• search
  • Live TV
ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

"ಚೋಟುದ್ದ ಇಲ್ಲ, ಐ ಲವ್ ಯೂ ನಾ?" ಧಾರವಾಡ ಡಿಸಿ ಅಚ್ಚರಿಗೊಂಡಿದ್ದೇಕೆ?

By ಧಾರವಾಡ ಪ್ರತಿನಿಧಿ
|

ಧಾರವಾಡ, ಡಿಸೆಂಬರ್ 27: ನೆರೆ ಸಂತ್ರಸ್ತರ ಮನೆಗಳ ಪರಿಶೀಲನೆಗೆಂದು ನಿನ್ನೆ ಧಾರವಾಡದ ಉಪ್ಪಿನ ಬೆಟಗೇರಿ ಗ್ರಾಮಕ್ಕೆ ಜಿಲ್ಲಾಧಿಕಾರಿ ದೀಪಾ ಚೋಳನ್ ಭೇಟಿ ನೀಡಿದ್ದರು.

ಗ್ರಾಮದಲ್ಲಿ ನಡೆದುಹೋಗುತ್ತಾ ಅಲ್ಲಲ್ಲಿ ನಿಂತಿದ್ದ ವಿದ್ಯಾರ್ಥಿ, ಮಕ್ಕಳನ್ನು ಮಾತನಾಡಿಸುತ್ತಿದ್ದರು. ಈ ವೇಳೆ ಮನೆಯ ಮುಂದಿನ ಕಟ್ಟೆ ಮೇಲೆ ಬುಕ್ ಹಿಡಿದು ಜಿಲ್ಲಾಧಿಕಾರಿಗಳು ಹೋಗುವುದನ್ನು ನೋಡುತ್ತ ನಿಂತಿದ್ದ ಹುಡುಗನೊಬ್ಬನನ್ನು ಕಂಡು, ಆ ಹುಡುಗನ ಬಳಿ ಹೋಗಿ ಎಷ್ಟನೇ ತರಗತಿ ಎಂದು ಮಾತನಾಡಿಸಿದ್ದಾರೆ. ಹಾಗೆ ಆತನ ಕೈಯಲ್ಲಿದ್ದ ಪುಸ್ತಕವನ್ನು ತೆಗೆದುಕೊಂಡು ನೋಡಲಾರಂಭಿಸಿದ್ದಾರೆ.

ಭೀಕರ ಪ್ರವಾಹ: ಧಾರವಾಡ ಜಿಲ್ಲೆಯಲ್ಲಿ 672 ಕೋಟಿ ರೂ. ಹಾನಿ

ಅವರು ಪುಸ್ತಕ ತೆಗೆದುಕೊಂಡಿದ್ದೇ ತಡ, ಆ ವಿದ್ಯಾರ್ಥಿ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಜಿಲ್ಲಾಧಿಕಾರಿಗಳು ಆಶ್ಚರ್ಯಗೊಂಡು ಆ ಪುಸ್ತಕ ತೆಗೆದು ನೋಡುತ್ತಿದ್ದಂತೆ ಅದರಲ್ಲಿ ಯಾರಿಗೋ ಐ ಲವ್ ಯೂ ಎಂದು ಬರೆದಿದ್ದು ಕಾಣಿಸಿದೆ. ಅದನ್ನು ನೋಡಿ ದಂಗಾದ ಜಿಲ್ಲಾಧಿಕಾರಿಗಳು, ನೋಡಿ ಇಲ್ಲಿ ಎಂದು ಅಲ್ಲಿದ್ದ ಇತರರಿಗೂ ಅದನ್ನು ತೋರಿಸಿದ್ದಾರೆ. ಚೋಟುದ್ದ ಇಲ್ಲ, ಐ ಲವ್ ಯೂ ನಾ ಎಂದು ಅಚ್ಚರಿಗೊಂಡಿದ್ದಾರೆ. ಇದೇ ಕಾರಣಕ್ಕೇ ಓಡಿ ಹೋದ ಬಾಲಕ ಎಂದು ನಸುನಕ್ಕು ಮುಂದೆ ಹೋಗಿದ್ದಾರೆ.

English summary
DC Deepa Cholan who visit uppina betageri in dharwad to examine the flood victims house has surprised to see the student book,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X