ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?
 • search

ಹರಿಹರ: ಉಕ್ಕಡಗಾತ್ರಿ ಅಜ್ಜಯ್ಯನ ಜಾತ್ರೆಗೆ ಬನ್ನಿ

By Mahesh
Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ದಾವಣಗೆರೆ, ಫೆಬ್ರವರಿ 14: ಹರಿಹರ ತಾಲೂಕಿನ ಮಲೆಬೆನ್ನೂರು ಪಟ್ಟಣದ ಉಕ್ಕಡಗಾತ್ರಿಯ ಪವಾಡ ಪುರುಷ ಅಜ್ಜಯನ ಮಹಾಶಿವರಾತ್ರಿ ಮಹೋತ್ಸವ ನಾಳೆ(ಫೆಬ್ರವರಿ 15) ಆರಂಭವಾಗಲಿದೆ. ಒಂದು ವಾರ ಕಾಲಗಳ ವಿಜೃಂಭಣೆಯಿಂದ ಜರುಗಲಿದೆ.

  ಕರಿಬಸವೇಶ್ವರ ಗದ್ದುಗೆಯ ಜಾತ್ರಾ ಮಹೋತ್ಸವ ಸಮಸ್ತ ಭಕ್ತಾದಿಗಳಿಗೆ ಭಕ್ತಿ ಪೂರ್ವಕ ಸುಸ್ವಾಗತವನ್ನು ಕೋರಲಾಗಿದೆ. ಉಕ್ಕಡಗಾತ್ರಿಯ ಶ್ರೀ ಕರಿಬಸವೇಶ್ವರ ಗದ್ದುಗೆಯ ಮಹಾ ಶಿವರಾತ್ರಿಯ ಮಹೋತ್ಸವವು ಪ್ರತಿ ವರ್ಷದಂತೆ ಈ ವರ್ಷವೂ ಶ್ರೀ ಶಾಲಿವಾಹನ ಶಕೆ 1938 ನೇ

  "ಹೇವಿಳಂಬಿ ಸಂವತ್ಸರ" ಉತ್ತರಾಯಣ ಶಿಶಿರ ಋತು ಮಾಘ ಮಾಸ ಬಹುಳ ಶಿವರಾತ್ರಿ ಅಮಾವಾಸ್ಯೆಯಿಂದ ಫಾಲ್ಗುಣ ಶುದ್ಧ ಅಷ್ಟಮಿಯವರೆಗೆ ಜರುಗಲಿದೆ.

  Ukkadagatri Karibasaveshwaraswamyeay Ajjayya Temple Jatra From Feb 15

  ಗದ್ದುಗೆಯ ಪೂಜೆ, ಜಾಗರಣೆ ಆಯೋಜಿಸಲಾಗಿದ್ದು, ಸಕಲ ಭಕ್ತಾದಿಗಳು ಉಕ್ಕಡಗಾತ್ರಿಯ ಅಜ್ಜಯ್ಯನ ಗದ್ದಿಗೆಯ ಮಹಾಶಿವರಾತ್ರಿಯ ರಥೋತ್ಸವಕ್ಕೆ ಆಗಮಿಸಿ ಚೈತನ್ಯ ಸ್ವರೂಪರು, ಸರ್ವ ಸಂಕಷ್ಟಗಳ ನಿವಾರಕರಾದ ಶ್ರೀ ಗುರು ಕರಿಬಸವೇಶ್ವರ ಗದ್ದುಗೆಯ ಕೃಪಾಶೀರ್ವಾದ ಪಡೆದು ಪುನೀತರಾಗಬೇಕಾಗಿ ಕೋರಿಕೆ.

  ಕಾರ್ಯಕ್ರಮಗಳು :
  * ದಿನಾಂಕ : 15.02.2018ನೇ ಗುರುವಾರ : ಬೆಳಿಗ್ಗೆ 8 ಗಂಟೆಗೆ ಶ್ರೀ ಕರಿಬಸವೇಶ್ವರ ಗದ್ದುಗೆಯ ಪೂಜೆ, ಮತ್ತು ನಂದಿ ಧ್ವಜಾರೋಹಣ, ಅಂದೇ ರಾತ್ರಿ ಜಾಗರಣೆ ಮತ್ತು ಭಜನೆ ಹಾಗೂ ಕೀರ್ತನೆ.
  * ದಿನಾಂಕ : 16.02.2018ನೇ ಶುಕ್ರವಾರ : ಬೆಳಿಗ್ಗೆ 8.00 ಗಂಟೆಗೆ
  ಶ್ರೀ ವೃಷಭಪುರಿ ಸಂಸ್ಥಾನ 1108 ಜಗದ್ಗುರು ಶ್ರೀ ಶ್ರೀ ಸಿದ್ಧರಾಮೇಶ್ವರ ದೇಶೀಕೇಂದ್ರ ಮಹಾಸ್ವಾಮಿಗಳು, ನಂದಿಗುಡಿ, ಇವರ ಅಮೃತ ಹಸ್ತದಿಂದ ರಥೋತ್ಸವದ ಮಹಾಪೂಜೆ ನಂತರ ಸಕಲ ವೈಭವಗಳೊಂದಿಗೆ ರಥೋತ್ಸವ ಪ್ರಾರಂಭ.
  * ದಿನಾಂಕ : 17.02.2018ನೇ ಶನಿವಾರ : ಜವಳ, ಹರಕೆ ಮತ್ತು ತುಲಾಭಾರ.
  * ದಿನಾಂಕ : 18.02.2018ನೇ ಭಾನುವಾರ : ಕಾಣಿಕೆ, ಜವಳ, ತುಲಾಭಾರ, ಕುಸ್ತಿಗಳು.
  * ದಿನಾಂಕ : 19.02.2018ನೇ ಸೋಮವಾರ : ಕಾಣಿಕೆ ಒಪ್ಪಿಸುವುದು ಮತ್ತು ಕುಸ್ತಿಗಳು.
  * ದಿನಾಂಕ : 20.02.2018ನೇ ಮಂಗಳವಾರ : ಪೂಜೆಯ ನಂತರ ಫಳಾರ ಹಾಕಿಸುವುದು
  * ದಿನಾಂಕ :21.02.2018ನೇ ಬುಧವಾರ : ಬೆ. 10ಕ್ಕೆ ಶ್ರೀ ಸ್ವಾಮಿಯ ಬೆಳ್ಳಿ ರಥೋತ್ಸವ ರಾತ್ರಿ 8ಕ್ಕೆ ಅಜ್ಜಯ್ಯನ ಪಾಲಿಕೋತ್ಸವ
  * ದಿನಾಂಕ : 22.02.2018ನೇ ಗುರುವಾರ : ಅಜ್ಜಯ್ಯನ ಫಳಾರ ಹಂಚುವುದು

  ಎಂದು ಶ್ರೀಕರಿಬಸವೇಶ್ವರ ಗದ್ದುಗೆ ಟ್ರಸ್ಟ್ ಕಮಿಟಿ, ಊರ ಪ್ರಮುಖರು ಹಾಗೂ ಊರ ನಾಗರಿಕರು ಕೋರಿದ್ದಾರೆ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Ukkadagatri Sri Karibasaveshwaraswamy (Ajjayya) temple is in Harihara taluk, Davangere district, Karnataka. Karibasaveshwaraswamy lived about 400 years ago. Annual jatre, Rathotsav will be held from for a week starting from Feb 15.2018.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more