ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಧಾರವಾಡ: ಸರ್ಕಾರಿ ಶಾಲಾ ಕಾಲೇಜುಗಳಿಗೆ ಪ್ರಹ್ಲಾದ್ ಜೋಶಿಯಿಂದ ಗಿಫ್ಟ್

|
Google Oneindia Kannada News

ಧಾರವಾಡ, ಅಕ್ಟೋಬರ್‌ 28: ಧಾರವಾಡ ಲೋಕಸಭಾ ಕ್ಷೇತ್ರದ ಎಲ್ಲಾ ಸರ್ಕಾರಿ ಶಾಲಾ ಕಾಲೇಜುಗಳಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ದೀಪಾವಳಿ ಬಂಪರ್ ಗಿಫ್ಟ್ ನೀಡಿದ್ದಾರೆ.

1177 ಶಾಲಾ ಕಾಲೇಜುಗಳಿಗೆ ಹೊಸದಾಗಿ ಬಣ್ಣ ಹಚ್ವುವ ಬಣ್ಣದರ್ಪಣೆ ಕಾರ್ಯಕ್ರಮದ ಜೊತೆಗೆ, 320 ಹೊಸ ಕ್ಲಾಸ್ ರೂಮ್‌ಗಳನ್ನ ಕಟ್ಟಿಸಿಕೊಡುವುದಾಗಿ ಕೇಂದ್ರ ಸಚಿವರು ಘೋಷಿಸಿದ್ದಾರೆ. ಧಾರವಾಡದಲ್ಲಿಂದು ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿದರು.

ಶಾಲೆಗೊಂದು ಸ್ಮಾರ್ಟ್ ಕ್ಲಾಸ್ ರೂಮ್, 50 ಸಾವಿರ ಡೆಸ್ಕ್, 100 ಹೈಟೆಕ್ ಅಂಗನವಾಡಿಗಳ ನಿರ್ಮಾಣದ ಗುರಿಯನ್ನು ಮುಂಬರುವ ಎರಡು ವರ್ಷದಲ್ಲಿ ಪೂರ್ಣಗೊಳಿಸಲು ನಿಶ್ಚಯಿಸಲಾಗಿದೆ. ಸಿ.ಎಸ್.ಆರ್ ಫಂಡ್ ಮುಖೇನ ತಮ್ಮ ಕ್ಷಮತಾ ಸೇವಾ ಸಂಸ್ಥೆ ಮೂಲಕ ಪಂಚ ಯೋಜನೆಗಳನ್ನ ಜಾರಿಗೊಳಿಸುವುದಾಗಿ ಜೋಶಿ ಹೇಳಿದ್ದಾರೆ.

ಶನಿವಾರದಿಂದ ಆರಂಭವಾಗುವ ಬಣ್ಣದರ್ಪಣೆ ಕಾರ್ಯಕ್ರಮ ಮುಂದಿನ ವರ್ಷದ ದೀಪಾವಳಿ ಒಳಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಪ್ರತಿ ತಿಂಗಳು 100 ಶಾಲಾ ಕಾಲೇಜುಗಳಿಗೆ ಬಣ್ಣ ಹಚ್ಚುವ ಕಾರ್ಯ ನಡೆಯಲಿದೆ. ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 1177 ಶಾಲಾ ಕಾಲೇಜುಗಳಿಗೆ ಹೊಸದಾಗಿ ಬಣ್ಣ ಹಚ್ಚಲು ನಿರ್ಧರಿಸಲಾಗಿದೆ. ಪ್ರಹ್ಲಾದ್ ಜೋಶಿ ಅವರ ಕ್ಷಮತಾ ಸೇವಾ ಸಂಸ್ಥೆಯಿಂದ ಉಚಿತವಾಗಿ ಬಣ್ಣವನ್ನು ನೀಡಲಾಗುವುದು. ಕ್ಲಾಸ್ ರೂಮ್‌ಗಳಿಗೆ ಬಣ್ಣ ಹಚ್ಚಲು 20 ಲೀಟರ್ ಪೇಂಟ್ ಅನ್ನು ಉಚಿತವಾಗಿ ನೀಡಲಾಗುವುದು ಎಂದು ಜೋಶಿ ಹೇಳಿದರು.

Deepavali Gift from Pralhad Joshi To government schools and colleges

ಶಾಲೆಯ ಹೊರ ಗೋಡೆಗಳಿಗೂ ಪ್ರತ್ಯೇಕವಾಗಿ ಬಣ್ಣ ವಿತರಿಸಲಾಗುವುದು. ಶಾಲೆಗಳಿಗೆ ಬಣ್ಣ ಹಚ್ಚಲು ಶ್ರಮದಾನದ ಕಾರ್ಯಕ್ಕೆ ವಿದ್ಯಾರ್ಥಿ ಸಂಘಟನೆಗಳು, ಸೇವಾ ಸಂಘಸಂಸ್ಥೆಗಳು, ಶಿಕ್ಷಕರು ಮುಂದೆ ಬರಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮನವಿ ಮಾಡಿದರು. 20 ರೂಪಾಯಿ ಬಾಂಡ್ ಪೇಪರ್ ಮೇಲೆ ಸಹಿ ಹಾಕಿ ಶಾಲೆಗೆ ಬಣ್ಣ ಹಚ್ಚುವ ಒಪ್ಪಂದದೊಂದಿಗೆ ಸಂಘ ಸಂಸ್ಥೆಗಳು ಉಚಿತವಾಗಿ ಬಣ್ಣ ಪಡೆಯಬಹುದಾಗಿದೆ.

ಸರ್ಕಾರಿ ಶಾಲಾ ಕಾಲೇಜುಗಳಿಗೆ ಕ್ಲಾಸ್ ರೂಮ್; ಧಾರವಾಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಎಲ್ಲ ಸರ್ಕಾರಿ ಶಾಲಾ ಕಾಲೇಜುಗಳಿಗೆ 480 ಹೊಸ ಕ್ಲಾಸ್ ರೂಮ್‌ಗಳ ಅಗತ್ಯವಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳ ವರದಿ ಪಡೆದಿರುವ ಪ್ರಹ್ಲಾದ್ ಜೋಶಿಯವರು, ಮುಂದಿನ ಎರಡು ವರ್ಷದ ಒಳಗೆ ಹೊಸ ಕ್ಲಾಸ್ ರೂಮ್ ಗಳನ್ನು ಕಟ್ಟಿಸಿಕೊಡಲು ತೀರ್ಮಾನಿಸಿದ್ದಾರೆ.

480 ಕ್ಲಾಸ್ ರೂಂಗಳ ಪೈಕಿ ರಾಜ್ಯ ಸರ್ಕಾರವೇ ತನ್ನ ಯೋಜನೆ ಅನ್ವಯ 160 ಕ್ಲಾಸ್ ರೂಮ್ ಗಳನ್ನ ಕಟ್ಟಿಸಿಕೊಡಲಿದೆ. ಉಳಿದ 320 ಹೊಸ ಕ್ಲಾಸ್ ರೂಮ್ ಗಳನ್ನ ಸಿ.ಎಸ್.ಆರ್ ಫಂಡ್ ನ ಸಹಾಯದೊಂದಿಗೆ ಕಟ್ಟಿಸಿಕೊಡುವುದಾಗಿ ಸಚಿವ ಪ್ರಹ್ಲಾದ್ ಜೋಶಿ ಅವರು ಘೋಷಿಸಿದ್ದಾರೆ.

ಅಷ್ಟೇ ಅಲ್ಲದೇ ಪ್ರತಿ ಶಾಲೆಗೊಂದು ಸ್ಮಾರ್ಟ್ ಕ್ಲಾಸ್, ಹಾಗೂ 100 ಹೈಟೆಕ್ ಅಂಗನವಾಡಿ ನಿರ್ಮಿಸಿಕೊಡುವುದಾಗಿಯೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು. ಈಗಾಗಲೇ 10 ಸಾವಿರ ಡೆಸ್ಕ್ ಗಳನ್ನ ಸರ್ಕಾರಿ ಶಾಲಾ ಕಾಲೇಜುಗಳಿಗೆ ಪೂರೈಸಲಾಗಿದ್ದು, ಇನ್ನೂ 50 ಸಾವಿರ ಡೆಸ್ಕ್ ಗಳು ಅಗತ್ಯವಿದೆ. ಹಂತ ಹಂತವಾಗಿ 50 ಸಾವಿರ ಡೆಸ್ಕ್ ಗಳನ್ನು ಪೂರೈಸುವುದಾಗಿಯೂ ಇದೇ ವೇಳೆ ಭರವಸೆ ನೀಡಿದರು.

ಒಟ್ಟಾರೆ, ಶಿಗ್ಗಾವಿ - ಸವಣೂರು ಕ್ಷೇತ್ರಗಳು ಸೇರಿದಂತೆ ಸಂಪೂರ್ಣ ಧಾರವಾಡ ಲೋಕಸಭಾ ಕ್ಷೇತ್ರದ ಸರ್ಕಾರಿ ಶಾಲಾ ಕಾಲೇಜುಗಳ ಅಭಿವೃದ್ದಿಗೆ 100 ಕೋಟಿ ವೆಚ್ಚದ ಮಹತ್ವದ 5 ಯೋಜನೆಗಳನ್ನ ಪ್ರಹ್ಲಾದ್ ಜೋಶಿ ಇಂದು ಘೋಷಿಸುವ ಮೂಲಕ ಕ್ಷೇತ್ರದ ಜನರಿಗೆ ಹಬ್ಬದ ಕೊಡುಗೆ ನೀಡಿದ್ದಾರೆ.

English summary
Union minister Pralhad Joshi announced that 1177 schools and colleges in Dharwad Lok Sabha Constituency will be painted and 320 new classrooms will be constructed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X