• search
 • Live TV
ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದೇಶದ ಆಪತ್ತು ತಪ್ಪಿಸಿ ಗೌರವ ಪಡೆದಿದ್ದ ವೀರಯೋಧ ನಿವೃತ್ತಿ

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಆಗಸ್ಟ್ 02; ಬರೋಬ್ಬರಿ 21 ವರ್ಷಗಳ ಕಾಲ ದೇಶಕ್ಕಾಗಿ ಸೇವೆ ಸಲ್ಲಿಸಿದ ಯೋಧ. ಪ್ರಾಣದ ಹಂಗು ತೊರೆದು ಕೆಲವು ಬಾರಿ ಆಪತ್ತು ತಪ್ಪಿಸಿದ ಮಹಾ ಚತುರ. ಪಾಕಿಸ್ತಾನದ ಇಬ್ಬರನ್ನು ಕೊಂದು ಅಪಾಯ ತಪ್ಪಿಸಿದ್ದ ಧೀರ. ನೆಲದಲ್ಲಿ ಹೂತಿಟ್ಟಿದ್ದ ಬಾಂಬ್‌ಗಳನ್ನು ಪತ್ತೆ ಹಚ್ಚಿ ಹೆಗ್ಗಳಿಕೆ ಪಡೆದಿದ್ದ ಸೈನಿಕ ದೇಶ ಸೇವೆಯಿಂದ ನಿವೃತ್ತರಾದರು.

ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುವಾಗ ಹಲವಾರು ಸಾಧನೆಗಳನ್ನು ಮಾಡಿದ್ದ ದಾವಣಗೆರೆ ತಾಲೂಕಿನ ತೋಳಹುಣಸೆಯ ಹೆಚ್. ಸುರೇಶ್ ರಾವ್ ಘೋರ್ಪಡೆ ನಿವೃತ್ತರಾಗಿದ್ದಾರೆ. ಎರಡು ದಶಕಗಳ ಕಾಲ ದೇಶಸೇವೆ ಮಾಡಿದ ವೀರ ಯೋಧ ನಿವೃತ್ತರಾಗಿ ಈಗ ತವರಿಗೆ ಮರಳಿದ್ದಾರೆ. ರೈಲ್ವೆ ನಿಲ್ದಾಣಕ್ಕೆ ಬಂದ ಸುರೇಶ್‌ರನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲಾಗಿದೆ.

ವಾಯುಸೇನೆಯಲ್ಲಿದ್ದ ಕರ್ನಾಟಕದ ಯೋಧ ಏಕನಾಥ ಶೆಟ್ಟಿ ಕಣ್ಮರೆಯಾಗಿ 5 ವರ್ಷ ವಾಯುಸೇನೆಯಲ್ಲಿದ್ದ ಕರ್ನಾಟಕದ ಯೋಧ ಏಕನಾಥ ಶೆಟ್ಟಿ ಕಣ್ಮರೆಯಾಗಿ 5 ವರ್ಷ

ತೋಳಹುಣಸೆಯ ಹನುಮಂತಪ್ಪ ಹಾಗೂ ನಾಗಮ್ಮ ಇಟಗಿ ದಂಪತಿಯ ಪುತ್ರ ಸುರೇಶ್. 1979ರ ಜೂನ್ 4ರಂದು ಜನಿಸಿದರು. 2000ನೇ ಇಸವಿಯಲ್ಲಿ ಶಿವಮೊಗ್ಗದಲ್ಲಿ ನಡೆದ ಸೇನಾ ನೇಮಕಾತಿಯಲ್ಲಿ ಆಯ್ಕೆಯಾಗುವ ಮೂಲಕ ದೇಶ ಸೇವೆಗೆ ತೆರಳಿದ್ದರು.

Fact Check: ರೈತ ತಂದೆಯ ಭೇಟಿಗಾಗಿ ದೆಹಲಿ ಗಡಿಗೆ ಯೋಧ ಧಾವಿಸಿದ್ದು ನಿಜವೇ?Fact Check: ರೈತ ತಂದೆಯ ಭೇಟಿಗಾಗಿ ದೆಹಲಿ ಗಡಿಗೆ ಯೋಧ ಧಾವಿಸಿದ್ದು ನಿಜವೇ?

ಭಾರತೀಯ ಗಡಿ ಭದ್ರತಾ ಪಡೆಗೆ ಸೇರಿದ್ದ ಸುರೇಶ್ ರಾವ್ ಘೋರ್ಪಡೆ 1 ವರ್ಷದ ತರಬೇತಿ ಪೂರ್ಣಗೊಳಿಸಿ ಭಾರತ್ ಲೈನ್ ಆಫ್ ಕಂಟ್ರೋಲ್‌ಗೆ ಕರ್ತವ್ಯಕ್ಕೆ ಸೇರಿದ್ದರು. ಆ ಬಳಿಕ ಜಮ್ಮು ಕಾಶ್ಮೀರದ ರಜೋರಿಗೆ ಸೇರ್ಪಡೆಯಾದರು. ಸೆಪ್ಟಂಬರ್ ತಿಂಗಳ 2002ನೇ ಇಸವಿಯಲ್ಲಿ ಪಾಕಿಸ್ತಾನದ ಉಗ್ರರು ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿ ಒಳನುಸುಳುವ ಯತ್ನದಲ್ಲಿದ್ದರು. ಆಗ ಹೆದರದೇ ಇಬ್ಬರು ಉಗ್ರರಿಗೆ ಗುಂಡಿಕ್ಕಿ ಕೊಂದು ಹಾಕುವ ಮೂಲಕ ಭಾರತಕ್ಕೆ ಎದುರಾಗಬಹುದಾಗಿದ್ದ ಆಪತ್ತು ತಪ್ಪಿಸಿದ್ದರು.

ಕೋಲಾರ; ಸಕಲ ಗೌರವದಿಂದ ಯೋಧ ಮಂಜುನಾಥ ಅಂತ್ಯಕ್ರಿಯೆ ಕೋಲಾರ; ಸಕಲ ಗೌರವದಿಂದ ಯೋಧ ಮಂಜುನಾಥ ಅಂತ್ಯಕ್ರಿಯೆ

ಉಗ್ರ, ನಕ್ಸಲ್ ನಿಗ್ರಹದಲ್ಲಿ ಕಾರ್ಯ

ಉಗ್ರ, ನಕ್ಸಲ್ ನಿಗ್ರಹದಲ್ಲಿ ಕಾರ್ಯ

ಸುರೇಶ್ ರಾವ್ ಘೋರ್ಪಡೆ ಜಮ್ಮು ಕಾಶ್ಮೀರದ ಅಂತಾರಾಷ್ಟ್ರೀಯ ಗಡಿಯಲ್ಲಿ 2003ರಿಂದ 2006ರವರೆಗೆ ಕೆಲಸ ಮಾಡಿದ್ದಾರೆ. ಬಳಿಕ 2009ರವರೆಗೆ ಮೂರು ವರ್ಷ ರಾಜಸ್ತಾನದ ಬಾರ್ಮರ್ ಐಬಿಯಲ್ಲಿ ಸೇವೆ ಸಲ್ಲಿಸಿದ್ದರು‌. ನಂತರ ಛತ್ತೀಸ್‌ಗಢ್‌ನಲ್ಲಿ ನ್ಸಕಲ್ ನಿಗ್ರಹ ಪಡೆಯಲ್ಲಿಯೂ ತಮ್ಮದೇ ಛಾಪು ಮೂಡಿಸಿದರು. ಈ ವೇಳೆ ನಕ್ಸಲರು ನೆಲದಲ್ಲಿ ಹೂತಿಟ್ಟಿದ್ದ ಬಾಂಬ್‌ಗಳನ್ನು ಯಾವುದೇ ಆಯುಧ ಇಲ್ಲದಿದ್ದರೂ ಪತ್ತೆ ಹಚ್ಚಿದ ಕೀರ್ತಿಗೆ ಭಾಜನರಾಗಿದ್ದರು. ನಕ್ಸಲ್ ಎನ್ ಕೌಂಟರ್ ಮಾಡಿದ್ದಕ್ಕಾಗಿ ಬಿಎಸ್ಎಫ್‌ನ ಅತ್ಯುನ್ನತ ಪದವಿ ಡೈರೆಕ್ಟರ್ ಜನರಲ್ ರೆಕಮಂಡೇಶನ್ ರೋಲ್ ನೀಡಿ ಗೌರವಿಸಲಾಗಿತ್ತು.

ಎಲ್‌ಓಸಿಯಲ್ಲಿ ಕಾರ್ಯ ನಿರ್ವಹಣೆ

ಎಲ್‌ಓಸಿಯಲ್ಲಿ ಕಾರ್ಯ ನಿರ್ವಹಣೆ

ಉದನ್ ಪುರದಲ್ಲಿ ಭಾರತೀಯ ಸೈನಿಕರು ರಸ್ತೆ ದಾಟುವ ವೇಳೆ ಬೆಟಾಲಿಯನ್‌ನ ಬಾಂಬ್ ಕಳೆದು ಹೋಗಿದ್ದವು. ಆಗ ತಮ್ಮ ಚಾಕಚಕ್ಯತೆಯಿಂದ ಬಾಂಬ್ ಗಳನ್ನು ಹುಡುಕಿಕೊಟ್ಟ ಯೋಧ ಎಂಬ ಖ್ಯಾತಿಗೂ ಸುರೇಶ್ ರಾವ್ ಘೋರ್ಪಡೆ ಪಾತ್ರರಾಗಿದ್ದಾರೆ.

ಹವಾಲ್ದಾರ್ ಆಗಿ ಪ್ರಮೋಷನ್

ಹವಾಲ್ದಾರ್ ಆಗಿ ಪ್ರಮೋಷನ್

2015ರವರೆಗೆ ಮೂರು ವರ್ಷ ಬಿಸ್ಕಿನ್ ಐಬಿಯಲ್ಲಿ ಕೆಲಸ. ಮತ್ತೆ ಜಮ್ಮು ಕಾಶ್ಮೀರದ ರಜೋರಿಗೆ ಎಲ್‌ಒಸಿಗೆ ನೇಮಕವಾದರು. ಬಳಿಕ ಮೂರೂವರೆ ವರ್ಷ ಸೈನ್ಯಕ್ಕೆ ಸೇರ್ಪಡೆಗೊಂಡವರಿಗೆ ಟ್ರೈನಿಂಗ್ ನೀಡುವ ಮೂಲಕ ಸಾವಿರಾರು ಸೈನಿಕರಿಗೆ ಸಲಹೆ ಹೇಳಿಕೊಡುವ ಮೂಲಕ ಪ್ರೀತಿಯ ಮೇಸ್ಟ್ರಾಗಿ ಎಲ್ಲರ ಗಮನ ಸೆಳೆದಿದ್ದರು.

2019ರಿಂದ ಶ್ರೀನಗರದಲ್ಲಿ ವಿಐಪಿ ಕರ್ತವ್ಯಕ್ಕೆ ನಿಯುಕ್ತಿಗೊಂಡಿದ್ದ ಸುರೇಶ್ ಅವರ ಸೇವೆ ಪರಿಗಣಿಸಿ ಹವಾಲ್ದಾರ್ ಆಗಿ ಪ್ರಮೋಷನ್ ಕೊಡಲಾಗಿತ್ತು. ಈಗ ನಿವೃತ್ತರಾಗಿ ಊರಿಗೆ ಬಂದಿರುವ ವೀರ ಸೇನಾನಿಯನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲಾಗಿದೆ.

ಡಿಸಿ, ಎಸ್ಪಿಯಿಂದ ಅಭಿನಂದನೆ

ಡಿಸಿ, ಎಸ್ಪಿಯಿಂದ ಅಭಿನಂದನೆ

ದಾವಣಗೆರೆಗೆ ಆಗಮಿಸಿದ ಸುರೇಶ್‌ರನ್ನು ಜಿಲ್ಲಾಡಳಿತದ ವತಿಯಿಂದ ಅಭಿನಂದಿಸಲಾಯಿತು‌. ಡಿಸಿ ಮಹಾಂತೇಶ್ ಆರ್. ಬೀಳಗಿ, ಎಸ್ಪಿ ರಿಷ್ಯಂತ್, ಸ್ನೇಹಿತರು, ಸಂಬಂಧಿಕರು, ಕುಟುಂಬದವರು, ಜನರು ಅಭಿನಂದಿಸಿದರು. ವೀರ ಯೋಧನ ಜೊತೆ ಸೆಲ್ಫಿ ತೆಗೆದುಕೊಳ್ಳಲು ಜನರು ಮುಗಿಬಿದ್ದರು.

ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಸುರೇಶ್ ರಾವ್ ಘೋರ್ಪಡೆ, "ನಾನು ಸೇನೆಯಲ್ಲಿ ಕೆಲಸ ಮಾಡಿದ್ದು ಪುಣ್ಯ. ದೇಶ ಸೇವೆಗೆ ಜೀವನ ಮುಡುಪಾಗಿಟ್ಟಿದ್ದು ಸಾರ್ಥಕವಾಯ್ತು. ಜಿಲ್ಲಾಡಳಿತ ಅಭಿನಂದಿಸಿದ್ದು ತುಂಬಾ ಖುಷಿ ನೀಡಿದೆ" ಎಂದು ಹೇಳಿದರು.

   ಟೀಮ್ ಇಂಡಿಯಾ ಕಳಪೆ ಆಟಕ್ಕೆ ಫುಲ್‌ ಗರಂ ಆದ ವೀರೇಂದ್ರ ಸೆಹ್ವಾಗ್ | Oneindia Kannada
   English summary
   Davanagere district Tolahunase based H. Suresh Rao Ghorpade retired after served in Indian army of 21 years. Davanagere district administration and family members welcomed suresh in railway station.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X