ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಕ್ಕದಲ್ಲಿ ಮಳೆಯುಂಟು, ಪಕ್ಕದಲ್ಲೇ ಬಿಸಿಲುಂಟು; ದಾವಣಗೆರೆಯಲ್ಲೊಂದು ವಿಸ್ಮಯದ ದೃಶ್ಯ!

|
Google Oneindia Kannada News

ದಾವಣಗೆರೆ, ಸೆಪ್ಟೆಂಬರ್ 08: ರಾಜ್ಯಾದ್ಯಂತ ವರುಣ ಆಡಿದ್ದೇ ಆಟ. ಬೆಂಗಳೂರಿನಲ್ಲಿ ಜನರ ಮೇಲೆ ಕೆಂಡ ಕಾರುತ್ತಿರುವ ಮಳೆರಾಯ ಜಲಪ್ರಳಯವನ್ನೇ ಸೃಷ್ಟಿಸಿದ್ದು ಆಗಿದೆ. ಜಲಾವೃತ ರಸ್ತೆಗಳಲ್ಲಿ ಮಂದಿಯನ್ನು ರಕ್ಷಿಸುವುದು ನೋಡುಗರಿಗೆ ಸರ್ಕಸ್ ರೀತಿ ಗೋಚರಿಸುತ್ತಿದೆ. ಇದರ ಮಧ್ಯೆ ದಾವಣಗೆರೆಯಲ್ಲೊಂದು ವಿಸ್ಮಯಕಾರಿ ಘಟನೆ ನಡೆದು ಹೋಗಿದೆ.

ನಮ್ಮ ಪ್ರಕೃತಿ ಮಡಿಲು ವಿಸ್ಮಯಗಳ ತಾಣ. ಈ ಪರಿಸರದ ಮಧ್ಯೆ ಬದುಕುತ್ತಿರುವ ಪ್ರತಿಯೊಬ್ಬರು ಇಲ್ಲಿನ ವಿಸ್ಮಯಗಳನ್ನು ಕಂಡು ನಿಬ್ಬೆರಗಾಗುವವರೇ ಹೆಚ್ಚು. ಒಂದೇ ದಿನದಲ್ಲಿ ಬಿಸಿಲು, ಮಳೆ, ಚಳಿ ಅನ್ನು ಕಾಣುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ಆದರೆ ದಾವಣಗೆರೆಯಲ್ಲಿ ನಡೆದ ಘಟನೆಯು ಹಾಗಿಲ್ಲ.

ಸಿರುಗುಪ್ಪ: ಪ್ರವಾಹದಲ್ಲಿ ಸಿಲುಕಿದವರನ್ನು ರಕ್ಷಿಸಲು ಹೋದ ಅಗ್ನಿಶಾಮಕ ಬೋಟ್ ಪಲ್ಟಿಸಿರುಗುಪ್ಪ: ಪ್ರವಾಹದಲ್ಲಿ ಸಿಲುಕಿದವರನ್ನು ರಕ್ಷಿಸಲು ಹೋದ ಅಗ್ನಿಶಾಮಕ ಬೋಟ್ ಪಲ್ಟಿ

ಅಕ್ಕದಲ್ಲಿ ಮಳೆಯುಂಟು, ಪಕ್ಕದಲ್ಲಿ ಬಿಸಿಲುಂಟು ಎನ್ನುವ ಹೆಡ್ ಲೈನ್ ನಿಮ್ಮಲ್ಲಿ ಆಶ್ಚರ್ಯವನ್ನು ಉಂಟು ಮಾಡಬಹುದು. ಆದರೆ ಬೆಣ್ಣೆನಗರದಲ್ಲಿ ಹಾಗೆ ನಡೆದಿರುವುದು ನಿಜ. ಅದಕ್ಕೆ ವಿಡಿಯೋ ಸಾಕ್ಷ್ಯ ಕೂಡ ಲಭ್ಯವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಬೆಣ್ಣೆನಗರದಲ್ಲಿ ಮಳೆರಾಯ ಕಣ್ಣಾಮುಚ್ಚಾಲೆಯ ವಿಡಿಯೋ ವೈರಲ್ ಆಗುತ್ತಿದೆ.

ದಾವಣಗೆರೆಯಲ್ಲಿ ಆಗಿದ್ದಾದರೂ ಏನು?

ದಾವಣಗೆರೆಯಲ್ಲಿ ಆಗಿದ್ದಾದರೂ ಏನು?

ದಾವಣಗೆರೆಯ ಆಜಾದ್ ನಗರದಲ್ಲಿ ಗುರುವಾರ ತುಂತುರು ಮಳೆ ಸುರಿದಿದೆ. ಅದರಲ್ಲಿ ಯಾವುದೇ ವಿಶೇಷವಿಲ್ಲ. ಆದರೆ ಮಂಡಕ್ಕಿ ಭಟ್ಟಿ ಲೇಔಟ್​ನಲ್ಲಿ ಜನರು ನಿಬ್ಬೆರಗಾಗುವ ರೀತಿಯಲ್ಲಿ ಮಳೆ ಸುರಿದಿದೆ. ಅದೇ ಹೇಗಪ್ಪಾ ಅಂದರೆ, 30 ಮೀಟರ್ ಅಂತರದಲ್ಲೇ ಮಳೆ ಮತ್ತು ಬಿಸಿಲಿನ ದರ್ಶನವಾಗಿದೆ. 30 ಮೀಟರ್ ಆಕಡೆ ಹೋದರೆ ವರುಣನ ನರ್ತನ, 30 ಮೀಟರ್ ಈ ಕಡೆ ಹೋದರೆ, ಬಿಸಿಲಿನ ಚುಂಬನ.

ಆ ಕಡೆ ಬಿಸಿಲು, ಈ ಕಡೆ ಮಳೆಯ ನರ್ತನ

ಆ ಕಡೆ ಬಿಸಿಲು, ಈ ಕಡೆ ಮಳೆಯ ನರ್ತನ

ನಮ್ಮ ಏರಿಯಾದಲ್ಲಿ ಭಾರೀ ಮಳೆಯಾಗುತ್ತಿದೆ, ನಿಮ್ಮ ಏರಿಯಾದಲ್ಲಿ ಈಗ ಪರಿಸ್ಥಿತಿ ಹೇಗಿದೆ ಎನ್ನುವ ಕಾಲ ಬದಲಾಗಿದೆ. ಅಲ್ಲಿಂದ ನಮ್ಮ ರಸ್ತೆಯಲ್ಲಿ ಮಳೆ, ನಿಮ್ಮ ರಸ್ತೆಯಲ್ಲಿ ವಾತಾವರಣ ಹೇಗೆ ಅನ್ನುವ ಜನರು ಈಗ ಒಂದೇ ರಸ್ತೆಯಲ್ಲಿ ಮಳೆ ಮತ್ತು ಬಿಸಿಲಿನ ದರ್ಶನವನ್ನು ಪಡೆದುಕೊಂಡಿದ್ದಾರೆ. ಅಜಾದ್ ನಗರದಲ್ಲಿ ನಡೆದಿದೆ ಎನ್ನಲಾದ ಈ ಘಟನೆಯು ಸ್ಥಳೀಯರನ್ನು ನಿಬ್ಬೆರಗಾಗುವಂತೆ ಮಾಡಿದೆ.

ಮಳೆ ಎಂದರೆ ಅಚ್ಚುಮೆಚ್ಚು, ಬಿಸಿಲೆಂದರೆ ಒಂದು ಹುಚ್ಚು!

ಮಳೆ ಎಂದರೆ ಅಚ್ಚುಮೆಚ್ಚು, ಬಿಸಿಲೆಂದರೆ ಒಂದು ಹುಚ್ಚು!

ಸಾಮಾನ್ಯವಾಗಿ ತುಂತುರು ಮಳೆಯಲ್ಲಿ ಕುಣಿದು ಕುಪ್ಪಳಿಸುವುದು ಎಂದರೆ ಮಕ್ಕಳ ಆದಿಯಾಗಿ ಬಹುತೇಕ ಮಂದಿಗೆ ಅಚ್ಚುಮೆಚ್ಚು. ಸುರಿಯುವ ಮುಂಗಾರು ಮಳೆಯಲ್ಲಿ ನಿಂತು ಆಕಾಶ ನೋಡುವ ಮನಸಿನ ಹುಚ್ಚು ತಣಿಸಿಕೊಳ್ಳುವವರ ಸಂಖ್ಯೆಗೇನೂ ಕಡಿಮೆಯಿಲ್ಲ. ಇದರ ಜೊತೆಗೆ ಬಿಸಿಲಿನ ಹುಚ್ಚು ಬಿಡಿಸಿಕೊಳ್ಳುವ ಬಯಕೆ ಹೊಂದಿದವರಿಗೆ ಮಳೆಯೇ ಮದ್ದು. ದಾವಣಗೆರೆಯಲ್ಲಿ ಒಂದೇ ನಗರದಲ್ಲಿ, ಒಂದೇ ರಸ್ತೆಯಲ್ಲಿ ಅದೇ ಬಿಸಿಲು ಮಳೆಯ ಸಮಾಗಮವಾಗಿತ್ತು.

ದಾವಣಗೆರೆ ಮಳೆ ವಿಡಿಯೋ ಸಖತ್ ವೈರಲ್

ದಾವಣಗೆರೆ ಆಜಾದ್ ನಗರ ಮತ್ತು ಮಂಡಕ್ಕಿ ಭಟ್ಟಿ ಪ್ರದೇಶದಲ್ಲಿ ನಡೆದ ಮಳೆಯ ವಿಸ್ಮಯದ ವಿಡಿಯೋವನ್ನು ಸ್ಥಳೀಯರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಇದೇ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿ ಬಿಟ್ಟಿದ್ದಾರೆ. ಮಳೆರಾಯ ಆಡಿದ ಕಣ್ಣಾಮುಚ್ಚಾಲೆಯನ್ನು ಕಂಡು ಸೋಷಿಯಲ್ ಮೀಡಿಯಾದ ಹೈಕ್ಳು ಹುಚ್ಚೆದ್ದು ಕುಣಿದಿದ್ದಾರೆ. ಇದರ ಬೆನ್ನಲ್ಲೇ ವಿಡಿಯೋ ಸಖತ್ ವೈರಲ್ ಆಗುತ್ತಿದೆ.

English summary
A Rare sight of rain and sunshine happened same time at Azad Nagar, video goes viral on social media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X