ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಬಡತನ, ಹಸಿವಿಗೆ ಪರಿಹಾರ ಯಾವ ಪಠ್ಯದಲ್ಲೂ ಇಲ್ಲ'

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ಫೆಬ್ರವರಿ 07 : 'ಅರ್ಥಶಾಸ್ತ್ರದಲ್ಲಿ ಪಿಎಚ್‌ಡಿ ಪದವಿ ಪಡೆದಿರುವ ನಾನು ಯಾವ ಪಠ್ಯದಲ್ಲಿಯೂ ಬಡತನ ನಿರ್ಮೂಲನೆಗೆ ಪರಿಹಾರ ಕಾಣಲಿಲ್ಲ' ಎಂದು ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಹಾಗೂ ಗ್ರಾಮೀಣ ಬ್ಯಾಂಕ್ ಸಂಸ್ಥಾಪಕ ಮಹಮ್ಮದ್ ಯೂನುಸ್ ವಿಷಾದ ವ್ಯಕ್ತಪಡಿಸಿದ್ದಾರೆ.

ಶನಿವಾರ ಹುಬ್ಬಳ್ಳಿಯ ಖಾಸಗಿ ಹೋಟೆಲ್‌ನಲ್ಲಿ ಟೈಕಾನ್ ಸಮಾವೇಶದ ಸಮಾರೋಪ ಮತ್ತು ದೇಶಪಾಂಡೆ ಫೌಂಡೇಶನ್‌ನ ಯುವ ಸಮ್ಮೇಳನದಲ್ಲಿ ಮಾತನಾಡಿದ ಬಾಂಗ್ಲಾದೇಶದ ಮಹಮ್ಮದ್ ಯೂನುಸ್ ಅವರು, 'ಬ್ಯಾಂಕುಗಳಿಂದ ಬಡಜನರ ಸಂಕಷ್ಟ ಕಡಿಮೆಯಾಗುತ್ತಿದೆ' ಎಂದರು. [ಹುಬ್ಬಳ್ಳಿ ಟೈ ಸಮಾವೇಶದಲ್ಲಿ, ದಿಗ್ಗಜ ಮಹಿಳೆಯರ ಸಾಧನೆಯಾನ]

muhammad yunus

'ಬಾಂಗ್ಲಾದೇಶದಲ್ಲಿ ಜನರು ಬಡತನ ಮತ್ತು ಹಸಿವಿನಿಂದ ಸಾವನ್ನಪ್ಪುವುದನ್ನು ನೋಡಿದ ನಾನು 1983 ರಲ್ಲಿ ಗ್ರಾಮೀಣ ಬ್ಯಾಂಕ್ ಆರಂಭಿದೆ. ಇದ್ದವರು ಬಡವರನ್ನು ಸಾಲ ನೀಡಿ ಸತಾಯಿಸುತ್ತಿದ್ದರು. ಇದರಿಂದ ನಮ್ಮ ಬ್ಯಾಂಕ್‌ಗೆ ಸ್ಪಂದನೆ ಬರಲಾರಂಭಿಸಿತು' ಎಂದರು. [ಮೋದಿ ಕನಸುಗಳು: ಸ್ವಚ್ಛಭಾರತದಿಂದ ಡಿಜಿಟಲ್ ಇಂಡಿಯಾ ತನಕ]

'ಇಂದು ಬಡವರು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹೆಚ್ಚು-ಹೆಚ್ಚು ತೊಡಗುತ್ತಿದ್ದಾರೆ. ಇದು ಅವರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ನೀಡುತ್ತಿದೆ. ನಾವೂ ಸತ್ತರೂ ನಮ್ಮ ಕಂಪನಿ ಬೆಳೆಯುತ್ತಿರಬೇಕು ಇದೇ ಯಶಸ್ಸಿನ ಮಂತ್ರ' ಎಂದು ಹೇಳಿದರು.

'ಹಿಟ್ಲರ್ ಜಗತ್ತನ್ನು ಗೆದ್ದರೂ ಜನರನ್ನು ಪ್ರೀತಿಸದ ಕಾರಣ ಆತನ ನಂತರ ಅಂತಹವರು ಹುಟ್ಟಲಿಲ್ಲ. ಗ್ರಾಹಕರನ್ನು ಮತ್ತು ಸಿಬ್ಬಂದಿಯನ್ನು ಎಷ್ಟು ಪ್ರೀತಿಸುತ್ತೇವೋ ಅದಕ್ಕಿಂತ ದುಪ್ಪಟ್ಟು ನಮ್ಮ ಕಂಪನಿ ಉನ್ನತ ಮಟ್ಟಕ್ಕೇರುತ್ತದೆ' ಎಂದು ಯಶಸ್ಸಿನ ಸೂತ್ರವನ್ನು ತೆರೆದಿಟ್ಟರು.

hubballi

ಎಂಟರ್ಪ್ರಿನರ್ ಇಂಡಿಯಾ ಮ್ಯಾಗಜಿನ್ ಸಂಪಾದಕಿ ರಿತು ಮಾರಿಯಾ, ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್.ನಾರಾಯಣ ಮೂರ್ತಿ, ಪತ್ರಕರ್ತ ಶೇಖರ ಗುಪ್ತಾ, ಬಾಹ್ಯಾಕಾಶ ಯಾನಿ ಡಾ.ಅನೌನೇಶ ಅನ್ಸಾರಿ, ಕ್ರೀಡಾಪಟು ಮಾಲತಿ ಹೊಳ್ಳ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

English summary
Every poor person will be able to operate his bank account. Bank to ensure greater financial stability to the poor said, Nobel laureate professor and Bangladeshi social entrepreneur, banker Muhammad Yunus at Hubballi, Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X