ಧಾರವಾಡ ಐಐಟಿ ಕ್ಯಾಂಪಸ್‌ಗೆ 470 ಎಕರೆ ಜಾಗ

Posted By:
Subscribe to Oneindia Kannada

ಧಾರವಾಡ, ಜುಲೈ 14 : ಧಾರವಾಡದಲ್ಲಿ ಸ್ಥಾಪನೆಯಾಗುತ್ತಿರುವ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ)ಯ ಶಾಶ್ವತ ಕ್ಯಾಂಪಸ್‌ಗೆ 470 ಎಕರೆ ಜಮೀನು ನೀಡಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ತಾತ್ಕಾಲಿಕ ಕ್ಯಾಂಪಸ್‌ನಲ್ಲಿ ಜುಲೈ 31ರಂದು ಐಐಟಿ ತರಗತಿಗಳು ಆರಂಭಗೊಳ್ಳುವ ನಿರೀಕ್ಷೆ ಇದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಧಾರವಾಡದ ಐಐಟಿ ಕ್ಯಾಂಪಸ್‌ಗೆ ಕೆಲಗೇರಿ ಗ್ರಾಮದಲ್ಲಿ 470 ಎಕರೆ ಜಮೀನು ನೀಡಲು ಒಪ್ಪಿಗೆ ನೀಡಲಾಯಿತು. ಈ ಭೂಮಿಯ ಮೌಲ್ಯ ಸುಮಾರು 120 ರಿಂದ 150 ಕೋಟಿಗಳಾಗಿವೆ. ಸದರಿ ಮೊತ್ತವನ್ನು ಹಣಕಾಸು ಇಲಾಖೆ ಕೆಐಎಡಿಬಿಗೆ ನೀಡಲಿದೆ.[ಜುಲೈ 31ಕ್ಕೆ ಧಾರವಾಡ ಐಐಟಿ ಲೋಕಾರ್ಪಣೆ?]

iit

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಮಮ್ಮಿಗಟ್ಟಿ ಕೈಗಾರಿಕೆ ಪ್ರದೇಶದ ಪಕ್ಕದಲ್ಲಿ 470 ಎಕರೆ ತನ್ನ ವಶಕ್ಕೆ ಪಡೆದುಕೊಂಡಿತ್ತು. ಈ ಭೂಮಿಯನ್ನು ಉನ್ನತ ಶಿಕ್ಷಣ ಇಲಾಖೆ ಮೂಲಕ ಐಐಟಿಗೆ ಹಸ್ತಾಂತರ ಮಾಡಲಾಗುತ್ತದೆ.

ತಾತ್ಕಾಲಿಕ ಕ್ಯಾಂಪಸ್ : ಧಾರವಾಡದ ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ (ವಾಲ್ಮಿ) ಕಟ್ಟಡದಲ್ಲಿ ಐಐಟಿ ತಾತ್ಕಾಲಿಕ ಕ್ಯಾಂಪಸ್ ನಿರ್ಮಾಣವಾಗಿದೆ. ಐಐಟಿ ಸ್ಥಾಪನೆಗೆ ಬೇಕಾದ ಅಗತ್ಯ ವ್ಯವಸ್ಥೆಗಳು ಆಗಿದ್ದು, ಕಾಮಗಾರಿಗಳೆಲ್ಲವೂ ಪೂರ್ಣಗೊಂಡಿವೆ.[ಐಐಟಿ ಕೋರ್ಸ್ ಶುಲ್ಕ 2 ಲಕ್ಷ ರು ತನಕ ಏರಿಕೆ!]

ಈ ವರ್ಷ 120 ವಿದ್ಯಾರ್ಥಿಗಳಿಗೆ ಐಐಟಿಗೆ ಪ್ರವೇಶ ನೀಡಲಾಗಿದೆ. ಕಂಪ್ಯೂಟರ್ ಸೈನ್ಸ್, ಮೆಕಾನಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಕೋರ್ಸ್‌ ತರಗತಿಗಳು ಈ ವರ್ಷ ಆರಂಭವಾಗಲಿವೆ. ಐವರು ವಿದ್ಯಾರ್ಥಿನಿಯರು ಸೇರಿ 120 ವಿದ್ಯಾರ್ಥಿಗಳು ಐಐಟಿಗೆ ಪ್ರವೇಶ ಪಡೆದಿದ್ದು, ಧಾರವಾಡದ ಐವರು ವಿದ್ಯಾರ್ಥಿಗಳಿಗೆ ತಮ್ಮ ಊರಿನಲ್ಲಿಯೇ ಐಐಟಿಯಲ್ಲಿ ವ್ಯಾಸಂಗ ಮಾಡುವ ಅವಕಾಶ ಸಿಕ್ಕಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In a cabinet meeting Karnataka government decided to allot 470 acres of land for Indian Institute of Technology (IIT) Dharwad.
Please Wait while comments are loading...