ಧಾರವಾಡದಲ್ಲಿ ಸಾವನ್ನೇ ಗೆದ್ದುಬಂದ ಅವಶೇಷಗಳಡಿ ಸಿಲುಕಿದ್ದ ದಂಪತಿ
ಧಾರವಾಡ, ಮಾರ್ಚ್ 22: ನಿರ್ಮಾಣ ಹಂತದ ಕಟ್ಟಡ ಕುಸಿದು ಅವಶೇಷಗಳಡಿ ಮೂರು ದಿನಗಳಿಂದ ಬಂಧಿಯಾಗಿದ್ದ ದಂಪತಿಗೆ ಇಂದು ಬಿಡುಗಡೆ ಭಾಗ್ಯ ಸಿಕ್ಕಿದೆ.
ಸಮಗ್ರ ಮಾಹಿತಿಯುಳ್ಳ ಲೋಕಸಭೆ ಚುನಾವಣೆಯ ವಿಶೇಷ ಪುಟ
ಸತತ 62 ಗಂಟೆಗಳ ಕಾಲ ಊಟ, ನೀರು ಇಲ್ಲದೆ ಅವಶೇಷಗಳಡಿ ಇದ್ದು ದಿಲೀಪ್ ದಂಪತಿ ಬದುಕಿ ಬಂದಿದ್ದಾರೆ. ದಿಲೀಪ್ ಅವರನ್ನು ಹೊರಗೆ ಕರೆತರಲು ಈ ಮೊದಲೇ ಸಾಕಷ್ಟು ಅವಕಾಶಗಳಿದ್ದವು.
ಆದರೆ ಹೆಂಡತಿಯನ್ನು ಬಿಟ್ಟು ನಾನು ಹೊರಗೆ ಬರುವುದಿಲ್ಲ ಎಂದು ಹಠ ಹಿಡಿದಿದ್ದ ಕಾರಣ ಕಾರ್ಯಾಚರಣೆ ಸ್ವಲ್ಪ ತಡವಾಯಿತು ಆದರೆ ಅದೃಷ್ಟವೆಂಬಂತೆ ಇಬ್ಬರು ಸಾವನ್ನು ಗೆದ್ದು ಬಂದಿದ್ದಾರೆ.

ಮಂಗಳವಾರ ಸಂಭವಿಸಿದ ಅವಘಡದಲ್ಲಿ ಈ ವರೆಗೆ 14 ಮಂದಿ ಮೃತಪಟ್ಟಿದ್ದು, 62ಜನರನ್ನು ರಕ್ಷಣೆ ಮಾಡಲಾಗಿದೆ. ಶುಕ್ರವಾರ ಬೆಳಗ್ಗೆ ಯುವಕನೊಬ್ಬನನ್ನು ಎನ್ಡಿಆರ್ಆಫ್ ಪಡೆ ಜೀವಂತವಾಗಿ ಹೊರತೆಗೆದಿತ್ತು. ಇದೀಗ ಪವಾಡವೆಂಬಂತೆ ಇನ್ನಿಬ್ಬರು ಬದುಕಿ ಬಂದಿದ್ದಾರೆ.












Click it and Unblock the Notifications