1950ರಲ್ಲಿ RSS ಈ ಸಂವಿಧಾನ ನಮ್ಮದಲ್ಲ ಎಂದು ಹೇಳಿತ್ತು: ಪ್ರಕಾಶ್ ಅಂಬೇಡ್ಕರ್
ಧಾರವಾಡ, ಸೆಪ್ಟೆಂಬರ್ 19: ''1950ರಲ್ಲಿ ಆರ್‌ಎಸ್ ಎಸ್ ಪ್ರಸ್ತುತ ಇರುವ ಭಾರತದ ಸಂವಿಧಾನ ನಮ್ಮದಲ್ಲ ಎಂದು ಹೇಳಿತ್ತು. ನಮಗೆ ಯಾವಾಗ ಅವಕಾಶ ಸಿಗುತ್ತದೋ, ಆ ದಿನ ಅದನ್ನು ನಾವು ಬದಲಾವಣೆ ಮಾಡುತ್ತೇವೆ ಎಂದಿದ್ದರು. ಇವರ ಉದ್ದೇಶನೇ ಸಂವಿಧಾನ ಬದಲಿಸಬೇಕು ಎಂಬುದಾಗಿದೆ'' ಎಂದು ಡಾ. ಬಿ. ಆರ್ ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ಹೇಳಿದ್ದಾರೆ.
ಧಾರವಾಡದಲ್ಲಿ ಮಾತನಾಡಿದ ಅವರು, ''ಎಲ್ಲಿಯವರೆಗೆ ಇವರು ದೇಶದ ಅರ್ಧ ರಾಜ್ಯಗಳಲ್ಲಿ ಅಧಿಕಾರಕ್ಕೆ ಬಂದಿರಲಿಲ್ಲವೋ, ಲೋಕಸಭೆಯಲ್ಲಿ ಗೆಲ್ಲುವವರೆಗೆ ಈ ಮಾತನ್ನು ಆಡಿರಲಿಲ್ಲ, ಇದೀಗ ಗೆಲುವು ಸಾಧಿಸಿದ ಬಳಿಕ, ರಾಜ್ಯಗಳಲ್ಲಿ ರಾಜಕೀಯ ಸಂಘಟನೆಗಳನ್ನು ಅಳಿಸಲು ಮುಂದಾಗಿದೆ, ತಮ್ಮ ಅಧಿಕಾರಕ್ಕಾಗಿ ಈ ಈ ರೀತಿ ಮಾಡುತ್ತಿದೆ. ಆರ್ ಎಸ್ ಎಸ್ ಹಾಗೂ ಬಿಜೆಪಿ ಟೇಬಲ್ ಮೇಲೆ ಸಂವಿಧಾನ ಬದಲಾವಣೆಯ ಅಜೆಂಡಾ ಇದೆ'' ಎಂದರು.
''ಪರಿವಾರದ ಸಂರಕ್ಷಣೆ, ಸಾಮಾಜಿಕ ಸಂರಕ್ಷಣೆ ಅಲ್ಲ. ಅದಕ್ಕಾಗಿ ಜನರು ಶಿಕ್ಷಣ ಕೊಡಿಸುವುದು ಮಾತ್ರ ಅವಶ್ಯಕತೆ ಇಲ್ಲ. ಮೀಸಲಾತಿನೇ ಇರದೇ ಇದ್ದರೆ ನಿಮ್ಮ ಮಕ್ಕಳು ಶಿಕ್ಷಣ ಪಡೆಯಲು ಆಗಲ್ಲ, ನೌಕರಿ ಕೂಡಾ ಸಿಗಲ್ಲ'' ಎಂದು ಪ್ರಕಾಶ್ ಅಂಬೇಡ್ಕರ್ ಹೇಳಿದರು.

ಯಾರು ತಮ್ಮ ಪರಿವಾರದ ವಿಚಾರ ಮಾಡುತಿದ್ದಾರೆ, ಅವರಿಗೆ ಸಾಮಾಜಿಕ ಜವಾಬ್ದಾರಿ ಕೂಡಾ ಇದೆ. ಸಾಮಾಜಿಕ ಜವಾಬ್ದಾರಿ ಮೂಡಬೇಕಾದರೆ ಸಂವಿಧಾನ ಉಳಿಸಬೇಕು. ಸಂವಿಧಾನ ಉಳಿಸಲು ಸಾಮಾಜಿಕ ಹೋರಾಟ ಅವಶ್ಯಕತೆ ಇದೆ. ತಮ್ಮ ಜವಾಬ್ದಾರಿ ಮರೆತವನು ತಮ್ಮ ಮಕ್ಕಳನ್ನ ಬಂಧನದಲ್ಲಿ ಇಡುವಂತೆ ಆಗಲಿದೆ ಎಂದರು.
ಕಾಂಗ್ರೆಸ್‌ನಿಂದ ಬಿಜೆಪಿಗೆ ಸಹಾಯ ಮಾಡುವ ರಾಜಕಾರಣ
ಭಾರತ ಒಡೆದಿಲ್ಲ, ಒಡೆದಿದ್ರೆ ಅದನ್ನ ಜೋಡಿಸಬಹುದು. ಒಡದೇ ಇಲ್ಲ ಎಂದರೆ ಜೋಡಿಸುವ ಮಾತೇ ಇಲ್ಲಾ. ವಿಚಾರ ಮಾಡುವ ರಾಜಕಾರಣ ಕಾಂಗ್ರೆಸ್ ನಲ್ಲಿ ಇಲ್ಲವೇ ಇಲ್ಲಾ. ಕಾಂಗ್ರೆಸ್ ದಾರಿ ತಪ್ಪಿಸುವ ರಾಜಕೀಯ ಮಾಡುತ್ತಿದೆ. ಬಿಜೆಪಿಗೆ ಸಹಾಯ ಮಾಡುವ ರಾಜಕಾರಣ ಕಾಂಗ್ರೆಸ್ ಮಾಡುತ್ತಿದೆ. ಅದಕ್ಕಾಗಿ ಬಿಜೆಪಿಯ ಧೈರ್ಯ ಬೆಳೆಯುತ್ತಿದೆ. ಅದರಿಂದ ಸಂವಿಧಾನ ಬದಲಾವಣೆ ಬಗ್ಗೆ ಅವರು ಮಾತನಾಡುತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.












Click it and Unblock the Notifications