ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಕ್ಟೋಬರ್ 24ರಿಂದ ಹುಬ್ಬಳ್ಳಿ-ಧಾರವಾಡ ನಡುವೆ 'ಚಿಗರಿ' ಸಂಚಾರ

|
Google Oneindia Kannada News

ಧಾರವಾಡ, ಅಕ್ಟೋಬರ್ 09 : ಹುಬ್ಬಳ್ಳಿ-ಧಾರವಾಡ ಅವಳಿ ನಗರದ ನಡುವೆ ಬಿ.ಆರ್‌.ಟಿ.ಎಸ್ ಬಸ್ ಸಂಚಾರ ಅಕ್ಟೋಬರ್ 24ರಿಂದ ಆರಂಭವಾಗಲಿದೆ. ಈಗಾಗಲೇ ಅಕ್ಟೋಬರ್ 2ರಿಂದ ಪ್ರಾಯೋಗಿಕವಾಗಿ ಬಸ್ ಸಂಚಾರ ಆರಂಭವಾಗಿದೆ.

ಧಾರವಾಡ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ದರ್ಪಣ ಜೈನ್ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. ಧಾರವಾಡ ಬಸ್ ನಿಲ್ದಾಣಕ್ಕೆ ಭೇಟಿ ನೀಡಿದ ಅವರು Bus Rapid Transit System (BRTS) ಬಸ್ ನಿಲ್ದಾಣದ ಕಾಮಗಾರಿಯನ್ನು ಪರಿಶೀಲನೆ ನಡೆಸಿದರು.

ಹುಬ್ಬಳ್ಳಿ-ಧಾರವಾಡ ನಡುವೆ ಬಿಆರ್‌ಟಿಎಸ್ ಬಸ್ ಸಂಚಾರ ಆರಂಭಹುಬ್ಬಳ್ಳಿ-ಧಾರವಾಡ ನಡುವೆ ಬಿಆರ್‌ಟಿಎಸ್ ಬಸ್ ಸಂಚಾರ ಆರಂಭ

'ಬಿ.ಆರ್.ಟಿ.ಎಸ್ ಯೋಜನೆಯಡಿ ಕೈಗೊಂಡ ಕಾಮಗಾರಿಗಳು ಬಹುತೇಕ ಪೂರ್ಣಗೊಂಡಿವೆ. ಹುಬ್ಬಳ್ಳಿಯ ಬಿ.ಎಸ್.ಎನ್.ಎಲ್.ಬಸ್ ನಿಲ್ದಾಣದಿಂದ ಈಗ ಪ್ರತಿದಿನ 5 ಬಸ್ಸುಗಳು ಉಣಕಲ್‌ವರೆಗೆ ಸಂಚರಿಸುತ್ತಿವೆ. ಅಕ್ಟೊಬರ್ 10 ರಿಂದ ರಾಯಾಪುರದ ತನಕ ಬಸ್ ಸೇವೆ ವಿಸ್ತರಣೆ ಮಾಡಲಾಗುತ್ತದೆ' ಎಂದು ದರ್ಪಣ ಜೈನ್ ಹೇಳಿದರು.

ಹುಬ್ಬಳ್ಳಿ-ಮುಂಬೈ ನಡುವೆ ಸ್ಪೈಸ್‌ ಜೆಟ್ ಹಾರಾಟ ಸ್ಥಗಿತವಿಲ್ಲಹುಬ್ಬಳ್ಳಿ-ಮುಂಬೈ ನಡುವೆ ಸ್ಪೈಸ್‌ ಜೆಟ್ ಹಾರಾಟ ಸ್ಥಗಿತವಿಲ್ಲ

'ಕೆಲವು ದಿನಗಳಲ್ಲಿ ಧಾರವಾಡದ ಟೋಲ್ ನಾಕಾವರೆಗೆ ಬಸ್ ಸಂಚಾರವನ್ನು ವಿಸ್ತರಣೆ ಮಾಡಲಾಗುತ್ತದೆ. ಅಕ್ಟೊಬರ್ 24 ರಿಂದ ಪ್ರಾಯೋಗಿಕವಾಗಿ ಹುಬ್ಬಳ್ಳಿ-ಧಾರವಾಡ ಅವಳಿನಗರದಲ್ಲಿ ಬಿ.ಆರ್‌.ಟಿ.ಎಸ್ ಬಸ್ಸುಗಳು ಸಂಚಾರ ನಡೆಸಲಿವೆ' ಎಂದು ತಿಳಿಸಿದರು.

ಬೆಂಗಳೂರು ಮೌಂಟ್ ಕಾರ್ಮೆಲ್ ವಿದ್ಯಾರ್ಥಿ ಈಗ ಧಾರವಾಡ ಡಿಸಿಬೆಂಗಳೂರು ಮೌಂಟ್ ಕಾರ್ಮೆಲ್ ವಿದ್ಯಾರ್ಥಿ ಈಗ ಧಾರವಾಡ ಡಿಸಿ

ಪಾರ್ಕಿಂಗ್ ಸೌಲಭ್ಯ

ಪಾರ್ಕಿಂಗ್ ಸೌಲಭ್ಯ

'ಪ್ರಯಾಣಿಕರ ಅನುಕೂಲಕ್ಕಾಗಿ ಬಿ.ಆರ್‌.ಟಿ.ಎಸ್ ಬಸ್ ನಿಲ್ದಾಣಗಳ ಹತ್ತಿರ ಅಗತ್ಯವಿರುವಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಮತ್ತೆ ಸಮೀಕ್ಷೆ ಮಾಡಿದ್ದು, ಇನ್ನು ಬೇಕಿರುವ ಸ್ಥಳಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲು ಯೋಜನೆ ರೂಪಿಸಲಾಗುತ್ತಿದೆ' ಎಂದು ದರ್ಪಣ ಜೈನ್ ಹೇಳಿದರು.

ಬೇಂದ್ರ ಸಾರಿಗೆ ವ್ಯವಸ್ಥೆ ಬಂದ್

ಬೇಂದ್ರ ಸಾರಿಗೆ ವ್ಯವಸ್ಥೆ ಬಂದ್

ಹುಬ್ಬಳ್ಳಿ-ಧಾರವಾಡ ಅವಳಿ ನಗರದ ನಡುವೆ ಸಂಚರಿಸುತ್ತಿರುವ ಬೇಂದ್ರೆ ಖಾಸಗಿ ಬಸ್ ಸೇವೆಯ ಪರ್ಮಿಟ್ ಅವಧಿ ಜೂನ್ 2019ಕ್ಕೆ ಅಂತ್ಯಗೊಳ್ಳಲಿದೆ. ಖಾಸಗಿ ಬಸ್ ಸೇವೆಯನ್ನು ಪರ್ಮಿಟ್ ಅವಧಿ ಮುಗಿದ ನಂತರ ನವೀಕರಣ ಮಾಡದಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುತ್ತದೆ.

ಸ್ಮಾರ್ಟ್ ಕಾರ್ಡ್ ವಿತರಣೆ

ಸ್ಮಾರ್ಟ್ ಕಾರ್ಡ್ ವಿತರಣೆ

ಹುಬ್ಬಳ್ಳಿ-ಧಾರವಾಡ ಅವಳಿ ನಗರದ ನಾಗರಿಕರೂ ಸೇರಿದಂತೆ ನಗರಕ್ಕೆ ಆಗಮಿಸುವ ಬೇರೆ ಊರುಗಳ ಪ್ರಯಾಣಿಕರಿಗೆ ಉತ್ತಮ ಸೇವೆಯನ್ನು ನೀಡಲು ಬಿ.ಆರ್‌.ಟಿ.ಎಸ್ ಬದ್ದವಾಗಿದೆ. ಬಸ್ ಸೇವೆಯೊಂದಿಗೆ ನಗರ ಸಾರಿಗೆಯನ್ನು ಸಮನ್ವಯಗೊಳಿಸಿ ನಗರದ ತುಂಬಾ ಸಂಚರಿಸಲು ಪ್ರಯಾಣಿಕರಿಗೆ ಅನುಕೂಲವಾಗುವಂತೆ ಒಂದೇ ಟಿಕೆಟ್ ಅನ್ವಯವಾಗುವಂತೆ ಸ್ಮಾರ್ಟ ಕಾರ್ಡ್ ನೀಡಲು ಚಿಂತಿಸಲಾಗಿದೆ.

ಉತ್ತಮ ಪ್ರತಿಕ್ರಿಯೆ

ಉತ್ತಮ ಪ್ರತಿಕ್ರಿಯೆ

ಅಕ್ಟೋಬರ್ 2ರಂದು ಬಿ.ಆರ್‌.ಟಿ.ಎಸ್ ಪ್ರಾಯೋಗಿಕ ಬಸ್ ಸಂಚಾರ ಆರಂಭಿಸಲಾಗಿದೆ. ಪ್ರಾಯೋಗಿಕ ಸಂಚಾರ ಸೇವೆಗೆ ಅವಳಿ ನಗರದ ನಾಗರಿಕರಿಂದ ಉತ್ತಮ ಸ್ಪಂದನೆ ದೊರಕಿದೆ. ಸ್ವಚ್ಚತೆ, ಶಿಸ್ತು ಮತ್ತು ಸಂಯಮದಿಂದ ಸಾರ್ವಜನಿಕರು ಸೇವೆಗೆ ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ಈ ಉತ್ತಮ ಸಂಚಾರ ವ್ಯವಸ್ಥೆಯಿಂದ ಅಭಿವೃದ್ಧಿಗೆ ಇನ್ನಷ್ಟು ಅವಕಾಶವಾಗಲಿದೆ ಎಂದು ಹೇಳಿದರು.

ದರ ಎಷ್ಟಿದೆ?

ದರ ಎಷ್ಟಿದೆ?

ಹುಬ್ಬಳ್ಳಿ-ಧಾರವಾಡ ನಡುವೆ ಸಂಚಾರ ನಡೆಸುವ ಬಿ.ಆರ್.ಟಿ.ಎಸ್ ಬಸ್ಸಿಗೆ 'ಚಿಗರಿ' ಎಂದು ನಾಮಕರಣ ಮಾಡಲಾಗಿದೆ. ಬಸ್ ಸಂಪೂರ್ಣ ಹವಾನಿಯಂತ್ರಿತವಾಗಿದ್ದು, ಇದಕ್ಕೆ 55-60 ರೂ. ಪ್ರಯಾಣ ದರ ನಿಗದಿ ಮಾಡಬೇಕಾಗಿರುತ್ತದೆ. ಆದರೆ, ಪ್ರಯಾಣಿಕರ ಹಿತದೃಷ್ಟಿಯಿಂದ ಧಾರವಾಡಕ್ಕೆ 26 ರೂ. ಪ್ರಯಾಣ ದರ ನಿಗದಿ ಮಾಡಲಾಗಿದೆ.

English summary
Bus Rapid Transit System (BRTS) bus between Hubballi and Dharwad will run from October 24, 2018. BRTS bus services launched on trail basis from October 2.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X