ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Stories Of Strength: ದಾವಣಗೆರೆಯಲ್ಲಿ ಕೋವಿಡ್ ಗೆದ್ದ 16 ನವಜಾತ ಶಿಶುಗಳು

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಜೂನ್ 02; ದಾವಣಗೆರೆ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತ ಗರ್ಭಿಣಿಯರು, ಬಾಣಂತಿಯರು ಮತ್ತು ಹಸುಗೂಸುಗಳು ಗುಣಮುಖರಾಗುವ ಮೂಲಕ ಕೊರೊನಾವನ್ನು ಗೆದ್ದಿದ್ದಾರೆ.

ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತ ಗರ್ಭಿಣಿಯರ ಚಿಕಿತ್ಸೆಗಾಗಿಯೇ ಪ್ರತ್ಯೇಕ ಐಸೋಲೇಷನ್ ವಾರ್ಡ್ ಪ್ರಾರಂಭಿಸಲಾಗಿದೆ. ಇಲ್ಲಿಯೂ ಕೂಡ ಬೆಡ್ ನಡುವೆ ಸಾಮಾಜಿಕ ಅಂತರ ಕಾಯ್ದುಕೊಂಡು, ವಿಶೇಷವಾಗಿ ಕೋವಿಡ್ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ದಾವಣಗೆರೆ; ಸ್ಟಾಫ್‌ನರ್ಸ್‌ ಆತ್ಮಹತ್ಯೆಗೆ ತಿರುವು ಕೊಟ್ಟ ಡೆತ್‌ನೋಟ್ ದಾವಣಗೆರೆ; ಸ್ಟಾಫ್‌ನರ್ಸ್‌ ಆತ್ಮಹತ್ಯೆಗೆ ತಿರುವು ಕೊಟ್ಟ ಡೆತ್‌ನೋಟ್

ಸೋಂಕಿತ ಗರ್ಭಿಣಿಯರಲ್ಲಿ ಮಾನಸಿಕ ಸ್ಥೈರ್ಯ ತುಂಬುವ ಹಾಗೂ ಉತ್ತಮ ಚಿಕಿತ್ಸೆ ನೀಡುವುದರ ಜೊತೆಗೆ ಸುರಕ್ಷಿತ ಹೆರಿಗೆಯನ್ನೂ ಇಲ್ಲಿನ ವೈದ್ಯರು ಕೈಗೊಂಡು ಪ್ರಶಂಸೆಗೆ ಪಾತ್ರರಾಗಿದ್ದಾರೆ.

ದಾವಣಗೆರೆ; ತಹಶೀಲ್ದಾರ್ ಕಾರ್ಯಕ್ಕೆ ಎಲ್ಲರ ಮೆಚ್ಚುಗೆ ದಾವಣಗೆರೆ; ತಹಶೀಲ್ದಾರ್ ಕಾರ್ಯಕ್ಕೆ ಎಲ್ಲರ ಮೆಚ್ಚುಗೆ

ಕೊರೊನಾ 3ನೇ ಅಲೆ ಮಕ್ಕಳಿಗೆ ತೀವ್ರ ಸಂಕಷ್ಟ ತರುವ ಸಾಧ್ಯತೆ ಇದೆ ಎನ್ನುವಂತಹ ಅಭಿಪ್ರಾಯವನ್ನು ತಜ್ಞರು ವ್ಯಕ್ತಪಡಿಸಿರುವ ಸಂದರ್ಭದಲ್ಲಿಯೇ, ಕೊರೊನಾ ಸೋಂಕಿತ ಗರ್ಭಿಣಿಯರಿಗೆ ಸುರಕ್ಷಿತ ಹೆರಿಗೆ ಮಾಡಿಸಿ, ಬಾಣಂತಿಯರು ಹಾಗೂ ಹಸುಗೂಸುಗಳನ್ನು ಕೊರೊನಾ ಸೋಂಕಿನಿಂದ ಗುಣಮುಖರಾಗಿರುವುದು, ಆತಂಕದ ನಡುವೆಯೂ ಒಳ್ಳೆಯ ಸುದ್ದಿ.

ದಾವಣಗೆರೆ; ಜೂನ್ 7ರ ತನಕ ಸಂಪೂರ್ಣ ಲಾಕ್‌ಡೌನ್ ದಾವಣಗೆರೆ; ಜೂನ್ 7ರ ತನಕ ಸಂಪೂರ್ಣ ಲಾಕ್‌ಡೌನ್

ಸೋಂಕು ಗೆದ್ದ 142 ಬಾಣಂತಿಯರು

ಸೋಂಕು ಗೆದ್ದ 142 ಬಾಣಂತಿಯರು

ಕೋವಿಡ್‍ನ ಎರಡನೇ ಅಲೆ ಪ್ರಾರಂಭವಾದ ಏಪ್ರಿಲ್‌ನಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತ ಒಟ್ಟು 124 ಗರ್ಭಿಣಿಯರಿಗೆ ದಾವಣಗೆರೆಯ ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಸುರಕ್ಷಿತವಾಗಿ ಹೆರಿಗೆ ಮಾಡಿಸಲಾಗಿದೆ.

ಈ ಪೈಕಿ 70 ಸೋಂಕಿತ ಗರ್ಭಿಣಿಯರಿಗೆ ನಾರ್ಮಲ್ ಹೆರಿಗೆಯಾಗಿದ್ದರೆ, 54 ಸಿಸೇರಿಯನ್ ಹೆರಿಗೆಗಳಾಗಿವೆ. 18 ಹಸುಗೂಸುಗಳಿಗೆ ಸೋಂಕು ತಗುಲಿದ್ದು, ಈ ಪೈಕಿ 16 ಶಿಶುಗಳು ಕೊರೊನಾ ಸೋಂಕಿನಿಂದ ಗುಣಮುಖವಾಗಿವೆ. ತೀವ್ರ ಕ್ಲಿಷ್ಟಕರ ಪರಿಸ್ಥಿತಿಯ ಕಾರಣದಿಂದ 2 ಶಿಶುಗಳು ಮಾತ್ರ ಸೋಂಕು ಗೆಲ್ಲಲಾರದೆ ಸಾವಿಗೆ ಶರಣಾಗಿವೆ.

ಖಾಸಗಿ ಆಸ್ಪತ್ರೆಗಳಲ್ಲೂ ಸುರಕ್ಷಿತ ಹೆರಿಗೆ

ಖಾಸಗಿ ಆಸ್ಪತ್ರೆಗಳಲ್ಲೂ ಸುರಕ್ಷಿತ ಹೆರಿಗೆ

ದಾವಣಗೆರೆಯ ಸರ್ಕಾರಿ ಆಸ್ಪತ್ರೆ ಮಾತ್ರವಲ್ಲ ಜಿಲ್ಲೆಯ ಖಾಸಗಿ ಆಸ್ಪತ್ರೆಗಳಲ್ಲಿಯೂ ಒಟ್ಟು 18 ಸೋಂಕಿತ ಗರ್ಭಿಣಿಯರಿಗೆ ಸುರಕ್ಷಿತ ಹೆರಿಗೆಯಾಗಿದ್ದು, ಈ ಪೈಕಿ 7 ಸಹಜ ಹೆರಿಗೆ ಹಾಗೂ 11 ಸಿಸೇರಿಯನ್ ಹೆರಿಗೆ ಮಾಡಿಸಲಾಗಿದೆ.

ವೈದ್ಯರು ಹೇಳುವುದೇನು?

ವೈದ್ಯರು ಹೇಳುವುದೇನು?

"ಜಿಲ್ಲಾ ಆಸ್ಪತ್ರೆಯಲ್ಲಿನ ವೈದ್ಯರು ಹಾಗೂ ಶುಶ್ರೂಷಕರು ಸೋಂಕಿತ ಗರ್ಭಿಣಿಯರು, ಬಾಣಂತಿಯರ ಹಾಗೂ ಹಸುಗೂಸುಗಳ ಆರೋಗ್ಯ ಸುರಕ್ಷತೆಗಾಗಿ ಕೈಗೊಂಡ ವಿಶೇಷ ಕಾಳಜಿಯಿಂದಾಗಿ, ಇವರು ಸೋಂಕಿನಿಂದ ಗುಣಮುಖರಾಗಲು ಸಾಧ್ಯವಾಯಿತು. ಗರ್ಭಿಣಿಯರು, ಬಾಣಂತಿಯರು ಕೊರೊನಾ ವಿಷಯದಲ್ಲಿ ಎಚ್ಚರಿಕೆ ವಹಿಸುವುದು ಒಳ್ಳೆಯದು. ಯಾವುದೇ ಆರೋಗ್ಯ ಸಮಸ್ಯೆ ಕಂಡುಬಂದರೂ, ತಕ್ಷಣ ವೈದ್ಯರ ಗಮನಕ್ಕೆ ತಂದು ಚಿಕಿತ್ಸೆ ಪಡೆದರೆ ಯಾವುದೇ ಸಮಸ್ಯೆಯಾಗುವುದಿಲ್ಲ" ಎನ್ನುತ್ತಾರೆ ಜಿಲ್ಲಾಸ್ಪತ್ರೆಯ ತಜ್ಞ ವೈದ್ಯ ಡಾ. ಗಿರಿಧರ್.

Recommended Video

ಭಾರತೀಯರಿಗೆ ಹೊಸ ಭರವಸೆ ಮೂಡಿಸಿದ ರಷ್ಯಾ ಲಸಿಕೆ | Sputnik light | Oneindia Kannada
ಎದೆ ಹಾಲಿನಿಂದ ಸೋಂಕು ಹರಡಲ್ಲ

ಎದೆ ಹಾಲಿನಿಂದ ಸೋಂಕು ಹರಡಲ್ಲ

ಕೊರೊನಾ ಇದ್ದರೂ ಕೂಡ ಮಾಸ್ಕ್ ಧರಿಸಿ, ತಾಯಂದಿರು ಹಸುಗೂಸುಗಳಿಗೆ ಹಾಲುಣಿಸಬಹುದು. ತಾಯಿಯ ಎದೆ ಹಾಲಿನಿಂದ ಕೊರೊನಾ ಸೋಂಕು ಮಗುವಿಗೆ ಹರಡುವುದಿಲ್ಲ. ಆದರೆ ಹಾಲುಣಿಸುವಾಗ ತಾಯಂದಿರು ಅತ್ಯಂತ ಎಚ್ಚರಿಕೆ ವಹಿಸಬೇಕು. ಮಾಸ್ಕ್ ಧರಿಸದೆ ಕೆಮ್ಮುವುದು, ಸೀನುವುದು ಮಾಡುವುದರಿಂದ ಮಗುವಿಗೆ ಸೋಂಕು ತಗಲುವ ಸಾಧ್ಯತೆಗಳಿರುತ್ತವೆ. ಹೀಗಾಗಿ ತಾಯಂದಿರು ತಪ್ಪದೆ ಮಾಸ್ಕ್ ಧರಿಸಿಯೇ ಮಗುವಿಗೆ ಹಾಲುಣಿಸಬೇಕು, ಬಳಿಕ ಮಗುವನ್ನು ಸುರಕ್ಷಿತ ಅಂತರದಲ್ಲಿ ಪ್ರತ್ಯೇಕವಾಗಿ ಮಲಗಿಸಬೇಕು. ಹಾಲುಣಿಸುವ ಮೊದಲು ಹಾಗೂ ನಂತರ, ಪ್ರತಿ ಬಾರಿಯೂ ತಾಯಿ ಕೈಯನ್ನು ಸಾಬೂನಿನಿಂದ ಸ್ವಚ್ಛವಾಗಿ ತೊಳೆದುಕೊಳ್ಳಬೇಕು. ಒಂದು ವೇಳೆ ಬಾಟಲಿಯಿಂದ ಮಗುವಿಗೆ ಹಾಲುಣಿಸುತ್ತಿದ್ದರೆ, ಪ್ರತಿ ಬಾರಿಯೂ ನಿಪ್ಪಲ್ ಅನ್ನು ಬಿಸಿ ನೀರಿನಿಂದ ತಪ್ಪದೆ ಸ್ವಚ್ಛಗೊಳಿಸಬೇಕು.

English summary
In Davanagere 124 Covid patient women delivery held after April. 18 new born baby tested positive for Covid and 16 baby's recovered.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X