ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

3 ದಿನದ ಸಾಹಿತ್ಯ ಸಂಭ್ರಮಕ್ಕೆ ಧಾರವಾಡ ಸಜ್ಜು

|
Google Oneindia Kannada News

ಧಾರವಾಡ, ಜ. 15 : ಕರ್ನಾಟಕ ವಿ.ವಿ ಆವರಣದ ಸುವರ್ಣ ಮಹೋತ್ಸವ ಭವನದಲ್ಲಿ ಜ.16 ರಿಂದ ಈ ಬಾರಿಯ ಧಾರವಾಡ ಸಾಹಿತ್ಯ ಸಂಭ್ರಮ ಆರಂಭವಾಗಲಿದೆ. ಜನವರಿ 16, 17 ಮತ್ತು 18 ರಂದು ನಗರದಲ್ಲಿ ಸಾಹಿತ್ಯದ ಕಂಪು ಪಸರಿಸಲಿದೆ.

ಈ ಬಗ್ಗೆ ಮಾಹಿತಿ ನೀಡಿದ ಹಿರಿಯ ವಿಮರ್ಶಕ ಹಾಗೂ ಸಾಹಿತ್ಯ ಸಂಭ್ರಮ ಟ್ರಸ್ಟ್‌ ಅಧ್ಯಕ್ಷ ಡಾ.ಗಿರಡ್ಡಿ ಗೋವಿಂದರಾಜ, ಸಾಹಿತ್ಯ ಸಂಭ್ರಮದ ಎರಡು ಆವೃತ್ತಿಗಳು ಯಶಸ್ವಿಯಾದ ಹಿನ್ನೆಲೆಯಲ್ಲಿ 3ನೇ ಆವೃತ್ತಿಯನ್ನು ಅರ್ಥಪೂರ್ಣವಾಗಿ ಆಯೋಜಿಸಲು ತೀರ್ಮಾನಿಸಲಾಗಿದೆ. ಹೀಗಾಗಿ ಓದು, ಸಂವಾದ, ಚರ್ಚೆ, ಮಾತುಕತೆ, ಪ್ರಶ್ನೋ­ತ್ತರ­ಗಳು ಇರಲಿವೆ ಎಂದು ತಿಳಿಸಿದರು.[ಜನವರಿ 16ರಿಂದ ಧಾರವಾಡ ಸಾಹಿತ್ಯ ಸಂಭ್ರಮ]

3 ದಿನದ ಸಾಹಿತ್ಯ ಸಂಭ್ರಮಕ್ಕೆ ಧಾರವಾಡ ಸಜ್ಜು

83 ಗಣ್ಯರು, 200 ಸಾಹಿತಿಗಳು ಹಾಗೂ 370 ಪ್ರತಿನಿಧಿಗಳು ಸಂಭ್ರಮದಲ್ಲಿ ಪಾಲ್ಗೊಳ್ಳ­ಲಿದ್ದಾರೆ. ಸಾಹಿತ್ಯ ಚರ್ಚೆಯಲ್ಲಿ ಜನಪದ ಗಾಯನ, ನಾಟಕ ಹಾಗೂ ಚಲನಚಿತ್ರ ಪ್ರದ­ರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ವಿ.ಜಿ. ನರೇಂದ್ರ ಅವರ ವ್ಯಂಗ್ಯಚಿತ್ರ ಪ್ರದರ್ಶನ, ಕಂಸಾಳೆ, ಮಲೆ ಮಹದೇಶ್ವರ, ಮಂಟೆ­ಸ್ವಾಮಿ ಹಾಗೂ ಬಿಳಿಗಿರಿರಂಗ ಕಾವ್ಯ ಗಾಯನ, ಪಂಡಿತ್‌ ಎಂ. ವೆಂಕಟೇಶ­ಕುಮಾರ ಅವರಿಂದ ಶಾಸ್ತ್ರೀಯ ಗಾಯನ ಕಾರ್ಯಕ್ರಮ ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಡಾ. ಚೆನ್ನವೀರ ಕಣವಿ, ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ, ಡಾ. ಎಂ.ಎಂ. ಕಲಬುರ್ಗಿ, ಹಾ.ವೆಂ. ಕಾಖಂಡಕಿ, ಡಾ. ಲೋಹಿತ ನಾಯ್ಕರ್‌, ಡಾ. ರಮಾಕಾಂತ ಜೋಶಿ ಮುಂತಾದವರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.[2014ರ ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿ ಘೋಷಣೆ]

ಒಗ್ಗರಣೆ ಚಿತ್ರ ಪ್ರದರ್ಶನ
ಸದಭಿರುಚಿಯ ಸಿನಿಮಾ 'ಒಗ್ಗರಣೆ' ಚಿತ್ರ ಪ್ರದರ್ಶನ­ ಸಹ ಹಮ್ಮಿಕೊಳ್ಳಲಾಗಿದೆ. ನಟ, ನಿರ್ದೇಶಕ ಪ್ರಕಾಶ್‌ ರೈ ಮತ್ತು ಗಿರೀಶ ಕಾರ್ನಾಡ್ ಅವರ ನಡುವೆ 'ಭಾಷೆ ಮತ್ತು ಅಭಿ­ನಯ' ಕುರಿತ ಚರ್ಚೆ ನಡೆಯಲಿದೆ ಎಂದು ತಿಳಿಸಿದರು.

English summary
Dharwad: Dharwad is gearing up to host the third edition of the literary festival ‘Dharwad Sahitya Sambhrama' or the Dharwad literary festival. The three-day event will open on January 16 at the Golden Jubilee auditorium on the Karnatak University campus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X