ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟ್ ವಿಚಾರದಲ್ಲಿ ಮತ್ತೆ ವಿವಾದ
ಧಾರವಾಡ, ಜನವರಿ 6: ವಿದ್ಯಾಕಾಶಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಸದಾ ಒಂದಿಲ್ಲಾ ಒಂದು ವಿವಾದಗಳಿಂದಲೇ ಹೆಚ್ಚು ಸುದ್ದಿಯಲ್ಲಿರುತ್ತದೆ. ಹಗರಣ, ಕೆಲವೊಮ್ಮೆ ಅಕ್ರಮ, ಮತ್ತೆ ಕೆಲವೊಮ್ಮೆ ವಿದ್ಯಾರ್ಥಿಗಳಿಗೆ ಆಗುವ ಅನ್ಯಾಯ-ಹೀಗೆ ಯಾವುದಾದರೂ ಒಂದು ವಿಚಾರವಾಗಿ ಈ ವಿಶ್ವವಿದ್ಯಾಲಯ ವಿವಾದದಲ್ಲಿ ಇದ್ದೇ ಇರುತ್ತದೆ.
ಇಂಥವುಗಳ ನಡುವೆಯೇ ವಿಶ್ವವಿದ್ಯಾಲಯದಲ್ಲಿ ಇದೀಗ ಮತ್ತೊಂದು ವಿವಾದ ಎದ್ದಿದೆ. ಅದು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರ ನೇಮಕ ವಿಚಾರದಲ್ಲಿ.
ಇತ್ತೀಚಿಗಷ್ಟೇ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಆರು ಜನ ಸಿಂಡಿಕೇಟ್ ಸದಸ್ಯರನ್ನು ನಾಮ ನಿರ್ದೇಶನಗೊಳಿಸಲಾಗಿತ್ತು. ಈ ನಾಮ ನಿರ್ದೇಶನದ ಹಿಂದೆ ರಾಜಕೀಯ ವಾಸನೆ ಇರುವುದನ್ನು ಧಾರವಾಡದ ಸಾಮಾಜಿಕ ಹೋರಾಟಗಾರ ನಾಗರಾಜ ಹೊಂಗಲ್ ಪತ್ತೆ ಹಚ್ಚಿದ್ದಾರೆ.

ಅಲ್ಲದೇ ಇವರ ನಾಮ ನಿರ್ದೇಶನ ಕೂಡ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಕಾಯ್ದೆ-2000 ಸ್ಪಷ್ಟ ಉಲ್ಲಂಘನೆಯಾಗಿದೆ ಅನ್ನುವುದು ನಾಗರಾಜ್ ಅವರ ಆರೋಪವಾಗಿದೆ. ಹೀಗಾಗಿ ಇವರ ನಾಮನಿರ್ದೇಶನವನ್ನೇ ರದ್ದುಪಡಿಸುವಂತೆ ಆಗ್ರಹಿಸಿ ಡಿಸಿಎಂ ಅಶ್ವತ್ಥ್ ನಾರಾಯಣ ಅವರಿಗೆ ನಾಗರಾಜ್ ಹೊಂಗಲ್ ಪತ್ರ ಬರೆದಿದ್ದಾರೆ.
ಇತ್ತೀಚಿಗಷ್ಟೇ ರಾಜ್ಯ ಸರಕಾರ ಜಯಪ್ರಕಾಶ ಬಾದಾಮಿ, ಪ್ರಕಾಶ ರಾಯ್ಕರ್, ಸ್ನೇಹಾ ಜೋಶಿ, ಶಾಂತನಗೌಡ ಜಕ್ಕನಗೌಡರ್, ಸುಧೀಂದ್ರ ದೇಶಪಾಂಡೆ, ರವಿಕುಮಾರ್ ಮಳಿಗೇರ್ ಅವರನ್ನು ನಾಮ ನಿರ್ದೇಶನಗೊಳಿಸಿ, ಆದೇಶ ಮಾಡಿತ್ತು. ಇದೇ ಆದೇಶದ ವಿರುದ್ಧ ಇದೀಗ ಸಾಮಾಜಿಕ ಹೋರಾಟಗಾರ ನಾಗರಾಜ ಹೊಂಗಲ್ ತಿರುಗಿ ಬಿದ್ದಿದ್ದಾರೆ.
ರಾಜ್ಯದಲ್ಲಿ ವಿಶ್ವವಿದ್ಯಾಲಯದಲ್ಲಿ ಏನೇ ಮಾಡಿದರೂ ರಾಜ್ಯ ವಿಶ್ವವಿದ್ಯಾಲಯ ಕಾಯ್ದೆ-2000 ರ ಅಡಿಯಲ್ಲಿ ಮಾಡಬೇಕು. ಆದರೆ ಈ ನಾಮನಿರ್ದೇಶನದ ವೇಳೆ ಇದರಲ್ಲಿರುವ ಯಾವುದೇ ಅಂಶಗಳನ್ನು ಸರಕಾರ ಪಾಲಿಸಿಯೇ ಇಲ್ಲ. ಸರಕಾರ ನಿಯಮಾವಳಿಗಳನ್ನು ಉಲ್ಲಂಘಿಸಿ ಆರು ಜನ ಸದಸ್ಯರ ನಾಮಕರಣ ಮಾಡಿದೆ. ರಾಜ್ಯ ವಿಶ್ವವಿದ್ಯಾಲಯದ ಕಾಯ್ದೆ-2000 ಅಡಿಯಲ್ಲಿ ಸೆಕ್ಷನ್ 28 (1) ಜಿ ಪ್ರಕಾರ ಶಿಕ್ಷಣ ತಜ್ಞರು, ವಿವಿಧ ರಂಗಗಳ ಪದವೀಧರ ಪರಿಣಿತರನ್ನು ನಾಮಕರಣ ಮಾಡಬೇಕು.
ಆದರೆ ಇಂತಹ ಯಾವುದೇ ನಿಯಮಗಳು ಈ ಆರು ಸದಸ್ಯರಿಗೆ ಅನ್ವಯಿಸಿಯೇ ಇಲ್ಲ ಅನ್ನುವುದು ಸಾಮಾಜಿಕ ಹೋರಾಟಗಾರ ನಾಗರಾಜ ಅವರ ಆರೋಪ. ವಿಶ್ವವಿದ್ಯಾಲಯದ ಆಡಳಿತದಲ್ಲಿ ಸಿಂಡಿಕೇಟ್‌ನ ಪಾತ್ರ ಅತಿ ಪ್ರಮುಖವಾಗಿರುತ್ತದೆ. ಇಂತಹ ಸಂಸ್ಥೆಗೆ ನಾಮಕರಣದ ವಿಚಾರದಲ್ಲಿ ಸರಕಾರ ನಿಯಮಾನುಸಾರ ನಡೆದುಕೊಳ್ಳಬೇಕು. ಇಲ್ಲವಾದಲ್ಲಿ ಇದರ ಪರಿಣಾಮ ಒಟ್ಟಾರೆ ವಿದ್ಯಾರ್ಥಿಗಳ ಮೇಲೆ ಆಗುತ್ತದೆ ಅನ್ನುವುದು ನಾಗರಾಜ ಅವರ ವಾದವಾಗಿದೆ. ಆದರೆ ಇದಕ್ಕೆ ಕುಲಪತಿಗಳು ಹೇಳುವುದೇ ಬೇರೆ.
ಒಟ್ಟಾರೆ ನಾಮ ನಿರ್ದೇಶನಗಳಲ್ಲಿ ರಾಜಕೀಯ ಪ್ರಭಾವ ಎದ್ದು ಕಾಣುತ್ತಿದೆ ಅನ್ನುವುದು ನಾಗರಾಜ ಅವರ ಆರೋಪವಾಗಿದೆ. ವಿದ್ಯಾರ್ಥಿಗಳ ಕಲಿಕೆಯ ಗಮನದಲ್ಲಿಟ್ಟುಕೊಂಡು ಹೊಸ ಹೊಸ ವಿಚಾರಗಳನ್ನು ಚರ್ಚಿಸಲು ಸಿಂಡಿಕೇಟ್ ಮುಖ್ಯ ಆಗಿರುವುದರಿಂದ, ಈ ಸಿಂಡಿಕೇಟ್ ಸದಸ್ಯರು ಅಷ್ಟೇ ಮುಖ್ಯವಾಗಿರುತ್ತಾರೆ. ಹೀಗಾಗಿ ಯೋಗ್ಯರಿಗೆ ಸದಸ್ಯತ್ವ ನೀಡಬೇಕು ಅನ್ನೋದು ನಾಗರಾಜರ ಪತ್ರದಲ್ಲಿ ಉಲ್ಲೇಖವಾಗಿದೆ.
-
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಏಷ್ಯಾ ರಾಷ್ಟ್ರಗಳಲ್ಲಿ ಸುನಾಮಿ ಆತಂಕ, ಭಾರತದ ಮೇಲಾಗುವ ಪರಿಣಾಮವೇನು? -
Bengaluru House Rent: ಬೆಂಗಳೂರಿನ ಪ್ರೈಮ್ ಏರಿಯಾದಲ್ಲೂ ನಾನ್ವೆಜ್ ಪ್ರಿಯರಿಗೆ ಮನೆ ಸಿಗ್ತಿಲ್ಲ, ಸೋಷಿಯಲ್ ಮೀಡಿಯಾ ಚರ್ಚೆ -
Prakash Raj: ನಾಸ್ತಿಕನಾದರೂ ತಾಯಿಯ ನಂಬಿಕೆಗೆ ಗೌರವ ಕೊಟ್ಟು; ಕ್ರೈಸ್ತ ಧರ್ಮದ ಸಂಪ್ರದಾಯ ಪಾಲನೆ: ನಟ ಪ್ರಕಾಶ್ ರಾಜ್ -
Education: CBSE 9 ಮತ್ತು 10ನೇ ತರಗತಿಯ ಹೊಸ ಪಠ್ಯಕ್ರಮ ಇಂದು ಬಿಡುಗಡೆ -
ಮುಂದಿನ 2 ರಿಂದ 3 ವಾರಗಳಲ್ಲಿ ಇರಾನ್ ಮೇಲೆ ಅತ್ಯಂತ ಭೀಕರ ದಾಳಿ: ಟ್ರಂಪ್ ಎಚ್ಚರಿಕೆ -
ವಿದ್ಯಾರ್ಥಿಗಳ ಮೊಬೈಲ್ ಗೀಳಿಗೆ ಬ್ರೇಕ್: ಹೊಸ 'ಡಿಜಿಟಲ್ ನೀತಿ' ಪ್ರಕಟಿಸಿದ ಆರೋಗ್ಯ ಇಲಾಖೆ -
Raghav Chadha: ಸಂಸದ ರಾಘವ್ ಚಡ್ಡಾಗೆ ಶಾಕ್ ಕೊಟ್ಟ ಎಎಪಿ, ಬಿಜೆಪಿ ಸೇರಲಿದ್ದಾರೆಯೇ ಸ್ಟಾರ್ ರಾಜಕಾರಣಿ












Click it and Unblock the Notifications