ನಕ್ಸಲರ ಶರಣಾಗತಿ ಬಗ್ಗೆ ರಾಜ್ಯ ಸರ್ಕಾರಕ್ಕೆ ಕೇಂದ್ರ ಸಚಿವರ ಪ್ರಶ್ನೆ
ಹುಬ್ಬಳ್ಳಿ, ಜನವರಿ 11: ನಕ್ಸಲರ ಶರಣಾಗತಿ ವಿಚಾರದ ಬಗ್ಗೆ ಸರ್ಕಾರ ಮಾಹಿತಿ ನೀಡಬೇಕು. ಇದು ಎಷ್ಟು ದಿನದಿಂದ ಪ್ರಕ್ರಿಯೆ ನಡೆಯುತ್ತಿತ್ತು? ಇದು ಬಹಳ ತರಾತುರಿಯಲ್ಲಿ ನಡೆಯಿತು ಅನ್ನೋ ಭಾವನೆ ಎಲ್ಲರಲ್ಲೂ ಇದೆ. ಬೇರೆ ಬೇರೆ ಭಾಗಗಳಲ್ಲಿ ಶರಣಾಗತಿ ಆದ ನಕ್ಸಲರು ಅವರ ಬಳಿ ಇದ್ದ ಶಸ್ತಾಸ್ತ್ರಗಳನ್ನ ಒಪ್ಪಿಸಿದ್ದಾರೆ. ಇಲ್ಲಿ ಶರಣಾಗತಿಯಾದ ನಕ್ಸಲ್ ಎಷ್ಟು ಶಸ್ತ್ರಾಸ್ತ್ರಗಳು ಒಪ್ಪಿಸಿದ್ದಾರೆ? ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ರಾಜ್ಯ ಸರ್ಕಾರಕ್ಕೆ ಪ್ರಶ್ನಿಸಿದ್ದಾರೆ.
ಹುಬ್ಬಳ್ಳಿ ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ನಕ್ಸಲರ ಶರಣಾಗತಿಗೆ ನಾನು ವಿರೋಧ ಮಾಡುತ್ತಿಲ್ಲ. ನಕ್ಸಲ್‌ರ ಪ್ಯಾಕೇಜ್ ವ್ಯವಸ್ಥೆ ಎಲ್ಲಾ ಸರ್ಕಾರದಲ್ಲಿದೆ ಎಂದು ಹೇಳಿದರು.

ಇನ್ನು ನಕ್ಸಲ್ ಚಳುವಳಿಯನ್ನು ಬೇರು ಸಮೇತ ಹೊಸುಕಿ ಹಾಕುವ ಚಿಂತನೆಯನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ಹೀಗಾಗಿ ತರಾತುರಿಯಲ್ಲಿ ರಾಜ್ಯದಲ್ಲಿ ಆರು ಜನ ನಕ್ಸಲ್ ಶರಣಾಗತಿಯಾಗಿದ್ದಾರೆ. ಶರಣಾಗತಿಯಾದ ನಕ್ಸಲ್ ಎಷ್ಟು ಶಸ್ತ್ರಾಸ್ತ್ರಗಳು ಒಪ್ಪಿಸಿದ್ದಾರೆ ? ಏನು ಮಹತ್ವದ ಮಾಹಿತಿ ನೀಡಿದ್ದಾರೆ ಅದನ್ನು ರಾಜ್ಯದ ಜನತೆಗೆ ಮುಖ್ಯಮಂತ್ರಿ ತಿಳಿಸಲಿ ಎಂದರು.
ನಕ್ಸಲರಿಗೆ ವಿದೇಶಿದಿಂದ ಹಣದ ಸಹಾಯವಾಗುತ್ತದೆ. ಇದರಲ್ಲಿ ನಮ್ಮ ರಾಜ್ಯದ ಯುವಕರು ಸಿಲುಕಿದ್ದಾರೆ. ನಕ್ಸಲ್ ಪ್ಯಾಕೇಜ್ ಇತರೆ ನಕ್ಸಲ್‌ರಿಗೆ ಸಲುಗೆಯಾಗದಿರಲಿ. ಆರು ಜನ ನಕ್ಸಲ್ ಶರಾಣಾದ್ರೆ ರಾಜ್ಯದಲ್ಲಿ ನಕ್ಸಲ್ ಚಳುವಳಿ ಮುಗಿತು ಅಂತ ಬಿಂಬಿಸಲಾಗುತ್ತಿದೆ. ಆ್ಯಂಟಿ ನಕ್ಸಲ್ ತಂಡದ ಕಾರ್ಯಾಚರಣೆ ನಿಲ್ಲಿಸುತ್ತೇವೆ ಎನ್ನುವುದು ಎಷ್ಟರಮಟ್ಟಿಗೆ ಸರಿ? ಎಂದು ಪ್ರಶ್ನಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಡಿನ್ನರ್ ಪಾರ್ಟಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ವಿಜಯೇಂದ್ರ ಯಾವುದೇ ಡಿನ್ನರ್ ಪಾರ್ಟಿ ಅಂತಾ ಕರೆದಿಲ್ಲ. ಪಕ್ಷದ ಸಭೆಗಾಗಿ ಕರೆದಿದ್ದರು ನನಗೂ ಸಹ ಕರೆದಿದ್ದರು ನಾನೂ ಹೋಗಿದ್ದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸ್ಪಷ್ಟನೆ ನೀಡಿದರು.












Click it and Unblock the Notifications