ದಾವಣಗೆರೆಯಲ್ಲಿ ಕುಖ್ಯಾತ ರೌಡಿಶೀಟರ್ ಬರ್ಬರ ಹತ್ಯೆ
ದಾವಣಗೆರೆ, ಮೇ, 5: ಇತ್ತೀಚಿನ ದಿನಗಳಲ್ಲಿ ಕ್ರೈಂ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಹಾಗೆಯೇ ಇದೀಗ ಹಾಡಹಗಲೇ ಕುಖ್ಯಾತ ರೌಡಿಶೀಟರ್ ಒಬ್ಬನನ್ನು ದುಷ್ಕರ್ಮಿಗಳು ಮಚ್ಚಿನಿಂದ ಕೊಚ್ಚಿ ಕೊಲೆಗೈದ ಘಟನೆ ದಾವಣಗೆರೆಯಲ್ಲಿ ಇಂದು (ಮೇ 5) ನಡೆದಿದೆ.
ಹತ್ಯೆಗೀಡಾದ ರೌಡಿಶೀಟರ್‌ನನ್ನು ಸಂತೋಷ್ ಕುಮಾರ್ ಅಲಿಯಾಸ್ ಕಣುಮಾ ಎಂದು ಗುರುತಿಸಲಾಗಿದೆ. ದಾವಣಗೆರೆ ನಗರದ ಖಾಸಗಿ ಆಸ್ಪತ್ರೆಯೊಂದರ ಮುಂಭಾಗದಲ್ಲಿ ಕೊಲೆ ಮಾಡಲಾಗಿದೆ. ಮೂಲಗಳ ಪ್ರಕಾರ, ಹತ್ಯೆಗೀಡಾದ ರೌಡಿಶೀಟರ್ ರಿಯಲ್ ಎಸ್ಟೇಟ್ ಸೆಟಲ್ಮೆಂಟ್ ಮಾಡಿಕೊಂಡಿದ್ದ ಎಂದು ತಿಳಿದುಬಂದಿದೆ.

ಆಟೋದಲ್ಲಿ ಬಂದ ನಾಲ್ಕೈದು ಜನ ದುಷ್ಕರ್ಮಿಗಳು ರೌಡಿಶೀಟರ್ ಸಂತೋಷ್ ಮುಖಕ್ಕೆ ಪೆಪ್ಪರ್ ಸ್ಪ್ರೈ ಮಾಡಿ, ಮಚ್ಚಿನಿಂದ ಕೊಚ್ಚಿ ಕೊಲೆಗೈದಿದ್ದು, ಹತ್ಯೆಗೆ ನಿಖರ ಕಾರಣ ಏನೆಂದು ತಿಳಿದುಬಂದಿಲ್ಲ. ಇನ್ನು ಘಟನಾ ಸ್ಥಳಕ್ಕೆ ದಾವಣಗೆರೆ ಪೊಲೀಸರು ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ, ಆರೋಪಿಗಳಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ ಎಂದು ತಿಳಿದುಬಂದಿದೆ.
ಪ್ರಯಾಣಿಕನ ಮೇಲೆ ಟಿಸಿ ದರ್ಪ: ರಾಜ್ಯದಲ್ಲಿ ಪರಭಾಷಿಕರ ಹಾವಳಿ ಹೆಚ್ಚಾಗಿಬಿಟ್ಟಿದೆ. ಅವರು ನಮ್ಮಂತೆ ಮನುಷ್ಯರು, ಜೀವನ ಸಾಗಿಸಿಕೊಂಡು ಹೋಗುತ್ತಾರೆ ಅಂದುಕೊಂಡರೆ ಕನ್ನಡಿಗರ ವಿರುದ್ಧವೇ ಬಾಲ ಬಿಚ್ಚುತ್ತಿದ್ದಾರೆ. ಇಂತಹ ಘಟನೆಗಳು ನಡೆಯುತ್ತಲೇ ಇವೆ. ಹಾಗೆಯೇ ಇದೀಗ ರೈಲಿನಲ್ಲಿ ಟಿಸಿಯೊಬ್ಬರು ದರ್ಪ ಮೆರೆದು ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ಇತ್ತೀಚೆಗಷ್ಟೇ ಕನ್ನಡ ಮಾತಾನಾಡು ಅಂದಿದಕ್ಕೆ ಬೆಳಗಾವಿ ಜಿಲ್ಲೆಯಲ್ಲಿ ಕಂಡಕ್ಟರ್ ಮೇಲೆ ಹಲ್ಲೆ ಮಾಡಲಾಗಿತ್ತು. ಈ ಘಟನೆ ಭಾರೀ ಕಾರಣವಾಗಿತ್ತು. ಈ ಘಟನೆ ಮಾಸುವ ಮುನ್ನವೇ ಕೆಲ ದಿನಗಳ ಹಿಂದೆ ಬೆಂಗಳೂರಲ್ಲಿ ವಿಂಗ್ ಕಮಾಂಡರ್ ಕನ್ನಡಿನ ಮೇಲೆ ಹಲ್ಲೆ ಮಾಡಿದ್ದರು. ಇದೀಗ ಅದೇ ರೀತಿಯ ಘಟನೆ ರಾಜ್ಯದಲ್ಲಿ ನಡೆದಿದೆ.
ರೈಲಿನಲ್ಲಿ ಕನ್ನಡ ಮಾತಾಡಿ ಅಂದಿದ್ದಕ್ಕೆ ಟಿಸಿ ಪ್ರಯಾಣಿಕನ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಹೀಗೆ ಕರ್ನಾಟಕದಲ್ಲಿದ್ದುಕೊಂಡೇ ಕನ್ನಡಿಗರ ಮೇಲೆ ಹಲ್ಲೆ, ದಬ್ಬಾಳಿಕೆ ಮಾಡುತ್ತಿರುವುದು ಕನ್ನಡಿಗರನ್ನು ಕೆರಳಿಸುವಂತೆ ಮಾಡಿದೆ. ಸಾಮಾನ್ಯವಾಗಿ ಕರ್ನಾಟಕದಲ್ಲೇ ಇಂತಹ ಘಟನೆಗಳು ಹೆಚ್ಚಾಗಿ ನಡೆಯುತ್ತಲೇ ಇವೆ. ದೇಶದ ಎಲ್ಲಾ ರಾಜ್ಯಗಳ ಜನರು ಕೂಡ ಕರ್ನಾಟಕಕ್ಕೆ ಉದ್ಯೋಗ ಹರಸಿ ಬರುತ್ತಲೇ ಇದ್ದಾರೆ. ಆದರೆ, ಇವರಲ್ಲಿ ಕೆಲವರು ಕನ್ನಡ ಭಾಷೆಯೇ ಮೇಲೆ ದರ್ಪ ತೋರುವ ಮೂಲಕ ಬಾಲ ಬಿಚ್ಚುತ್ತಿದ್ದಾರೆ.
ಕರ್ನಾಟಕದಲ್ಲಿದ್ದುಕೊಂಡೇ ಕೆಲವರು ಕನ್ನಡ ಭಾಷೆಯ ಮೇಲೆ ದರ್ಪ ತೋರುತ್ತಿದ್ದಾರೆ. ಈ ಕುರಿತು ಸಾಕಷ್ಟು ವಿಡಿಯೋಗಳು ಸಹ ವೈರಲ್ ಆಗಿದ್ದು, ಬಳಿಕ ಕ್ರಮ ಕೈಗೊಂಡ ಮೇಲೆ ಕ್ಷಮೆ ಕೇಳಿರುವ ಘಟನೆಗಳು ನಡೆದಿವೆ. ಇಷ್ಟಾದರೂ ಕೂಡ ಮತ್ತೆ ಮತ್ತೆ ಇಂತಹ ಘಟನೆಗಳು ಮರುಕಳಿಸುತ್ತಲೇ ಇದ್ದು, ಕನ್ನಡಿಗರ ಶಾಂತ ಸ್ವಭಾವವನ್ನು ಕೆರಳಿಸುತ್ತಿವೆ.
ಇದೀಗ ರೈಲಿನಲ್ಲಿ ಕೊಪ್ಪಳದ ಪ್ರಯಾಣಿಕ ಕನ್ನಡ ಮಾತಾಡು ಅಂದಿದ್ದಕ್ಕೆ ಟಿಸಿ ಹಲ್ಲೆ ಮಾಡಿದ್ದಾರೆ. ಹಂಪಿ ಎಕ್ಸಪ್ರೆಸ್ ರೈಲಿನಲ್ಲಿ ಏಪ್ರಿಲ್ 24ರಂದು ಮೈಸೂರಿನಿಂದ ಕೊಪ್ಪಳಕ್ಕೆ ಪ್ರಯಾಣ ಮಾಡುವಾಗ ಈ ಘಟನೆ ನಡೆದಿದೆ. ಈ ವೇಳೆ ರೈಲು ಯಲಹಂಕ ಸಮೀಪ ತಲುಪಿದೆ.
ಟಿಸಿ ಎಲ್ಲರ ಟಿಕೆಟ್ ತಪಾಸಣೆ ಮಾಡುತ್ತಿದ್ದರು. ಈ ವೇಳೆ ರೈಲಿನಲ್ಲಿದ್ದ ಕೊಪ್ಪಳ ಮೂಲದ ಪ್ರಯಾಣಿಕ ಮೊಹಮದ್ ಭಾಷಾ ಎಂಬುವವರು ಟಿಸಿಗೆ ಕನ್ನಡ ಮಾತಾನಾಡಿ ಎಂದು ಹೇಳಿದ್ದಾರೆ. ಆಗ ಸಿಟ್ಟಿನಿಂದ ಟಿಸಿ ಕೂಡಲೇ ಮಹಮ್ಮದ್ ಭಾಷಾ ಅವರ ಮೊಬೈಲ್ ಕಿತ್ತುಕೊಂಡು ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಮಹಮ್ಮದ್ ಭಾಷಾ ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿ, ಕಲೆಕ್ಟರ್ಗೆ ನಾನು ಕನ್ನಡ ಮಾತಾಡಿ ಎಂದು ಹೇಳಿದೆ. ಆಗ ಅವರು ಕನ್ನಡ ಬರಲ್ಲ ಎಂದರು. ಅಷ್ಟಕ್ಕೆ ಸುಮ್ಮನಾಗಲಿಲ್ಲ ಅವರು ನನ್ನ ಬಳಿಯಿದ್ದ ಮೊಬೈಲ್ ಫೋನ್ ಕಿತ್ತುಕೊಂಡು, ನನ್ನ ಮೇಲೆ ಹಲ್ಲೆ ಮಾಡಿದರು ಎಂದು ಹೇಳಿದ್ದಾರೆ.












Click it and Unblock the Notifications