗಳು ಕೈಹಿಡಿಯಲಿವೆ ಎಂಬ ನಿರೀಕ್ಷೆಯಲ್ಲಿ ವಿನೋದ ಅಸೂಟಿ ಇದ್ದಾರೆ.
ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಮೇ 07ರಂದು ನಡೆದ ಮತದಾನ ನಡೆದಿದ್ದು, ಶೇಕಡಾ 74.37ರಷ್ಟು ಮತದಾನವಾಗಿದೆ. ಇನ್ನು ಈ ಕ್ಷೇತ್ರವು ಭಾರತದ ರಾಜಕಾರಣದಲ್ಲಿ ಹೆಸರುವಾಸಿಯಾದ ರಾಜಕೀಯ ಶಕ್ತಿ ಕೇಂದ್ರವಾಗಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಇದು ತೀವ್ರ ಪೈಪೋಟಿಯ ಕದನಕ್ಕೆ ಸಾಕ್ಷಿಯಾಯಿತು. ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿ 2019ರ ಸಾರ್ವತ್ರಿಕ ಚುನಾವಣೆಯಲ್ಲಿ 6,84,837 ಮತಗಳನ್ನು ಪಡೆಯುವ ಮೂಲಕ 2,05,072 ಮತಗಳ ಗೆಲುವಿನ ಅಂತರದಿಂದ ಗೆಲುವು ಸಾಧಿಸಿದ್ದರು.
ಇನ್ನು 4,79,765 ಮತಗಳನ್ನು ಪಡೆದ ಐಎನ್‌ಸಿ ಯ ವಿನಯ ಕುಲಕರ್ಣಿ ಅವರು ಪ್ರಹ್ಲಾದ್ ಜೋಶಿ ವಿರುದ್ಧ ಸ್ಪರ್ಧಿಸಿ ಸೋಲನುಭವಿಸಿದರು. ಧಾರವಾಡ ವೈವಿಧ್ಯಮಯ ಜನಸಮೂದಾಯವನ್ನು ಪ್ರತಿಬಿಂಬಿಸುತ್ತದೆ ಮತ್ತು ಕರ್ನಾಟಕದ ನಿರ್ಣಾಯಕ ಕ್ಷೇತ್ರವಾಗಿ ಉಳಿದಿದೆ.
-
ಸದನದಲ್ಲಿ ಬಜೆಟ್ ಚರ್ಚೆ: ಸಿಎಂ ಸಿದ್ದರಾಮಯ್ಯ ವಿರುದ್ಧ ಆರೋಪ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Yami Gautam: ಕನ್ನಡದಲ್ಲೇ ಧುರಂಧರ್ ನಿರ್ದೇಶಕನ ಪತ್ನಿ ಯಾಮಿ ಗೌತಮ್ ಮೊದಲ ಸಿನಿಮಾ, ಸ್ಟಾರ್ ಹೀರೋ ಜೊತೆ ಚೊಚ್ಚಲ ನಟನೆ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು












Click it and Unblock the Notifications