ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪೊಲೀಸರು ಜನಸ್ನೇಹಿಯಾಗಿ ಕೆಲಸ ನಿರ್ವಹಿಸಬೇಕು: ಗೃಹ ಸಚಿವ ಬೊಮ್ಮಾಯಿ

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಜೂನ್ 16: ಸಮಾಜದಲ್ಲಿ ಅಪರಾಧಗಳನ್ನು ತಡೆಗಟ್ಟುವುದು ಮತ್ತು ಜನಸ್ನೇಹಿಯಾಗಿ ಕೆಲಸ ಮಾಡಬೇಕು ಎಂಬುದೇ ಪೊಲೀಸ್‌ ಇಲಾಖೆಯ ಆಶಯವಾಗಿದ್ದು, ಈ ನಿಟ್ಟಿನಲ್ಲಿ ಕೆಲಸ ನಿರ್ವಹಿಸುವಂತೆ ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Recommended Video

Ramesh Aravind's week days with ramesh is start from June 18th | Oneindia Kannada

ದಾವಣಗೆರೆ ಜಿಲ್ಲಾ ಎಸ್ಪಿ ಕಚೇರಿಯಲ್ಲಿ ಇಲಾಖಾ ಪ್ರಗತಿ ಪರಿಶೀಲನಾ ಸಭೆಯ ನಂತರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ""ದಾವಣಗೆರೆ ಜಿಲ್ಲೆಯಲ್ಲಿ ಸ್ಮಾರ್ಟ್ ಸಿಟಿ ವತಿಯಿಂದ ವಿನೂತನವಾಗಿ ಕೇಂದ್ರೀಕೃತ ಕಮ್ಯಾಂಡ್ ಮತ್ತು ಕಂಟ್ರೋಲ್ ರೂಂ ನ್ನು ಸ್ಥಾಪಿಸಲಾಗಿದೆ'' ಎಂದು ತಿಳಿಸಿದರು.

 ಠಾಣೆಯ ರೆಸ್ಟ್ ರೂಂನಲ್ಲೇ ಜೂಜಾಟ, ಐವರು ಕಾನ್ ಸ್ಟೆಬಲ್ ಗಳು ವಶಕ್ಕೆ ಠಾಣೆಯ ರೆಸ್ಟ್ ರೂಂನಲ್ಲೇ ಜೂಜಾಟ, ಐವರು ಕಾನ್ ಸ್ಟೆಬಲ್ ಗಳು ವಶಕ್ಕೆ

ದಾವಣಗೆರೆ ನಗರದ ಸುಮಾರು 28 ಜಂಕ್ಷನ್ ಗಳಲ್ಲಿ ಕ್ಯಾಮೆರಾ ಅಳವಡಿಸಿ ಕಂಟ್ರೋಲ್ ರೂಂ ನಿಂದ ಟ್ರಾಫಿಕ್ ನಿಯಂತ್ರಣ, ಆಟೋಮ್ಯಾಟಿಕ್ ಸಿಗ್ನಲ್ ಗಳು, ಅಪರಾಧಗಳ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಂಪೂರ್ಣವಾಗಿ ವೀಕ್ಷಣೆ ಮಾಡಿ ವರದಿ ಮಾಡಲಾಗುವುದು ಎಂದರು.

Police Should Do Public Friendly Duty: Home Minister Bommai

ದಾವಣಗೆರೆಯಲ್ಲಿ ಆಧುನಿಕವಾದ ಕಮ್ಯಾಂಡ್ ರೂಂ ನಲ್ಲಿ ಕೆಲಸ ಆರಂಭಿಸಲಾಗಿದೆ. ಈ ವ್ಯವಸ್ಥೆ ಉತ್ತಮವಾಗಿದ್ದು, ಇದರ ಬಳಕೆ ನಿರಂತರವಾಗಿ ಆಗಬೇಕು. ಈ ಕೇಂದ್ರದ ನಿರ್ವಹಣೆಗೆ ಸಂಬಂಧಿಸಿದಂತೆ ಒಂದಿಷ್ಟು ಸಲಹೆ ಸೂಚನೆಗಳನ್ನು ನೀಡಿದ್ದೇನೆ. 360 ಡಿಗ್ರಿ ಕ್ಯಾಮೆರಾ ಬಳಕೆ, ಫೇಸ್ ರೀಡಿಂಗ್ ಕ್ಯಾಮೆರಾಗಳು, ಥರ್ಮಲ್ ಎಂಗೇಜಿಂಗ್, ನಂ.ಪ್ಲೇಟ್ ಪತ್ತೆ ಹಚ್ಚುವ ಕ್ಯಾಮೆರಾಗಳನ್ನು ಅಳವಡಿಸಲು ಮತ್ತು ನಿರಂತರವಾಗಿ ನಿರ್ವಹಣೆ ಮಾಡುವ ಕುರಿತಾಗಿ ಸಲಹೆ ನೀಡಿದ್ದೇನೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

Police Should Do Public Friendly Duty: Home Minister Bommai

ಸ್ಮಾರ್ಟ್ ಸಿಟಿ ವತಿಯಿಂದ 03 ಕಮ್ಯಾಂಡೋ ವಾಹನಗಳನ್ನು ನೀಡಲಾಗಿದ್ದು, ನಗರದ ರಕ್ಷಣೆಗೆ ಸಂಬಂಧಿಸಿದಂತೆ ಇದು ಸಹಕಾರಿಯಾಗಲಿದೆ. ಸ್ಮಾರ್ಟ್ ಸಿಟಿ ಯೋಜನೆಯ ಇಲಾಖೆಯೊಂದಿಗೆ ಉತ್ತಮವಾಗಿ ಸಹಕರಿಸುತ್ತಿದ್ದು, ಪೊಲೀಸ್ ಇಲಾಖೆಯೂ ಉತ್ತಮ ಸೇವೆಯನ್ನು ನೀಡುತ್ತಾ ಬಂದಿದೆ ಎಂದು ಮಾಹಿತಿ ನೀಡಿದರು.

English summary
Home Minister Basavaraj Bommai has instructed officials to act in this regard as it is the wish of the Police Department to prevent crimes in society and to act in a responsible manner.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X