Get Updates
Get notified of breaking news, exclusive insights, and must-see stories!

ಧಾರವಾಡ-ಬೆಳಗಾವಿ ರೈಲು ಮಾರ್ಗಕ್ಕೆ 335 ಹೆಕ್ಟೇರ್ ಭೂ ಸ್ವಾಧೀನ

ಧಾರವಾಡ, ಅಕ್ಟೋಬರ್ 19 : ಧಾರವಾಡ-ಬೆಳಗಾವಿ ನೇರ ರೈಲು ಮಾರ್ಗ ಯೋಜನೆಗೆ ರೈಲ್ವೆ ಇಲಾಖೆ, ರಾಜ್ಯ ಸರ್ಕಾರ ಈಗಾಗಲೇ ಒಪ್ಪಿಗೆ ನೀಡಿವೆ. ಈ ಯೋಜನೆಗೆ 335 ಹೆಕ್ಟೇರ್ ಭೂಮಿ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ.

73 ಕಿ. ಮೀ. ಉದ್ದದ ಧಾರವಾಡ-ಬೆಳಗಾವಿ ಏಕಪಥ ರೈಲು ಮಾರ್ಗದ ಯೋಜನಾ ವೆಚ್ಚ ಸುಮಾರು 927.40 ಕೋಟಿ ರೂ.ಗಳು. ನೂತನ ಮಾರ್ಗದ ಕಾಮಗಾರಿ ಕೈಗೊಳ್ಳಲು ಈಗಾಗಲೇ ಟೆಂಡರ್ ಕರೆಯಲಾಗಿದೆ.

ನೈಋತ್ಯ ರೈಲ್ವೆ ಈ ರೈಲು ಮಾರ್ಗ ನಿರ್ಮಾಣಕ್ಕೆ 335 ಹೆಕ್ಟೇರ್ ಭೂಮಿ ಅಗತ್ಯವಿದೆ ಎಂದು ಅಂದಾಜಿಸಿದೆ. ಈ ಕುರಿತು ವರದಿ ತಯಾರು ಮಾಡಿದ್ದು, ಭೂಮಿಯನ್ನು ಹಸ್ತಾಂತರ ಮಾಡಲು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ ಮಾಡಲಿದೆ.

335 Hectares Land For Dharwad Belagavi Direct Railway Line

ಭೂಮಿ ಹಸ್ತಾಂತರಗೊಂಡರೆ 2 ವರ್ಷಗಳಲ್ಲಿ ಯೋಜನೆಯನ್ನು ಪೂರ್ಣಗೊಳಿಸುವ ಗುರಿಯನ್ನು ಹೊಂದಲಾಗಿದೆ. ರೈಲ್ವೆ ಇಲಾಖೆ ಭೂಮಿಯನ್ನು ಗುರುತಿಸುವ ಕಾರ್ಯವನ್ನು ಅಂತಿಮಗೊಳಿಸಿದ್ದು, ಪ್ರಸ್ತಾವನೆ ಸಿದ್ಧಪಡಿಸುತ್ತಿದೆ.

ಧಾರವಾಡ-ಬೆಳಗಾವಿ ನೇರ ರೈಲು ಮಾರ್ಗ ಕೇಂದ್ರ ರೈಲ್ವೆ ಸಚಿವರಾಗಿದ್ದ ದಿ. ದಿವಂಗತ ಸುರೇಶ್ ಅಂಗಡಿ ಅವರ ಕನಸು. ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ಸಹ ಇದಕ್ಕೆ ಅಗತ್ಯ ಸಹಕಾರ ನೀಡಿದ್ದರು.

ಕೇವಲ 1 ತಾಸು ಪ್ರಯಾಣ : ಧಾರವಾಡ ಮತ್ತು ಬೆಳಗಾವಿ ನಡುವಿನ ನೇರ ರೈಲು ಮಾರ್ಗ ನಿರ್ಮಾಣವಾದರೆ ಕೇವಲ 1 ತಾಸಿನಲ್ಲಿ ಉಭಯ ನಗರಗಳ ನಡುವೆ ಸಂಚಾರ ನಡೆಸಬಹುದಾಗಿದೆ.

ಪ್ರಸ್ತುತ ಧಾರವಾಡದಿಂದ ಬೆಳಗಾವಿಗೆ ಹೋಗಲು ಲೋಂಡಾ ಮೂಲಕ ಸಂಚಾರ ನಡೆಸಬೇಕು. 130 ಕಿ. ಮೀ. ಪ್ರಯಾಣಕ್ಕೆ 3 ಗಂಟೆಗಳು ಬೇಕು. ಆದರೆ, ನೂತನ ಮಾರ್ಗ ಕಿತ್ತೂರು ಮೂಲಕ ಧಾರವಾಡಕ್ಕೆ ಸಂಪರ್ಕ ಕಲ್ಪಿಸಲಿದೆ.

ಈ ಮಾರ್ಗ ಪೂರ್ಣಗೊಂಡರೆ ಧಾರವಾಡ-ಹುಬ್ಬಳ್ಳಿ-ಬೆಳಗಾವಿ ನಡುವೆ ಸಂಚಾರ ನಡೆಸುವ ಜನರಿಗೆ ಅನುಕೂಲವಾಗಲಿದೆ. ಮೂರು ನಗರಗಳ ನಡುವೆ ಸರಕುಗಳ ಸಾಗಣೆಗೆಗೂ ಸಹಾಯಕವಾಗಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+