ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ : ರೇಣುಕಾಚಾರ್ಯ ವಿಚಾರಣೆ?

Posted By:
Subscribe to Oneindia Kannada

ದಾವಣಗೆರೆ, ಜುಲೈ 29 : ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದಲ್ಲಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರ ಹೆಸರು ಕೇಳಿಬಂದಿದೆ. ಹಗರಣದ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು ರೇಣುಕಾಚಾರ್ಯ ಅವರನ್ನು ವಿಚಾರಣೆ ನಡೆಸುವ ಸಾಧ್ಯತೆ ಇದೆ.

ಪ್ರಶ್ನೆ ಪತ್ರಿಕೆ ಹಗರಣದ ಕಿಂಗ್ ಪಿನ್ ಟೊಮೆಟೊ ಅಲಿಯಾಸ್ ಶಿವಕುಮಾರ ಸ್ವಾಮಿ ಜೊತೆ ರೇಣುಕಾಚಾರ್ಯ ಅವರು ಸಂಪರ್ಕದಲ್ಲಿದ್ದರು ಎಂಬ ಮಾಹಿತಿ ತನಿಖೆ ವೇಳೆ ಬಹಿರಂಗವಾಗಿದೆ. ಆದರೆ, ರೇಣುಕಾಚಾರ್ಯ ಅವರು ಈ ಆರೋಪವನ್ನು ತಳ್ಳಿ ಹಾಕಿದ್ದಾರೆ.[ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣ, ನಾಲ್ವರಿಗೆ ಜಾಮೀನು]

ರೇಣುಕಾಚಾರ್ಯ ಅವರ ಮೊಬೈಲ್‌ಗೆ ಶಿವಕುಮಾರ ಸ್ವಾಮಿ ಪ್ರತಿ ತಿಂಗಳು 20 ರಿಂದ 30 ಬಾರಿ ಕರೆ ಮಾಡಿದ್ದಾನೆ. ಇಬ್ಬರೂ ಸುಮಾರು ಹತ್ತು ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ. ಆದರೆ, ಪ್ರಶ್ನೆ ಪತ್ರಿಕೆ ಸೋರಿಕೆಯಾದ ಬಳಿಕ ಇಬ್ಬರ ನಡುವೆ ಯಾವುದೇ ಮಾತುಕತೆ ನಡೆದಿಲ್ಲ ಎಂಬ ಮಾಹಿತಿಯನ್ನು ಸಿಐಡಿ ಸಂಗ್ರಹ ಮಾಡಿದೆ.[ಪತ್ರಿಕೆ ಸೋರಿಕೆ : ಟೊಮೆಟೊ ಅಣ್ಣನ ಮಗ ಸಿಕ್ಕಿಬಿದ್ದ]

ಕರ್ನಾಟಕ ಸರ್ಕಾರ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದ ತನಿಖೆಯನ್ನು ಸಿಐಡಿಗೆ ವಹಿಸಿದೆ. ಈ ಪ್ರಕರಣದಲ್ಲಿ ಇದುವರೆಗೂ ಒಟ್ಟು 17 ಜನರನ್ನು ಬಂಧಿಸಲಾಗಿದೆ. ಪ್ರಮುಖ ಆರೋಪಿಗಳಾದ ಕಿರಣ್ ಮತ್ತು ಶಿವಕುಮಾರ ಸ್ವಾಮಿಯನ್ನು ಬಂಧಿಸಲಾಗಿದೆ....

ಮಾಜಿ ಸಚಿವರ ವಿಚಾರಣೆ

ಮಾಜಿ ಸಚಿವರ ವಿಚಾರಣೆ

ಹೊನ್ನಾಳಿ ಕ್ಷೇತ್ರದ ಮಾಜಿ ಶಾಸಕ ಮತ್ತು ಮಾಜಿ ಅಬಕಾರಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರ ಹೆಸರು ರಸಾಯನ ವಿಜ್ಞಾನ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಕೇಳಿಬಂದಿದೆ. ಆದರೆ, ರೇಣುಕಾಚಾರ್ಯ ಅವರು ಈ ಆರೋಪವನ್ನು ತಳ್ಳಿಹಾಕಿದ್ದಾರೆ.

ಶಿವಕುಮಾರಸ್ವಾಮಿ ಪರಿಚಯವಿತ್ತು

ಶಿವಕುಮಾರಸ್ವಾಮಿ ಪರಿಚಯವಿತ್ತು

ರೇಣುಕಾಚಾರ್ಯ ಅವರಿಗೆ ಪ್ರಶ್ನೆ ಪತ್ರಿಕೆ ಹಗರಣದ ಕಿಂಗ್ ಪಿನ್ ಶಿವಕುಮಾರ ಸ್ವಾಮಿ ಪರಿಚಯವಿತ್ತು. ಇಬ್ಬರು ಮುಖಾಮುಖಿ ಭೇಟಿಯನ್ನು ಆಗಿದ್ದರು. ಫೋನ್‌ನಲ್ಲಿ ಮಾತನಾಡುತ್ತಿದ್ದರು. ಆದರೆ, ಪ್ರಶ್ನೆ ಪತ್ರಿಕೆ ಸೋರಿಕೆಯಾದ ಬಳಿಕ ಇಬ್ಬರ ನಡುವೆ ಯಾವುದೇ ಮಾತುಕತೆ ನಡೆದಿಲ್ಲ.

ಪ್ರಕರಣಕ್ಕೂ ಅವರಿಗೂ ಸಂಬಂಧವಿಲ್ಲ

ಪ್ರಕರಣಕ್ಕೂ ಅವರಿಗೂ ಸಂಬಂಧವಿಲ್ಲ

ರೇಣುಕಾಚಾರ್ಯ ಅವರು ಸ್ನೇಹಿತರು ಎಂದು ಶಿವಕುಮಾರ ಸ್ವಾಮಿ ಹೇಳಿದ್ದಾನೆ. ಅವರಿಗೂ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಆತ ಸಿಐಡಿ ಪೊಲೀಸರಿಗೆ ಹೇಳಿಕೆ ಕೊಟ್ಟಿದ್ದಾನೆ.

ರೇಣುಕಾಚಾರ್ಯ ವಿಚಾರಣೆ

ರೇಣುಕಾಚಾರ್ಯ ವಿಚಾರಣೆ

ಶಿವಕುಮಾರ ಸ್ವಾಮಿ ಮತ್ತು ರೇಣುಕಾಚಾರ್ಯ ಅವರ ಸ್ನೇಹದ ಬಗ್ಗೆ ತಿಳಿಯಲು ಸಿಐಡಿ ಅಧಿಕಾರಿಗಳು ಅವರ ವಿಚಾರಣೆ ನಡೆಸುವ ಸಾಧ್ಯತೆ ಇದೆ. ಯಾವಾಗ ವಿಚಾರಣೆ ನಡೆಸಲಾಗುತ್ತದೆ ಎಂಬುದನ್ನು ಮಾತ್ರ ಅಧಿಕಾರಿಗಳು ತಿಳಿಸಿಲ್ಲ.

ಬಿಬಿಎಂಪಿ ಮಾಜಿ ಸದಸ್ಯನ ಬಂಧನ

ಬಿಬಿಎಂಪಿ ಮಾಜಿ ಸದಸ್ಯನ ಬಂಧನ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ರಾಜ್‌ಕುಮಾರ್ ವಾರ್ಡ್‌ನ ಮಾಜಿ ಸದಸ್ಯ (ಬಿಜೆಪಿ) ಗಂಗಬೈರಯ್ಯ ಅವರನ್ನು ಈ ಹಗರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ. ಸದ್ಯ, ಅವರು ನ್ಯಾಯಾಂಗ ಬಂಧನದಲ್ಲಿದ್ದು, ಆರೋಪಿಯ ಹೆಚ್ಚಿನ ವಿಚಾರಣೆಗೆ ಪೊಲೀಸರ ವಶಕ್ಕೆ ಪಡೆಯುವ ಸಾಧ್ಯತೆ ಇದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka Criminal Investigation Department (CID) police may question Former minister and BJP leader MP Renukacharya in connection with the 2nd PUC Chemistry question paper leak scam.
Please Wait while comments are loading...