ಕಳೆಗಟ್ಟಿದ ಅಖಾಡ: ಬಸವರಾಜ್ ಹೊರಟ್ಟಿ ನಾಮಪತ್ರ ಸಲ್ಲಿಕೆ

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ, ಮೇ.23: ವಿಧಾನ ಪರಿಷತ್ ಪಶ್ಚಿಮ ಪದವೀಧರ ಮತಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಹಾಲಿ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಸೋಮವಾರ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಲು ಬೆಳಗಾವಿಗೆ ತೆರಳಿದರು.

ಸತತ 36 ವರ್ಷಗಳಿಂದ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಹೊರಟ್ಟಿ ಜೆಡಿಎಸ್ ಸರಕಾರವಿದ್ದಾಗ ಶಿಕ್ಷಣ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಶಿಕ್ಷಕರ ಅನೇಕ ಸಮಸ್ಯೆಗಳನ್ನು ನಾನು ಬಗೆಹರಿಸಿದ್ದೇನೆ ಎನ್ನುವ ಹೊರಟ್ಟಿ ಈ ಬಾರಿಯೂ ಶಿಕ್ಷಕರು ತಮ್ಮನ್ನು ಗೆಲ್ಲಿಸುವುದರಲ್ಲಿ ಸಂಶಯವೇ ಇಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.[36 ವರ್ಷ ಶಾಸಕರಾಗಿ ಹೊರಟ್ಟಿ ಶಿಕ್ಷಕರಿಗೆ ಏನು ಮಾಡಿದ್ದಾರೆ ?]

mlc

ಹಲವಾರು ಶಿಕ್ಷಕ ಸಂಘಟನೆಗಳು ಈಗಾಗಲೇ ಕೆಲವೆಡೆ ಪತ್ರಿಕಾಗೋಷ್ಠಿ ನಡೆಸಿ ಹೊರಟ್ಟಿ ಅವರಿಗೆ ನಮ್ಮ ಬೆಂಬಲವಿದೆ ಎಂದು ಹೇಳಿವೆ. ಕೇವಲ ಪ್ರೌಢಶಾಲಾ ಶಿಕ್ಷಕರು ಮತ್ತು ಇತರೆ ಶಿಕ್ಷಕರು ಚುನಾವಣೆಯಲ್ಲಿ ಮತದಾರರಾಗಿದ್ದಾರೆ.

hubballi

ಧಾರವಾಡ, ಹಾವೇರಿ, ಗದಗ ಮತ್ತು ಕಾರವಾರ ಜಿಲ್ಲೆಗಳನ್ನೊಳಗೊಂಡ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಗೆ ಕಾಂಗ್ರೆಸ್ ನಿಂದ ಟಿ.ಈಶ್ವರ, ಬಿಜೆಪಿಯಿಂದ ಮಾ. ನಾಗರಾಜ ಈಗಾಗಲೇ ನಾಮಪತ್ರ ಸಲ್ಲಿಸಕೆ ಮಾಡೊದ್ದಾರೆ.[ಬಸವರಾಜ ಹೊರಟ್ಟಿ ಸೋಲು ಖಚಿತ: ಶೆಟ್ಟರ್ ಭವಿಷ್ಯ]

hubballi

ಬಿಜೆಪಿಯಿಂದ ಕುಬೇರಪ್ಪ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿವುದಾಗಿ ಹೇಳಿದ್ದಾರೆ. ಕುಬೇರಪ್ಪ ಈ ಹಿಂದೆ ಎರಡು ಬಾರಿ ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದರು. ಈ ಬಾರಿಯೂ ನನಗೆ ಟಿಕೆಟ್ ಕೊಡಬೇಕೆಂದು ಪಕ್ಷದ ವರಿಷ್ಠರಲ್ಲಿ ಕೋರಿದ್ದರು. ಆದರೆ ಬಿಜೆಪಿಯು ಎಬಿವಿಪಿ ಹಿನ್ನೆಲೆಯುಳ್ಳ ಮಾ. ನಾಗರಾಜ ಅವರಿಗೆ ಪಕ್ಷದ ಟಿಕೆಟ್ ನೀಡಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Hubballi: MLC, JDS Leader Basavaraj S. Horatti, filed his nomination to the Legislative Council from the Karnataka West Teachers' constituency.BJP candidate M Nagaraj and Congress candidate T Ishwar was already filled nomination for the MLC election.
Please Wait while comments are loading...