ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಧಾರವಾಡ ಜಿಲ್ಲಾ ಪಂಚಾಯಿತಿ ಬಿಜೆಪಿ ಮಡಿಲಿಗೆ

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ಧಾರವಾಡ, ಮೇ 02 : ಧಾರವಾಡ ಜಿಲ್ಲಾ ಪಂಚಾಯಿತಿಯಲ್ಲಿ ಅಧಿಕಾರ ಹಿಡಿಯಲು ಬಿಜೆಪಿ ಸಿದ್ಧವಾಗಿದೆ. ಅತಂತ್ರ ಫಲಿತಾಂಶ ಬಂದಿದ್ದ ಜಿಲ್ಲಾ ಪಂಚಾಯಿತಿಯಲ್ಲಿ, ಪಕ್ಷೇತರ ಸದಸ್ಯ ಶಿವಾನಂದ ಕರೀಗಾರ್ ಅವರು ಬಿಜೆಪಿಗೆ ಬೆಂಬಲ ಕೊಟ್ಟಿದ್ದು, ಕಮಲ ಪಕ್ಷ ಅಧಿಕಾರ ಹಿಡಿಯಲಿದೆ.

'ಪಕ್ಷೇತರ ಸದಸ್ಯ ಶಿವಾನಂದ ಕರೀಗಾರ್ ಅವರು ಬಿಜೆಪಿಗೆ ಬೆಂಬಲ ನೀಡಿದ್ದಾರೆ' ಎಂದು ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ 11 ಸ್ಥಾನಗಳಿಸಿರುವ ಬಿಜೆಪಿಗೆ ಪಕ್ಷೇತರ ಅಭ್ಯರ್ಥಿ ಬೆಂಬಲ ಸಿಕ್ಕಿದ್ದರಿಂದ 12 ಸದಸ್ಯ ಬಲ ಸಿಕ್ಕಿದಂತಾಗಿದೆ. [ಧಾರವಾಡ ಜಿಲ್ಲಾ ಪಂಚಾಯಿತಿಯಲ್ಲಿ ಶಿವಾನಂದ ಕರೀಗಾರ್ ಹೀರೋ]

dharwad zilla panchayat

ಚುನಾವಣೆಯಲ್ಲಿ ಬಿಜೆಪಿ ಕಾಂಗ್ರೆಸ್‌ಗಿಂತ ಹೆಚ್ಚು ಮತಗಳನ್ನು ಪಡೆದಿದ್ದರೂ ಬಹುಮತಕ್ಕಾಗಿ ಒಂದು ಸ್ಥಾನದ ಕೊರತೆಯಿತ್ತು. ಈಗ ಪಕ್ಷೇತರ ಸದಸ್ಯ ಶಿವಾನಂದ ಕರೀಗಾರ್ ಬೆಂಬಲ ವ್ಯಕ್ತಪಡಿಸಿದ್ದು, ಬಿಜೆಪಿಗೆ ಅಧಿಕಾರದ ಹಾದಿ ಸುಗಮವಾಗಿದೆ. [30 ಜಿಲ್ಲೆಗಳ ಪಂಚಾಯ್ತಿ ಫಲಿತಾಂಶ ಸಂಪೂರ್ಣ ವಿವರ]

ಫಲಿತಾಂಶದ ಚಿತ್ರಣ : ಧಾರವಾಡ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ 11, ಕಾಂಗ್ರೆಸ್ 10 ಸ್ಥಾನಗಳಲ್ಲಿ ಜಯಗಳಿಸಿತ್ತು. ಜೆಡಿಎಸ್‌ ಯಾವುದೇ ಸ್ಥಾನದಲ್ಲಿಯೂ ಜಯಗಳಿಸಿರಲಿಲ್ಲ. ಆದರೆ, ಪಕ್ಷೇತರ ಅಭ್ಯರ್ಥಿ 1 ಸ್ಥಾನದಲ್ಲಿ ಜಯಗಳಿಸಿದ್ದು, ನಿರ್ಣಾಯಕರಾಗಿ ಹೊರಹೊಮ್ಮಿದ್ದರು.

English summary
Bharatiya Janata Party (BJP) is all set to rule the Dharwad Zilla Panchayat after independent candidate Shivanand Karigar has pledged his support to the party. BJP emerged as single largest party by winning 11 seats in the 22 member house. The Congress won 10 seats in election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X