Yatnal vs Vijayendra: ಬಿಜೆಪಿ ಬಣ ರಾಜಕೀಯ ಜಗಳ ಶಾಂತವಾಯಿತಾ!: ಅರವಿಂದ್ ಬೆಲ್ಲದ್ ಹೇಳಿದ್ದೇನು
ಬೆಂಗಳೂರು, ಡಿಸೆಂಬರ್ 05: ಭಾರತೀಯ ಜನತಾ ಪಕ್ಷವು ಒಂದು ಪ್ರಮುಖ ರಾಜಕೀಯ ದೊಡ್ಡ ಪಕ್ಷ. ಪಕ್ಷವೆಂದ ಮೇಲೆ ಕೊಂಚ ಭಿನ್ನಾಭಿಪ್ರಾಯಗಳು ಉಂಟಾಗುವುದು ಸಹಜ. ಇಂತಹ ಭಿನ್ನಾಭಿಪ್ರಾಯಗಳನ್ನು ಪಕ್ಷದ ಬಿಜೆಪಿ ಹಿರಿಯ ನಾಯಕರ ಸಮ್ಮುಖದಲ್ಲಿ ಇತ್ಯರ್ಥಗೊಳ್ಳುಲಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಣ ರಾಜಕೀಯ ಜಗಳ ಕುರಿತು ಅವರು ಹೇಳಿದರು.
ಧಾರವಾಡದಲ್ಲಿ ಮಾತನಾಡಿದ ಅವರು, ಬಿಜೆಪಿ ಹಿತ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆ ನಡೆದಿದೆ. ಪಕ್ಷದಲ್ಲಿ ಉಂಟಾಗಿದ್ದ ಸಣ್ಣ ಪುಟ್ಟ ಗೊಂದಲಗಳು ಹೈಕಮಾಂಡ್ ಮಧ್ಯಸ್ಥಿಕೆಯಿಂದ ಶಾಂತವಾಗಿದೆ. ಸದ್ಯ ಭಿನ್ನಾಭಿಪ್ರಾಯವು ಶಾಂತವಾಗಿದ್ದು, ಪಕ್ಷದ ಲಕ್ಷಾಂತರ ಕಾರ್ಯಕರ್ತರಿಗೆ ಸಂತೋಷ ಉಂಟು ಮಾಡಿದೆ.

ಶಾಮನೂರು ಹೇಳಿಕೆ: ಯುತ್ನಾಳ್ ಪರ ನಿಂತ ಬೆಲ್ಲದ್
ಬೀದರ್ ಪ್ರತಿಭಟನೆಯಲ್ಲಿ ಬಸವಣ್ಣನವರು ಹೊಳೆಗೆ ಹಾರಿ ಪ್ರಾಣ ಬಿಟ್ಟರು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹೇಳಿದ್ದಕ್ಕೆ ಕಾಂಗ್ರೆಸ್ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರು ವಾಗ್ದಾಳಿ ನಡೆಸಿದ್ದರು. ಯತ್ನಾಳ್ ಅವರು ಸ್ವತಃ ಬಾಯಿಗೆ ಬೀಗ ಹಾಕಿಕೊಳ್ಳಬೇಕು. ಇಲ್ಲವಾದರೆ ನಿಮ್ಮನ್ನು ಹಾಳು ಬಾವಿಗೆ ತಳ್ಳಬೇಕಾಗುತ್ತದೆ ಎಂದು ಹೇಳಿದ್ದನ್ನು ಬೆಲ್ಲದ್ ಅವರು ಖಂಡಿಸಿದ್ದಾರೆ.
ಶಾಮನೂರು ಶಿವಶಂಕರಪ್ಪನವರು ಅಖಿಲ ಭಾರತ ಮಹಾಸಭಾದ ಅಧ್ಯಕ್ಷರು, ಮೇಲಾಗಿ ಹಿರಿಯರು. ಅವರ ಬಾಯಿಯಲ್ಲಿ ಹಾಳು ಬಾವಿಗೆ ತಳ್ಳುತ್ತೇವೆ ಎಂಬ ಮಾತು ಬರಬಾರದು. ಅದು ನಿಮಗೆ ಶೋಭೆ ತರುವಂತದ್ಧಲ್ಲ. ಬಸನಗೌಡ ಪಾಟೀಲ್ ಯತ್ನಾಳ್ ಅವರು ಹೇಳಿದ್ದು ಸರಿ ಇದೆ.

ಪ್ರಶ್ನಿಸದ ಶಾಮನೂರು ಅವರು ಮನೆಯಲ್ಲಿರಲಿ
ಶಾಮನೂರು ಶಿವಶಂಕರಪ್ಪನವರು ಬಸವ ಕಲ್ಯಾಣದಲ್ಲಿ ಏನು ಮಾಡಿದ್ದಾರೆ. ಬಸವಣ್ಣ ಇರುವ ಅನುಭವ ಮಂಟಪ ಇವತ್ತು ಅನುಭವ ಮಂಟಪ ಆಗಿ ಉಳಿದಿಲ್ಲ. ಅಲ್ಲಿ ಪೀರ ಬಾಷಾ ಅವರ ಒಂದು ಪೀರ್ ನಡೆಯುತ್ತಿದೆ. ಅದನ್ನು ತಡೆಯಲು ಚಕಾರ ಎತ್ತಿಲ್ಲ. ಈ ಸರ್ಕಾರ ಲಿಂಗಾಯತ ಅಭಿವೃದ್ಧಿ ಪ್ರಾಧಿಕಾರಕ್ಕೆ ಒಂದೇ ಒಂದು ರೂಪಾಯಿ ಬಿಡುಗಡೆ ಮಾಡಿಲ್ಲ. ಅದರ ಬಗ್ಗೆ ಇವರು ಚಕಾರವನ್ನೇ ಎತ್ತುತ್ತಿಲ್ಲ. ಶಾಮನೂರು ಅವರಿಗೆ ವಯಸ್ಸು ಆಗಿದೆ, ಅವರು ಮನೆಯಲ್ಲಿ ಕುತಕೊಳೊದು ಒಳ್ಳೆಯದು. ಬಾಯಿಗೆ ಬಂದಂತೆ ಮಾತನಾಡಬಾರದು ಎಂದು ಹೇಳಿದರು.
ಬೆಳಗಾವಿ ಚಳಿಗಾಲ ಅಧಿವೇಶನ ವೇಳೆ ಪಂಚಮಸಾಲಿ 2ಎ ಮೀಸಲಾತಿಗೆ ಆಗ್ರಹಿಸಿ ಹೋರಾಟ ವಿಚಾರಕ್ಕೆ ಪ್ರತಿಕ್ರಿಯಿಸಿದ ಬೆಲ್ಲದ್ ಅವರು, ಲಿಂಗಾಯತ ಪಂಚಮಸಾಲಿ ಸಮಾಜದ ಅನಿಸಿಕೆಗಳನ್ನು ವ್ಯಕ್ತ ಪಡಿಸಲು ಬೆಳಗಾವಿಯಲ್ಲಿ ಬೃಹತ್ ಸಭೆ ಇಟ್ಟುಕೊಂಡಿದ್ದೇವೆ. ಬಿಜೆಪಿ ಸರ್ಕಾರ ಇದ್ದಾಗ ಮೀಸಲಾತಿ ಕೊಡಲಾಗಿತ್ತು, ಈ ಕಾಂಗ್ರೆಸ್ ಸರ್ಕಾರ ಅದನ್ನು ಅಡೆತಡೆ ಹಾಕುವಂತಹ ಕೆಲಸ ಮಾಡುತ್ತಿದೆ. ಅದಕ್ಕೆ ನಾವು ಇದು ಸರಿ ಮಾಡಲು ಹೋರಾಟ ಮಾಡುತಿದ್ದೇವೆ ಎಂದರು.
ಸಿಎಂಗೆ ಮುಡಾ ಹಗ್ಗ ಉರಳಾಗುವುದು ಪಕ್ಕಾ
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣದಲ್ಲಿ ಇಡಿ ಪ್ರಮುಖ ಸಾಕ್ಷ್ಯ ಸಂಗ್ರಹಿಸಿದೆ. ಸುಮಾರು 5000 ಕೋಟಿ ರೂ.ಅಕ್ರಮದಲ್ಲಿ ಸಿಎಂ ಕುಟುಂಬ ಭಾಗಿಯಾಗಿದೆ. ಈ ಸಂಬಂಧ ಇಡಿ ಅಧಿಕಾರಿಗಳಿಗೆ ಮಾಹಿತಿ ಬಂದಿದ್ದು, ತನಿಖೆ ಕೈಗೊಂಡಿದ್ದಾರೆ. ಈ ಮುಡಾ ಹಗ್ಗವು ಮುಖ್ಯಮಂತ್ರಿ ಕೊರಳಿಗೆ ಬಿಗಿಯಾಗುವ ಕಾಲ ದೂರವಿಲ್ಲ ಎಂದು ಅವರು ಎಚ್ಚರಿಸಿದರು.












Click it and Unblock the Notifications