• search
  • Live TV
ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೈಕ್ ಅಪಘಾತದಲ್ಲಿ ಇಬ್ಬರ ಸಾವು; ರಸ್ತೆಯಲ್ಲೇ ಬಿದ್ದು ನರಳಿದ ಗಾಯಾಳು

By ದಾವಣಗೆರೆ ಪ್ರತಿನಿಧಿ
|

ದಾವಣಗೆರೆ, ಡಿಸೆಂಬರ್ 12: ಬೈಕ್ ಗಳ ನಡುವೆ ಡಿಕ್ಕಿ ಸಂಭವಿಸಿ, ಬಳಿಕ ಹಿಂದಿನಿಂದ ಬಂದ ಲಾರಿಯೊಂದು ಅವರ ಮೇಲೆ ಹರಿದ ಪರಿಣಾಮ ಇಬ್ಬರು ಯುವಕರು ಸಾವನ್ನಪ್ಪಿರುವ ಘಟನೆ ದಾವಣಗೆರೆಯ ತ್ಯಾವಣಿಗೆ ಸಮೀಪದ ಕದ್ರನಹಳ್ಳಿ ಕ್ರಾಸ್ ಬಳಿ‌ ನಡೆದಿದೆ.

ಮಿಯಾಪುರ ಗ್ರಾಮದ ಅಂಜಿನಪ್ಪ (29) ಮತ್ತು ಮನೋಜ್ (19) ಸಾವನ್ನಪ್ಪಿದ ದುರ್ದೈವಿಗಳು. ದಾವಣಗೆರೆಯಿಂದ ತ್ಯಾವಣಿಗೆ ಕಡೆಗೆ ಬೈಕಲ್ಲಿ ಹೋಗುತ್ತಿದ್ದಾಗ ಎದುರಿನಿಂದ ಬಂದ ಬೈಕ್ ಡಿಕ್ಕಿಯಾಗಿದೆ. ಎದುರಿನ ಬೈಕ್ ನವರು ರಸ್ತೆಯ ಬದಿಗೆ ಬಿದ್ದರೆ, ಇನ್ನಿಬ್ಬರು ರಸ್ತೆಯ ಮೇಲೆ ಬಿದ್ದಿದ್ದಾರೆ. ಅದೇ ಸಮಯದಲ್ಲಿ ಹಿಂದಿನಿಂದ ಬಂದ ಲಾರಿ ಗಾಯಾಳುಗಳ ಮೇಲೆ ಹರಿದಿದೆ. ಪರಿಣಾಮ ಸ್ಥಳದಲ್ಲೇ ಒಬ್ಬ ಮೃತಪಟ್ಟಿದ್ದು, ಇನ್ನೋರ್ವ ಆಸ್ಪತ್ರೆಗೆ ಹೋಗುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾನೆ.

ಲಾರಿಗಳ ನಡುವೆ ಸರಣಿ ಅಪಘಾತ: ಓರ್ವ ಸಾವು, 7 ಮಂದಿಗೆ ಗಾಯ

ಕೆಲ‌ಕಾಲ ಗಾಯಾಳು ರಸ್ತೆಯಲ್ಲೇ ನರಳಿದ್ದಾನೆ. ಆಸ್ಪತ್ರೆಗೆ ಅವರನ್ನು ಕರೆದೊಯ್ಯಲು ವಾಹನ ಸಿಗದೆ ಪರದಾಟ ಅನುಭವಿಸಿದ್ದಾರೆ. ಇನ್ನಿಬ್ಬರು ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹದಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

English summary
Two youths were killed in an accident between the bikes near the Kadranahalli Cross near Davangere,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X