ಹುಬ್ಬಳ್ಳಿ-ಬೆಂಗಳೂರು ನಡುವೆ ಏರ್‌ ಪೆಗಾಸಸ್ ವಿಮಾನ ಸೇವೆ

ಹುಬ್ಬಳ್ಳಿ, ಏ.2 : ಬೆಂಗಳೂರು ಮೂಲದ ಏರ್ ಪೆಗಾಸಸ್ ವಿಮಾನಯಾನ ಸಂಸ್ಥೆ ಏ.12ರಿಂದ ಹುಬ್ಬಳ್ಳಿಗೆ ವಿಮಾನಯಾನ ಸಂಪರ್ಕ ಕಲ್ಪಿಸಲಿದೆ. ಬೆಂಗಳೂರು-ಹುಬ್ಬಳ್ಳಿ ಮತ್ತು ಬೆಂಗಳೂರು-ತಿರುವಂತನಪುರಕ್ಕೆ ನೂತನ ವಿಮಾನ ಸೇವೆ ಆರಂಭವಾಗಲಿದೆ.

ಏರ್ ಪೆಗಾಸಸ್ ಸಂಸ್ಥೆ ಮುಖ್ಯಸ್ಥ ಶೈಸನ್ ಥಾಮಸ್ ಈ ಕುರಿತು ಮಾಹಿತಿ ನೀಡಿದ್ದಾರೆ. ಕಡಿಮೆ ಬೆಲೆಯಲ್ಲಿ ಉತ್ತಮ ಪ್ರಯಾಣ ಸೇವೆ ಒದಗಿಸುವ ಉದ್ದೇಶದಿಂದ ಸಂಸ್ಥೆ ಬೆಂಗಳೂರು-ಹುಬ್ಬಳ್ಳಿ ಮತ್ತು ಬೆಂಗಳೂರು ತಿರುವನಂತಪುರ ನಡುವೆ ಸೇವೆಯನ್ನು ಆರಂಭಿಸಲಿದೆ ಎಂದರು. [ಹುಬ್ಬಳ್ಳಿಗೆ ಅಕ್ಟೋಬರ್ ವರೆಗೆ ಸ್ಪೈಸ್ ಜೆಟ್ ಹಾರಾಟವಿಲ್ಲ]

Air Pegasus

ಈ ಮಾರ್ಗಗಳಲ್ಲಿ 66 ಆಸನ ವ್ಯವಸ್ಥೆ ಹೊಂದಿರುವ ಎರಡು ವಿಮಾನಗಳು ಸಂಚಾರ ನಡೆಸಲಿವೆ. ಎರಡೂ ಮಾರ್ಗದಲ್ಲಿಯೂ 1,234 ರೂ. ದರ ನಿಗದಿ ಮಾಡಲಾಗಿದೆ ಎಂದರು. ಬೆಂಗಳೂರು-ಹುಬ್ಬಳ್ಳಿ ನಡುವೆ 1 ಗಂಟೆ ಮತ್ತು ಬೆಂಗಳೂರು ತಿರುವನಂತಪುರ ನಡುವೆ 1 ಗಂಟೆ 30 ನಿಮಿಷದಲ್ಲಿ ಪ್ರಯಾಣ ಮಾಡಬಹುದು ಎಂದು ಹೇಳಿದರು.[ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ತಪ್ಪಿದ ಭಾರೀ ಅನಾಹುತ]

ಏ.12ರಿಂದ ಈ ಪ್ರಾದೇಶಿಕ ವಿಮಾನಯಾನ ಸಂಚಾರ ಆರಂಭವಾಗಲಿದೆ. ಅಂದು ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿನಿಂದ ಮೊದಲ ವಿಮಾನ ಹುಬ್ಬಳ್ಳಿಗೆ ಹಾರಾಟ ನಡೆಸಲಿದೆ ಎಂದು ಮಾಹಿತಿ ನೀಡಿದರು.

ಬೆಂಗಳೂರು-ಹುಬ್ಬಳ್ಳಿ ವೇಳಾಪಟ್ಟಿ : ಬೆಂಗಳೂರು-ಹುಬ್ಬಳ್ಳಿ ನಡುವೆ ಸಂಚರಿಸುವ ವಿಮಾನ ಪ್ರತಿದಿನ ಬೆಳಗ್ಗೆ 10.30ಕ್ಕೆ ಬೆಂಗಳೂರಿನಿಂದ ಹೊರಟು ಹುಬ್ಬಳ್ಳಿ ತಲುಪಲಿದೆ. ಹುಬ್ಬಳ್ಳಿಯಿಂದ ಮಧ್ಯಾಹ್ನ 12.30ಕ್ಕೆ ಹೊರಟು ಬೆಂಗಳೂರಿಗೆ ವಾಪಸ್ ಆಗಲಿದೆ.

ಸ್ಪೈಸ್ ಜೆಟ್ ಹಾರಾಟವಿಲ್ಲ : ಅಕ್ಟೋಬರ್ 2015ರ ತನಕ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ವಿಮಾನಯಾನ ಸೇವೆ ನೀಡುವುದಿಲ್ಲ ಎಂದು ಸ್ಪೈಸ್‌ಜೆಟ್ ಕೆಲವು ದಿನಗಳ ಹಿಂದೆ ಹೇಳಿತ್ತು. ಮಾ.8ರ ಭಾನುವಾರ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸ್ಪೈಸ್‌ಜೆಟ್ ವಿಮಾನ ಲ್ಯಾಂಡ್ ಆಗುವ ವೇಳೆ ಅಪಘಾತ ಸಂಭವಿಸಿತ್ತು. ಆನಂತರ ವಿಮಾನ ಸೇವೆ ರದ್ದುಗೊಳಿಸಲಾಗಿತ್ತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+