ದಾವಣಗೆರೆ ಪೊಲೀಸ್ ಇಲಾಖೆಯಲ್ಲೊಬ್ಬ ಪಾಕಿಸ್ತಾನ ಪ್ರೇಮಿ!

ದಾವಣಗೆರೆ, ಆಗಸ್ಟ್ 24: ದಾವಣಗೆರೆಯ ಬಸವನಗರ ಪೊಲೀಸ್ ಠಾಣೆಯ ಪೊಲೀಸ್ ಪೇದೆ ಸನಾವುಲ್ಲಾ ಪಾಕಿಸ್ತಾನ ದೇಶದ ಪ್ರೇಮಿಯಾಗಿದ್ದಾನೆ. ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದು, ಪಾಕಿಸ್ತಾನದ ಮೇಲೆ ಪ್ರೇಮ ಹೊಂದಿರುವ ಈತ "ಪವರ್ ಆಫ್ ಪಾಕಿಸ್ತಾನ" ಎನ್ನುವ ಪೇಜ್ ಶೇರ್ ಮಾಡುತ್ತಿದ್ದನಲ್ಲದೆ, ವಾಟ್ಸಪ್ ಗ್ರೂಪ್ ನಲ್ಲೂ ಸಹ ಪೋಸ್ಟ್ ಮಾಡುತ್ತಿದ್ದ ಎನ್ನಲಾಗಿದೆ.

Recommended Video

      ಹಿಂದಿ ಹೇರಿಕೆ ವಿರುದ್ಧ HDK ಬ್ಯಾಟಿಂಗ್ | Oneindia Kannada

      ಬಹಳ ದಿನಗಳಿಂದ ಇವನು ಈ ಕೃತ್ಯ ಮಾಡುತ್ತಾ ಬಂದಿದ್ದು, ಆದರೆ ಅಚಾತುರ್ಯದಿಂದ "2008ರ ಪೊಲೀಸ್ ಬ್ಯಾಚ್" ಎಂಬ ವಾಟ್ಸಪ್ ಗ್ರೂಪಿನಲ್ಲಿ "ಪವರ್ ಆಫ್ ಪಾಕಿಸ್ತಾನ್" ಎಂಬ ಫೇಸ್‌ಬುಕ್‌ ಪೇಜಿನ ಲಿಂಕ್ ಶೇರ್ ಮಾಡಿದ್ದಾನೆ. ಆಗ ಇದು ಎಲ್ಲರ ಗಮನಕ್ಕೆ ಬಂದಿದೆ. 2014 ರಲ್ಲಿ ಕ್ಷುಲ್ಲಕ ಕಾರಣಕ್ಕೆ ಯುವಕನ ಮೇಲೆ ಹಲ್ಲೆ ಮಾಡಿ ಸಸ್ಪೆಂಡ್ ಆಗಿದ್ದ ಈತ, ಮತ್ತೊಂದು ದೇಶ ವಿರೋಧಿ ಕೆಲಸ ಮಾಡಿದ್ದಾನೆ.

      Davanagere: Police Constable Shares Pro Pakistan Posts In Whatsapp Group

      ಭಾರತ ದೇಶದ ಸಂಬಳ ತೆಗೆದುಕೊಂಡು ಪಾಕಿಸ್ತಾನವನ್ನು ಹೊಗಳುವ ಇವರು ಅಲ್ಲಿಗೇ ಹೋಗಿಬಿಡಲಿ, ಇಂತವರು ಪೊಲೀಸ್ ಇಲಾಖೆಗೆ ಕಪ್ಪು ಚುಕ್ಕೆ ಎಂಬುದು ದಾವಣಗೆರೆ ಜಿಲ್ಲೆಯ ಜನತೆಯ ಆಕ್ರೋಶವಾಗಿದೆ.

      Davanagere: Police Constable Shares Pro Pakistan Posts In Whatsapp Group

      ಈ ಪೊಲೀಸ್ ಪೇದೆಯ ಮೇಲೆ ಹೆಚ್ಚಿನ ಕಾನೂನು ಕ್ರಮ ಜರುಗಲಿ ಎಂಬುದು ದಾವಣಗೆರೆ ಜನತೆಯ ಆಶಯವಾಗಿದೆ. ಈ ಕುರಿತು ತನಿಖೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ತಿಳಿಸಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+