Property Tax: ಆಸ್ತಿ ಮಾಲೀಕರು ಏಪ್ರಿಲ್‌ನೊಳಗೆ ಈ ಕೆಲ್ಸ ಮಾಡದಿದ್ರೆ ಸಂಕಷ್ಟ ಕಟ್ಟಿಟ್ಟ ಬುತ್ತಿ
Property Tax: ಆಸ್ತಿ ತೆರಿಗೆ ವಿಚಾರ ಮುನ್ನಲೆಗೆ ಬರುತ್ತಲೇ ಇರುತ್ತದೆ. ಅದರಲ್ಲೂ ಮುಂದಿನ ತಿಂಗಳು ಆರ್ಥಿಕ ವರ್ಷದ ತಿಗಳು ಆಗಿರುವುದರಿಂದ ಹಲವು ನಿಯಮಗಳಲ್ಲಿ ಬದಲಾವಣೆಯಾಗಲಿದ್ದು, ಇದರಿಂದ ಜನಸಾಮಾನ್ಯರ ಮೇಲೆ ತುಸು ಹೊರೆಯಾಗುವುದಂತೂ ಗ್ಯಾರಂಟಿ. ಹಾಗೆಯೇ ಇದೀಗ ದಾವಣಗೆರೆಯಲ್ಲಿ ಪಾಲಿಕೆ ಆಸ್ತಿ ಮಾಲೀಕರು 2025ರ ಏಪ್ರಿಲ್‌ನೊಳಗೆ ಈ ಕೆಸಲ ಮಾಡದಿದ್ರೆ ಬಹುದೊಡ್ಡ ತೊಂದರೆಯನ್ನು ಅನುಭವಿಸಬೇಕಾಗುತ್ತದೆ. ಹಾಗಾದ್ರೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ದಾವಣಗೆರೆ ಮಹಾನಗರ ಪಾಲಿಕೆ ಆಸ್ತಿ ಮಾಲೀಕರು ಪ್ರಸಕ್ತ ಸಾಲಿನ ಆಸ್ತಿ ತೆರಿಗೆ ಹಾಗೂ ಅದರೊಂದಿಗೆ ನೀರು ಬಳಕೆ ಶುಲ್ಕ, ಯು.ಜಿ.ಡಿ ಶುಲ್ಕ, ಮಳಿಗೆ ಬಾಡಿಗೆ ಮತ್ತು ಟ್ರೇಡ್ ಲೈಸೆನ್ಸ್ ಶುಲ್ಕವನ್ನು ಏಪ್ರಿಲ್ ತಿಂಗಳೊಳಗೆ ಪಾವತಿಸಿದ್ರೆ ಶೇಕಡ 5ರಷ್ಟು ರಿಯಾಯಿತಿ ಪಡೆಯಬಹುದು.

ಈ http://davangerecitycorp.org ಲಿಂಕ್ ಬಳಸಿ ಆನ್‍ಲೈನ್ ಮೂಲಕ ಯುಪಿಐ ಉಪಯೋಗಿಸಿಕೊಂಡು ಆಸ್ತಿ ತೆರಿಗೆ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಪಾಲಿಕೆ ಆಯುಕ್ತೆ ರೇಣುಕಾ ಅವರು ತಿಳಿಸಿದ್ದಾರೆ.
ಬಿ ಮತ್ತು ಇ ಖಾತಾ ಬಗ್ಗೆ ಮಾಹಿತಿ: ಅಕ್ರಮ ಬಡಾವಣೆ ಹಾಗೂ ಅನಧಿಕೃತ ಆಸ್ತಿ ಮಾಲೀಕರಿಗೆ ಸರ್ಕಾರವು ಬಿ-ಖಾತಾ ಅಭಿಯಾನ ಹಮ್ಮಿಕೊಂಡಿದೆ. ಹಾಗೆಯೇ ಇದೀಗ ಸರ್ಕಾರದ ಆದೇಶದ ಮೇರೆಗೆ ದಾವಣಗೆರೆ ಮಹಾನಗರ ಪಾಲಿಕೆ ಸೇರಿದಂತೆ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್, ಗ್ರಾಮ ಪಂಚಾಯತ್ಗಳಲ್ಲಿ ಈಗಾಗಲೇ ಕಂದಾಯ ಆಸ್ತಿಗಳಿಗೆ ಬಿ ಹಾಗೂ ಇ ಖಾತಾ ಉಚಿತವಾಗಿ ನೀಡಲಾಗುತ್ತಿದೆ.
ಅದರಲ್ಲೂ ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲೇ ಹೆಚ್ಚು ಆಸ್ತಿಗಳಿದ್ದು, ಬಿ ಹಾಗೂ ಇ ಖಾತಾ ಪಡೆಯಲು ಹೆಚ್ಚೆಚ್ಚು ಅರ್ಜಿಗಳು ಬಂದಿವೆ. ಈಗಾಗಲೇ ಅರ್ಜಿ ಸಲ್ಲಿಸಿಕೆ ಮಾಡಿದವರಿಗೆ ಪಾಲಿಕೆಯಿಂದ ಬಿ ಹಾಗೂ ಇ ಖಾತೆ ನೀಡಲಾಗುತ್ತಿದೆ.
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅನಧಿಕೃತ ಬಡಾವಣೆಗಳಲ್ಲಿ ಆಸ್ತಿಗಳಿವೆ. ಪಾಲಿಕೆ ಅಧಿಕಾರಿಗಳು ಸರ್ಕಾರದ ಆದೇಶದ ಅನ್ವಯ ಬಿ ಹಾಗೂ ಇ ಖಾತಾಗಳನ್ನು ಹಂಚಿಕೆ ಮಾಡುತ್ತಿದ್ದಾರೆ. ಈಗಾಗಲೇ ಜಿಲ್ಲಾಧಿಕಾರಿ ಡಾ.ಗಂಗಾಧರ್ ಸ್ವಾಮಿ ಜಿಎಂ ಅವರು ಬಿ.ಖಾತಾ ನೀಡಲು ಜಿಲ್ಲೆಯ ಎಲ್ಲಾ ಪಿಡಿಓ, ಪುರಸಭೆ, ನಗರಸಭೆ, ಪಾಲಿಕೆಗೆ ಸೂಚಿಸಿದ್ದಾರೆ.
ಆದೇಶ ಬರುತ್ತಿದ್ದಂತೆಯೇ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 450 ಅರ್ಜಿಗಳು ಬಂದಿದ್ದು, ಇನ್ನು ಜಿಲ್ಲೆಯಾದ್ಯಂತ ಮಾಹಿತಿ ಲಭ್ಯ ಆಗಬೇಕಿದೆ. ಈ ಖಾತಾಗಳನ್ನು ನೀಡಲು 10,000 ರೂಪಾಯಿ ನಿಗದಿಪಡಿಸಲಾಗಿತ್ತು. ದಾವಣಗೆರೆ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಅವರ ಸೂಚನೆ ಮೇರೆಗೆ 50 ರೂಪಾಯಿ ಪಡೆದು ಖಾತಾ ನೀಡಲಾಗುತ್ತಿದೆ.
ಈ ಬಗ್ಗೆ ಮಾತನಾಡಿದ ಜಿಲ್ಲಾಧಿಕಾರಿ ಗಂಗಾಧರ್ ಸ್ವಾಮಿ .ಜಿ.ಎಂ.ಅವರು, ಬಿ ಖಾತಾ ಮಾಡಲು ಎಲ್ಲಾ ಪಿಡಿಒ, ಪುರಸಭೆ, ನಗರ ಸಭೆ, ಪಾಲಿಕೆಗೆ ಸೂಚನೆ ಕೊಟ್ಟಿದ್ದೇವೆ. ಬಿ ಅಥವಾ ಇ ಖಾತಾ ಮಾಡಲು ಆಂದೋಲನ ಮಾಡಿದ್ದೇವೆ ಎಂದು ಹೇಳಿದರು.
ಈಗಾಗಲೇ ದಾವಣಗೆರೆ ಪಾಲಿಕೆಗೆ 450 ಅರ್ಜಿಗಳು ಬಂದಿವೆ. ಜಿಲ್ಲೆಯಲ್ಲಿ ಎಷ್ಟು ಬಂದಿವೆ ಎಂಬ ಮಾಹಿತಿ ಲಭ್ಯವಾಗಬೇಕಿದೆ. ಅಲ್ಲದೆ 14ಕ್ಕೆ ಹರಿಹರದಲ್ಲಿ ಸಭೆ ಮಾಡುತ್ತೇವೆ. ಪಾಲಿಕೆಯಿಂದ 10,000 ರೂಪಾಯಿ ಶುಲ್ಕ ನಿಗದಿ ಮಾಡಲಾಗಿತ್ತು. ಆದರೂ ಸಚಿವರ ಸೂಚನೆ ಮೇರೆಗೆ ಹಣ ಪಡೆಯುತ್ತಿಲ್ಲ. ಬದಲಿಗೆ ಉಚಿತವಾಗಿ ಬಿ ಹಾಗೂ ಇ ಖಾತೆ ಮಾಡಿಕೊಡುತ್ತೇವೆ. ಸರ್ಕಾರದ ಮಾನದಂಡದ ಮೂಲಕ ಅರ್ಜಿ ಕೊಟ್ಟರೆ ಬಿ, ಇ ಖಾತಾ ನೀಡಲಾಗುತ್ತದೆ ಎಂದರು.
ಪಾಲಿಕೆ ಆಯುಕ್ತೆ ರೇಣುಕಾ ಪ್ರತಿಕ್ರಿಯಿಸಿ ಮಹಾನಗರ ಪಾಲಿಕೆಯಿಂದ ಫೆ.20 ರಿಂದ ಬಿ ಖಾತೆ ಕೊಡಲು ಆರಂಭಿಸಿದ್ದೇವೆ. ದಾವಣಗೆರೆ ನಗರದಲ್ಲಿ ಒಟ್ಟು 20 ಸಾವಿರ ಆಸ್ತಿಗಳಿವೆ ಎಂದು ಅಂದಾಜಿಸಲಾಗಿದೆ. ನೇರವಾಗಿ ಮೂರು ವಲಯ ಕಚೇರಿಗಳಲ್ಲಿ ಅರ್ಜಿ ಸಲ್ಲಿಸಬಹುದು ಎಂದರು.
ಖಾತಾ ಮಾಡಿಸಲು ಬೇಕಾದ ದಾಖಲೆಗಳು
* ಮಾಲೀಕರ ಆಧಾರ್ ಕಾರ್ಡ್
* ವೋಟರ್ ಐಡಿ
* ಆಸ್ತಿ ಪತ್ರ
* ತೆರಿಗೆ ಕಟ್ಟಿದ ರಶೀದಿ ಜೊತೆ ಸಲ್ಲಿಸಬೇಕು
ಅರ್ಜಿ, ಆಧಾರ್ ಕಾರ್ಡ್, ವೋಟರ್ ಐಡಿ, ಆಸ್ತಿ ಪತ್ರ, ತೆರಿಗೆ ಕಟ್ಟಿದ ರಶೀದಿ ಜೊತೆ ಸಲ್ಲಿಸಿದರೆ, ನೊಂದಣಿ ಮಾಡಿಕೊಳ್ಳಬಹುದು. ಖಾತಾ ಇದ್ದರೆ ರಸ್ತೆ, ಚರಂಡಿ, ವಿದ್ಯುತ್ ಸಂಪರ್ಕ ನಾವು ಕೊಡಬಹುದು. ಈ ಬಗ್ಗೆ ಆಟೋ ಅನೌನ್ಸ್ಮೆಂಟ್ ಮಾಡಿ ಅಂತರ್‌ಜಾಲದಲ್ಲಿ ಪ್ರಚಾರ ಮಾಡಲಾಗುತ್ತಿದೆ. ಖಾತಾ ಮಾಡಿಸಲು ಮೇ 10 ಕೊನೆ ದಿನವಾಗಿದೆ ಎಂದು ಪಾಲಿಕೆ ಆಯುಕ್ತೆ ರೇಣುಕಾ ಮಾಹಿತಿ ನೀಡಿದರು.
ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 20,000 ಸಾವಿರ ಆಸ್ತಿಗಳಿವೆ. ಬಿ ಖಾತಾಗಾಗಿ 450 ಅರ್ಜಿ ಬಂದಿದ್ದು, ಈಗಾಗಲೇ 250 ಖತಾ ಕೊಟ್ಟಿದ್ದೇವೆ. ದಿನಕ್ಕೆ 100-150 ಅರ್ಜಿಗಳು ಬರುತ್ತಿವೆ. ಈಗಾಗಲೇ ಕೆಲವರಿಗೆ ಬಿ ಖಾತಾವನ್ನು ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ನೀಡಿದ್ದಾರೆ. ಸಿಬ್ಬಂದಿ ಕಡಿಮೆ ಇರುವ ಹಿನ್ನೆಲೆ ಸಮಸ್ಯೆ ಆಗುತ್ತಿದೆ ಎಂದರು.
ವಿನಾಯಕ ನಗರ, ಯಲ್ಲಮ್ಮ ನಗರ, ನಿಟ್ಟುವಳ್ಳಿ ಆಶೋಕ್ ನಗರದ ಭಾಗದಲ್ಲಿ ಹೆಚ್ಚು ಬಿ ಖಾತೆ ಇವೆ. ಇದೀಗ ಎರಡು ತೆರಿಗೆ ಕಟ್ಟಬೇಕು. ಮುಂದಿನ ದಿನ ಒಂದು ತೆರಿಗೆ ಕಟ್ಟಬೇಕು. 50 ರೂಪಾಯಿ ಹಣ ಸಂದಾಯ ಮಾಡಿದರೆ ಬಿ-ಖಾತೆ ಸಿಗಲಿದೆ ಎಂದು ತಿಳಿಸಿದರು. ಅಲ್ಲದೆ, ಹಳ್ಳಿ, ತಾಲೂಕು, ಪಟ್ಟಣದ ಜನ ಆಯಾಯ ಸ್ಥಳೀಯ ಸಂಸ್ಥೆಗಳಾದ ನಗರಸಭೆ, ಪಟ್ಟಣ ಪಂಚಾಯತ್, ಪುರಸಭೆ, ಗ್ರಾಮ ಪಂಚಾಯತಿಗಳಲ್ಲಿ ಖಾತಾ ಪಡೆಯಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
-
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ












Click it and Unblock the Notifications