• search
  • Live TV
ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದಾವಣಗೆರೆ ಸೀಲ್ ಡೌನ್ ಪ್ರದೇಶದಲ್ಲಿ ಮನೆಗೆ ಕನ್ನ ಹಾಕಿದ ಕಳ್ಳರು

By ದಾವಣಗೆರೆ ಪ್ರತಿನಿಧಿ
|

ದಾವಣಗೆರೆ, ಜೂನ್ 11: ಕೊರೊನಾ ವೈರಸ್ ಹಿನ್ನೆಲೆಯಲ್ಲಿ ದಾವಣಗೆರೆಯ ಪ್ರದೇಶವೊಂದನ್ನು ಸೀಲ್ ಡೌನ್ ಮಾಡಲಾಗಿದ್ದು, ಆ ಪ್ರದೇಶದಲ್ಲೇ ಕಳ್ಳರು ಕನ್ನ ಹಾಕಿರುವ ಘಟನೆ ನಡೆದಿದೆ. ಕಳ್ಳರು ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಮತ್ತು 56 ಸಾವಿರ ನಗದು ದೋಚಿ ಪರಾರಿಯಾಗಿದ್ದಾರೆ.

ಇಲ್ಲಿನ ಅಜಾದ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಇಮಾಮ್ ನಗರದ ಬಿಡಿಓ ಆಫೀಸ್ ಕ್ವಾರ್ಟಸ್ ನಲ್ಲಿ ಈ ಘಟನೆ ನಡೆದಿದೆ.

ಬೈಕ್‌ ಕದ್ದು 2 ವಾರದಲ್ಲಿ ಮಾಲೀಕರಿಗೆ ಪಾರ್ಸೆಲ್ ಮಾಡಿದ ಕಳ್ಳ

ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಇಮಾಮ್ ನಗರವನ್ನು ಕಂಟೈನ್ ಮೆಂಟ್ ಜೋನ್ ಮಾಡಿ ಸೀಲ್ ಡೌನ್ ಮಾಡಲಾಗಿದೆ. ಹೀಗಾಗಿ ಕೃಷಿಕ ಅರುಣ್ ಕುಮಾರ್ ಮತ್ತು ಬಿಡಿಓ ಆಫೀಸ್ ನ ಡಿ ದರ್ಜೆ ನೌಕರರಾದ ಅವರ ತಾಯಿ ಹೂವಮ್ಮ ಇಬ್ಬರೂ 20 ದಿನಗಳಿಂದ ವಿನೋಬ ನಗರದಲ್ಲಿನ ಚಿಕ್ಕಪ್ಪನ ಮನೆಯಲ್ಲಿ ವಾಸವಿದ್ದರು. ಇಂದು ಮನೆಗೆ ವಾಪಸ್ ಬಂದಾಗ, ಕಳ್ಳತನವಾಗಿರುವ ವಿಚಾರ ಬೆಳಕಿಗೆ ಬಂದಿದೆ.

42 ಸಾವಿರ ಮೌಲ್ಯದ 10 ಗ್ರಾಂ ತೂಕದ ಸರ, 42 ಸಾವಿರ ಮೌಲ್ಯದ ಬೆಂಡೋಲೆ, 21 ಸಾವಿರ ಮೌಲ್ಯದ ಬಂಗಾರದ ಬುಗುಡಿ, 56 ಸಾವಿರ ನಗದು ಕಳುವಾಗಿರುವುದಾಗಿ ಅರುಣ್ ಕುಮಾರ್ ದೂರು ನೀಡಿದ್ದಾರೆ.

English summary
Thieves have escaped with gold and money in seal down area in davanagere
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X