ಕಳ್ಳಕಾಕರು, ಕೊಲೆಗಡುಕರ ಸಿಂಹಸ್ವಪ್ನವಾಗಿದ್ದ "ತುಂಗಾ" ಇನ್ನು ನೆನಪಷ್ಟೇ...
ದಾವಣಗೆರೆ, ಆಗಸ್ಟ್ 26: ಪೊಲೀಸ್ ಇಲಾಖೆಯ 'ಕ್ರೈಮ್ ಡಾಗ್' ತುಂಗಾ ಕಾಲಿಟ್ಟರೆ ಸಾಕು ಆರೋಪಿಗಳ ಎದೆಯಲ್ಲಿ ಢವಢವ ಶುರುವಾಗುತಿತ್ತು. ಯಾಕೆಂದರೆ ಅಷ್ಟೊಂದು ಚಾಣಾಕ್ಷ, ಚಾಕಚಕ್ಯತೆಯಿಂದ ಆರೋಪಿಗಳನ್ನು ಗುರುತು ಹಿಡಿಯುತಿತ್ತು. ಎಷ್ಟೋ ಪ್ರಕರಣಗಳನ್ನು ಬೇಧಿಸಿ ಶಹಬ್ಬಾಸ್ ಗಿರಿ ಪಡೆದಿತ್ತು. ಅಂದಹಾಗೆ ಅಂತಾರಾಷ್ಟ್ರೀಯ ಶ್ವಾನ ದಿನಾಚರಣೆ.
ಕ್ಲಿಷ್ಟಕರ ಪ್ರಕರಣಗಳನ್ನು ಈ ಶ್ವಾನದಿಂದಾಗಿ ಪತ್ತೆ ಹಚ್ಚಲಾಗಿತ್ತು. ದೇಶದ ಗಮನ ಸೆಳೆಯುವಂತೆ ಸಾಧನೆ ಮಾಡಿದ್ದ ತುಂಗಾ ಇಂದು ಅನಾರೋಗ್ಯಕ್ಕೆ ಒಳಗಾಗಿ ಮೃತಪಟ್ಟಿದೆ.
ತುಂಗಾಳ ಬಿಳಿರಕ್ತ ಕಣ ಕಡಿಮೆಯಾಗಿದ್ದ ಕಾರಣ ಸ್ವಲ್ಪ ಸೊರಗಿತ್ತು. ವೈದ್ಯರು ಹೇಳುವ ಪ್ರಕಾರ ಡೆಂಗ್ಯೂ ಕಾಣಿಸಿಕೊಂಡ ಕಾರಣ ಮೃತಪಟ್ಟಿದೆ. ಆರೋಗ್ಯವಾಗಿಯೇ ಇದ್ದ ತುಂಗಾ ಕಳೆದ ಕೆಲ ದಿನಗಳಿಂದ ಸ್ವಲ್ಪ ಸೊರಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅಸುನೀಗಿದೆ. ತನ್ನ ಜೀವಿತಾವಧಿಯಲ್ಲಿ ಪೊಲೀಸ್ ಇಲಾಖೆಗೆ ನೀಡಿರುವ ಸೇವೆ ಅನನ್ಯ ಹಾಗೂ ಅತ್ಯದ್ಭುತ.
ಇದುವರೆಗೆ 650 ಪ್ರಕರಣಗಳಲ್ಲಿ ತುಂಗಾ ಹಾಜರಾತಿ ಹಾಕಿತ್ತು. ಈ ಪೈಕಿ 71 ಕೊಲೆ ಪ್ರಕರಣಗಳು, 35 ಕಳುವು ಪ್ರಕರಣಗಳಲ್ಲಿ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿತ್ತು. ನಾಲ್ಕು ಪ್ರಕರಣಗಳಲ್ಲಿ ಗಲ್ಲು ಹಾಗೂ 4 ಕೇಸ್ ಗಳಲ್ಲಿ ಆರೋಪಿಗಳಲ್ಲಿ ಜೀವಾವಧಿ ಶಿಕ್ಷೆಯಾಗುವಲ್ಲಿ ಈ ಶ್ವಾನದ ಪಾತ್ರ ಮಹತ್ವದ್ದಾಗಿತ್ತು.

ಅತ್ಯಾಚಾರ ಆರೋಪಿ ಪತ್ತೆ
2010ರಲ್ಲಿ ಬೆಂಗಳೂರಿನಿಂದ ದಾವಣಗೆರೆಗೆ ತುಂಗಾ ಕರೆದುಕೊಂಡು ಬರಲಾಗಿತ್ತು. 2000 ರಲ್ಲಿ ರೂಬಿ ಕ್ರೈಂ ಡಾಗ್ ಆಗಿ ಬಂದಿತ್ತು. ಸುಮಾರು ಹತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿತ್ತು. ನಂತರ ಬಂದ ತುಂಗಾ ಬರೋಬ್ಬರಿ ಹನ್ನೆರಡೂವರೆ ವರ್ಷಗಳ ಕಾಲ ದಾವಣಗೆರೆ ಜಿಲ್ಲಾ ಪೊಲೀಸ್ ಇಲಾಖೆಗೆ ತನ್ನದೇ ಆದ ಕೊಡುಗೆ ನೀಡಿದೆ.
ಹರಿಹರ ಪಟ್ಟಣದಲ್ಲಿ ಅಪ್ರಾಪ್ತ ಬಾಲಕಿ ಹತ್ಯೆಯಾಗಿತ್ತು. ಈ ವೇಳೆ ಕೋಮುಗಲಭೆ ನಡೆಯುವ ಸಾಧ್ಯತೆಯೂ ಹೆಚ್ಚಿತ್ತು. ಆದ್ರೆ, ತುಂಗಾ ಆರೋಪಿ ಇಮ್ರಾನ್ ಪತ್ತೆ ಮಾಡಿತ್ತು. ಆ ಬಳಿಕ ಅಪರಾಧ ಸಾಬೀತಾದ ಕಾರಣಕ್ಕೆ ಆತನಿಗೆ ಗಲ್ಲು ಶಿಕ್ಷೆಯನ್ನು ವಿಧಿಸಿ ಪ್ರಥಮ ದರ್ಜೆ ನ್ಯಾಯಾಲಯ ಶಿಕ್ಷೆ ಪ್ರಕಟಿಸಿತ್ತು. ಇನ್ನು ಹಲವಾಗಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹತ್ತನೇ ತರಗತಿ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿತ್ತು. ಈ ಪ್ರಕರಣದ ಆರೋಪಿ ಗುರುತು ಹಿಡಿದಿದ್ದೇ ಇದೇ ಶ್ವಾನ ತುಂಗಾ.

71 ಕೊಲೆ ಪ್ರಕರಣ ಬೇಧಿಸಲು ಪೊಲೀಸರಿಗೆ ನೆರವು
ಹೊನ್ನಾಳಿ ರೇಪ್ ಅಂಡ್ ಮರ್ಡರ್, ಚನ್ನಗಿರಿ ತಾಲೂಕಿನ ಸೂಳೆಕೆರೆ ಗುಡ್ಡದಲ್ಲಿ ನಡೆದಿದ್ದ ಶೂಟೌಟ್ ಪ್ರಕರಣ, ದಾವಣಗೆರೆಯ ಬೇತೂರಿನಲ್ಲಿ ನಡೆದಿದ್ದ ವೃದ್ಧ ದಂಪತಿ ಹತ್ಯೆ ಪ್ರಕರಣ ಸೇರಿದಂತೆ 71 ಕೊಲೆ ಪ್ರಕರಣ ಬೇಧಿಸಲು ಪೊಲೀಸರಿಗೆ ಸಹಾಯ ಮಾಡಿದ ಕೀರ್ತಿ ಈ ಶ್ವಾನಕ್ಕೆ ಸಲ್ಲುತ್ತದೆ. ಕರ್ನಾಟಕ ರಾಜ್ಯದಲ್ಲಿ ಶ್ವಾನವೊಂದು ಇಷ್ಟೊಂದು ಪ್ರಕರಣಗಳಲ್ಲಿ ಆರೋಪಿಗಳನ್ನು ಗುರುತು ಹಿಡಿದಿರುವುದು ಇದೇ ಮೊದಲು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಹ್ಯಾಂಡ್ಲರ್ ಹೇಳಿದ ಹಾಗೆ ಕೇಳುತ್ತಿದ್ದ ಶ್ವಾನ
ಡಾಬರ್‌ಮನ್ ತಳಿಯ ತುಂಗಾ ದಾವಣಗೆರೆಯ ಪೊಲೀಸ್ ಇಲಾಖೆಯ ಹೆಮ್ಮೆ. 2010ರ ಏಪ್ರಿಲ್ 16ರಂದು ಜನಿಸಿದ ಇದಕ್ಕೆ ಬೆಂಗಳೂರಿನಲ್ಲಿ ತರಬೇತಿ ಕೊಡಿಸಿ ದಾವಣಗೆರೆ ಶ್ವಾನದಳಕ್ಕೆ ಸೇರ್ಪಡೆ ಮಾಡಲಾಗಿದೆ. ತುಂಗಾ ಸ್ವಾಮಿನಿಷ್ಠೆಗೆ ಹೆಸರುವಾಸಿಯಾಗಿದ್ದ ಈ ಶ್ವಾನ 2365 ವಾಸನೆಗಳನ್ನು ಗ್ರಹಿಸುವ ಶಕ್ತಿ ಹೊಂದಿತ್ತು. ಜೊತೆಗೆ ಈ ಶ್ವಾನ ಮಾತ್ರ ಹ್ಯಾಂಡ್ಲರ್ ಹೇಳಿದ ಹಾಗೆ ಕೇಳುತ್ತಿತ್ತು. ಬೆಳಗ್ಗೆ 5.30 ಕ್ಕೆ ಶ್ವಾನಕ್ಕೆ ತರಬೇತಿ ನೀಡಲಾಗುತಿತ್ತು. ಮಾತ್ರವಲ್ಲ, ತನ್ನ ಅದ್ಭುತ ಕಾರ್ಯವೈಖರಿಗೆ ಸಾಕಷ್ಟು ಪ್ರಶಸ್ತಿಗಳನ್ನು ಗಳಿಸಿಕೊಂಡಿತ್ತು.

ಮನೆಮಗಳಂತಿದ್ದ ತುಂಗಾ
ತುಂಗಾ ಅಂದರೆ ನಮಗೆ ತುಂಬಾನೇ ಅಚ್ಚುಮೆಚ್ಚು. ಆದರೆ ಅನಾರೋಗ್ಯದಿಂದ ಸಾವು ಕಂಡಿದ್ದು ತುಂಬಾ ಬೇಸರ ತರಿಸುತ್ತದೆ. ಈ ತಳಿಯ ಶ್ವಾನ ಸುಮಾರು 12 ವರ್ಷಗಳ ಕಾಲ ಬದುಕಬಹುದು. ಇದು ಇನ್ನು ಮೂರ್ನಾಲ್ಕು ತಿಂಗಳು ಕಳೆದಿದ್ದರೆ 13ನೇ ವರ್ಷಕ್ಕೆ ಕಾಲಿಡುತಿತ್ತು. ಇಲ್ಲ ಎಂದು ಊಹಿಸಿಕೊಳ್ಳುವುದೇ ಕಷ್ಟವಾಗುತ್ತದೆ. ಇಂಥ ಸಾಧನೆ ಮಾಡಿದ ತುಂಗಾ ಮನೆಮಗಳಂತಿದ್ದಳು. ಪೊಲೀಸ್ ಇಲಾಖೆಗೂ ಸಾಕಷ್ಟು ನೆರವು ನೀಡಿದೆ. ಇಲ್ಲ ಎಂಬುದನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ ಎಂದು ತುಂಗಾ ನೋಡಿಕೊಳ್ಳುತ್ತಿದ್ದ ಪೊಲೀಸ್ ಡಾಗ್ ಸ್ಕ್ವಾಡ್‌ನ ಕೆ. ಎಂ. ಪ್ರಕಾಶ್ ತಿಳಿಸಿದರು.
-
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ












Click it and Unblock the Notifications