ಹಾಸ್ಟೆಲ್ಗೆ ಅಪರಿಚಿತ ಯುವಕನ ಪ್ರವೇಶ, ಹುಡುಗಿಯರು ಕಂಗಾಲು

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ, ಜನವರಿ,19: ಸ್ಥಳೀಯ ಕಿಮ್ಸ್ ಆವರಣದಲ್ಲಿರುವ ಚೇತನಾ ಲೇಡಿಸ್ ಹಾಸ್ಟೆಲ್ ಗೋಡೆ ಹಾರಿ ಒಳಗೆ ಪ್ರವೇಶಿಸಲು ಯತ್ನಿಸಿದ ಯುವಕನೊಬ್ಬ ಸೆಕ್ಯೂರಿಟಿ ಗಾರ್ಡ್ ಗೆ ಕಚ್ಚಿ ಪರಾರಿಯಾದ ಘಟನೆ ಸೋಮವಾರ ಮಧ್ಯರಾತ್ರಿ ಹುಬ್ಬಳ್ಳಿಯಲ್ಲಿ ನಡೆದಿದೆ.

ರಾತ್ರಿ ಹೊತ್ತಿನಲ್ಲಿ ಹಾಸ್ಟೆಲ್ ನ ಗೋಡೆ ಹಾರಿ ಒಳಗೆ ಪ್ರವೇಶಿಸಲು ಯುವಕನೋರ್ವ ಪ್ರಯತ್ನಿಸಿದಾಗ ಸೆಕ್ಯುರಿಟಿ ಗಾರ್ಡ್ ಶಂಕ್ರಪ್ಪ ತಡೆಯಲು ಯತ್ನಿಸಿದ್ದಾರೆ. ಆದರೆ ಯುವಕ ಗಾರ್ಡ್ ಕೈಗೆ ಕಚ್ಚಿ ಪರಾರಿಯಾಗಿದ್ದಾನೆ. ಈ ಘಟನೆ ವಿದ್ಯಾರ್ಥಿನಿಯರಲ್ಲಿ ಆತಂಕ ಮೂಡಿಸಿದೆ.[ಮಹಿಳಾ ದೌರ್ಜನ್ಯ ವಿರುದ್ದ ದನಿಯಾದ ವಾಮಾ ಬಲ್ದೋಟ]

Hubballi

ಹಾಸ್ಟೆಲ್ ಗೋಡೆ ಏರುತ್ತಿದ್ದ ಯುವಕ ಶಂಕ್ರಪ್ಪ ಎಂಬ ಸೆಕ್ಯುರಿಟಿ ಗಾರ್ಡ್ ಕಣ್ಣಿಗೆ ಬಿದ್ದಿದ್ದಾನೆ. ಆಗ ಆತನನ್ನು ತಡೆಯಲು ಪ್ರಯತ್ನಿಸಿದ್ದಾನೆ. ಆಗ ಯುವಕ ಗಾರ್ಡ್ ಗೆ ಕಚ್ಚಿದ ಪರಿಣಾಮ ಕೈ ಹಾಗೂ ಕಾಲುಗಳಿಗೆ ಗಾಯಗಳಾಗಿವೆ. ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾನೆ. ಘಟನೆ ಬಗ್ಗೆ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.[ಅತ್ತೆಯನ್ನು ಕೊಲ್ಲಲು ಯತ್ನಿಸಿದ ಸೊಸೆ ಬಂಧನ]

ಈ ಹಿಂದೆ ಇದೇ ಕಿಮ್ಸ್ ಆವರಣದಲ್ಲಿ ಯುವಕರ ಗುಂಪೊಂದು ಸೆಕ್ಯುರಿಟಿ ಗಾರ್ಡ್ ಗಳ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿತ್ತು. ಜೊತೆಗೆ ಕೆಲವು ದಿನಗಳ ಹಿಂದೆ ಶಂಕ್ರಪ್ಪ ಅವರ ಮೇಲೆ ಕಲ್ಲೆಸೆದು ಯುವಕನೋರ್ವ ಓಡಿ ಹೋಗಿದ್ದನು. ಅಷ್ಟರಲ್ಲೇ ಈ ಘಟನೆ ಸಂಭವಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A unknown boy came to Chetana ladies hostel and onslaught on the security guard Shankarappa in Hubballi on Monday midnight.
Please Wait while comments are loading...