ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Panchamasali reservation: ಪಂಚಮಸಾಲಿ ಸಮುದಾಯಕ್ಕೆ ನ್ಯಾಯ ಕೊಡಿಸಲು ಸಿದ್ಧನಿದ್ದೇನೆ: ಬಸವರಾಜ ಬೊಮ್ಮಾಯಿ

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಜನವರಿ, 15: ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಸಾಮಾಜಿಕ ನ್ಯಾಯ ಕೊಟ್ಟೇ ಕೊಡುತ್ತೇವೆ. ಏನೇ ಮಾಡಿದರೂ ಸಂವಿಧಾನದ ಚೌಕಟ್ಟಿನಲ್ಲಿ ಮಾಡಬೇಕು. ನಿಮ್ಮ ವಿಶ್ವಾಸಕ್ಕೆ ಕೂದಲೆಳೆಗೂ ಚ್ಯುತಿ ಬಾರದಂತೆ ಕ್ರಮ ಕೈಗೊಳ್ಳುತ್ತೇವೆ. ಗಡುವು ಕೊಟ್ಟರೆ ಏನೂ ಆಗಲ್ಲ, ಅವಸರ ಮಾಡಿದರೆ ಶಾಶ್ವತವಾಗಿ ಅನ್ಯಾಯಕ್ಕ ಒಳಗಾಗಬೇಕಾಗುತ್ತದೆ. ಯಾರು ಏನು ಟೀಕೆ ಮಾಡಿದರೂ ಈ ವಿಚಾರದಲ್ಲಿ ತಲೆಕೆಡಿಸಿಕೊಳ್ಳಲ್ಲ. ಈ ಸಮಾಜಕ್ಕೆ ಸಿಗಬೇಕಾದ ಮೀಸಲಾತಿ ಸೌಲಭ್ಯ ದೊರಕಿಸಿಕೊಡಲು ಬದ್ಧನಾಗಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹರಿಹರದಲ್ಲಿ ಭರವಸೆ ನೀಡಿದರು.

ದಾವಣಗೆರೆ: ವಾಲ್ಮೀಕಿ ಶ್ರೀಗಳು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾರನ್ನು ಭೇಟಿ ಮಾಡಲಿಲ್ಲ ಯಾಕೆ?ದಾವಣಗೆರೆ: ವಾಲ್ಮೀಕಿ ಶ್ರೀಗಳು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾರನ್ನು ಭೇಟಿ ಮಾಡಲಿಲ್ಲ ಯಾಕೆ?

ಹರಿಹರ ಪಂಚಮಸಾಲಿ ಪೀಠದಲ್ಲಿ ಹರಜಾತ್ರೆ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ರೈತರ ಸಮಾವೇಶ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಅವಸರದ ನಿರ್ಣಯಗಳಿಂದ ಏನಾಗಿದೆ ಎಂಬುದನ್ನು ಈಗಾಗಲೇ ನಾವು ನೋಡಿದ್ದೇವೆ. ನ್ಯಾಯ ಕೊಡುವಂತಹ ಕೆಲಸ ಆಗಬೇಕೇ ವಿನಃ ಅನ್ಯಾಯ ಮಾಡಬಾರದು. ಸಂವಿಧಾನದ ಚೌಕಟ್ಟಿನಲ್ಲಿಯೇ ಮಾಡಬೇಕು. ಆತುರವಾಗಿ ತೀರ್ಮಾನ ಘೋಷಿಸಿದರೆ ಕೋರ್ಟ್‌ನಲ್ಲಿ ಯಾರಾದರೂ ಪ್ರಕರಣ ದಾಖಲಿಸುತ್ತಾರೆ. ಆಗ ಸಮಸ್ಯೆ ಆಗುತ್ತದೆ. ಬೇರೆ ಬೇರೆ ರೀತಿಯಲ್ಲಿ ಮಾತನಾಡುವುದು ಸರಿಯಲ್ಲ. ನಾವೆಲ್ಲ ಎಷ್ಟು ದಿನ ಇರುತ್ತೇವೆಯೋ ಗೊತ್ತಿಲ್ಲ. ಮಾಡಿರುವ ಕೆಲಸ ಶಾಶ್ವತವಾಗಿರಬೇಕು ಎಂದು ಹೇಳಿದರು.

ಪಂಚಮಸಾಲಿ ಸಮುದಾಯಕ್ಕೆ ಸಿಎಂ ಭರವಸೆ

ಪಂಚಮಸಾಲಿ ಸಮುದಾಯಕ್ಕೆ ಸಿಎಂ ಭರವಸೆ

ಮೀಸಲಾತಿಯನ್ನು ನ್ಯಾಯಸಮ್ಮತವಾಗಿ ಕೊಡುತ್ತೇವೆ. ಅನ್ಯಾಯ ಆಗದ ಹಾಗೆ ಸಾಮಾಜಿಕ ಸಾಮರಸ್ಯ ಕಾಪಾಡುವಂತೆ ತೀರ್ಮಾನ ತೆಗೆದುಕೊಳ್ಳುತ್ತೇವೆ. ಗುಜರಾತ್, ರಾಜಸ್ತಾನ, ಹರಿಯಾಣ, ಮಹಾರಾಷ್ಟ್ರದಲ್ಲಿ ಮೀಸಲಾತಿ ಸಂಬಂಧ ನಿರ್ಣಯ ಆಯ್ತು. ಹೈಕೋರ್ಟ್, ಸುಪ್ರೀಂ ಕೋರ್ಟ್‌ನಲ್ಲಿ ಕೇಸ್ ಬಿದ್ದು ಹೋಯ್ತು. ಮೊದಲ ಹೆಜ್ಜೆ ಸರಿಯಾದ ದಿಕ್ಕಿನಲ್ಲಿ ಇಟ್ಟಿದ್ದೇವೆ. ಎರಡನೇ ಹೆಜ್ಜೆ ಹೇಗೆ ಇಡಬೇಕೆಂಬ ಪ್ರಕ್ರಿಯೆ ಪ್ರಾರಂಭವಾಗಿದೆ. ಹಿಂದುಳಿದ ವರ್ಗಗಳ ಆಯೋಗದ ಮಧ್ಯಂತರ ವರದಿ ಅನುಷ್ಠಾನಗೊಳಿಸಿದ್ದೇವೆ. ಇನ್ನು ಅಂತಿಮ ವರದಿ ಬರಬೇಕು. ಬಂದ ಬಳಿಕ ಕಾನೂನಾತ್ಮಕ, ಸಂವಿಧಾನಾತ್ಮಕವಾಗಿ ಕ್ರಮ ಕೈಗೊಳ್ಳುತ್ತೇವೆ. ಸ್ವಲ್ಪ ದಿನವಾದ ಬಳಿಕ ಯಾರು ತಪ್ಪು ಮಾಡಿದ್ದಾರೆ, ಅನ್ಯಾಯ ಮಾಡಿದ್ದಾರೆ ಎಂಬುದು ಗೊತ್ತಾಗುತ್ತದೆ. ಯಾರೇ ನನ್ನ ಬಗ್ಗೆ ವೈಯಕ್ತಿಕವಾಗಿ ಮಾತನಾಡಿದರೂ ನಾನು ಪ್ರತಿಕ್ರಿಯಿಸುವುದಿಲ್ಲ ಎಂದು ತಿಳಿಸಿದರು.

ಹೇಳಿದಂತಯೇ ನಡುದುಕೊಳ್ಳುತ್ತೇನೆ

ಹೇಳಿದಂತಯೇ ನಡುದುಕೊಳ್ಳುತ್ತೇನೆ

ಸದಾಶಿವ ಆಯೋಗ ವರದಿ ಕೊಟ್ಟು ಹತ್ತು ವರ್ಷವಾದರೂ ಯಾವ ಸರ್ಕಾರ ಕೂಡ ನೋಡಿಲ್ಲ. ಕಾಂತರಾಜ್ ಸಮಿತಿ ವರದಿ ಕೊಟ್ಟು ಸಾಮಾಜಿಕ ಸರ್ವೇ ಮಾಡಿದ್ದಾರೆ. ಬಂದು ಆರು ವರ್ಷವಾಯ್ತು. ಅದನ್ನು ತೆಗೆದು ನೋಡಿಲ್ಲ. ಜಯಪ್ರಕಾಶ್ ಹೆಗ್ಡೆ ನೇತೃತ್ವದ ನಿಯೋಗ ನೀಡಿದ ವರದಿ ಬಂದ ಕೇವಲ ಒಂದು ವಾರದೊಳಗೆ ಬೆಳಗಾವಿ ಅಧಿವೇಶನದಲ್ಲಿ ಮಂಡಿಸಿದ್ದೇನೆ. ಅದನ್ನು ಹತ್ತು ವರ್ಷ ಯಾಕೆ ಮಾಡಲಿಲ್ಲ. ಜನರನ್ನು ತೇಲಿಸಿಕೊಂಡು ಹೋಗಿದ್ದಾರೆ. ಒಂದೇ ವಾರದಲ್ಲಿ ಘೋಷಿಸಿರುವುದು ನಮ್ಮ ಸರ್ಕಾರದ ಬದ್ಧತೆಯಾಗಿದೆ. ಟೀಕೆಗಳನ್ನು ಮೆಟ್ಟಿಲಾಗಿ ಪರಿವರ್ತನೆ ಮಾಡಿಕೊಂಡು, ಯಶಸ್ಸಿಗಾಗಿ ಮೆಟ್ಟಿಲು ಹತ್ತುತ್ತೇನೆ ಎಂದು ಈ ಹಿಂದೆಯೇ ಹೇಳಿದ್ದೆ. ಈಗಲೂ ಅದರಂತೆಯೇ ನಡೆದುಕೊಳ್ಳುತ್ತೇನೆ ಎಂದರು.

ಮಕ್ಕಳಿಗೆ ಒಳ್ಳೆಯ ಶಿಕ್ಷಣ ಸಿಗುವಂತಾಗಬೇಕು

ಮಕ್ಕಳಿಗೆ ಒಳ್ಳೆಯ ಶಿಕ್ಷಣ ಸಿಗುವಂತಾಗಬೇಕು

ವಚನಾನಂದ ಸ್ವಾಮೀಜಿ ಅವರು ಹತ್ತು ಹಲವು ಒಳ್ಳೆಯ ಕಾರ್ಯವನ್ನು ಮಾಡಿದ್ದಾರೆ. ಸಮಾಜ ಜಾಗೃತಿ ಮೂಡಿಸಲು ಸಂಚರಿಸಿದವರಾಗಿದ್ದಾರೆ. ಮಠ ಅಭಿವೃದ್ಧಿ ಮಾಡಿದ್ದಾರೆ. ಬಂದವರಿಗೆ ಸ್ಥಳ ಇರಲಿಲ್ಲ, ಕೂರಲು ಜಾಗ ಇರಲಿಲ್ಲ. ಅನ್ನದಾಸೋಹ, ಜ್ಞಾನದಾಸೋಹ ಮಾಡುವ ಮೂಲಕ ಮಠವನ್ನು ಬೆಳೆಸುತ್ತಿದ್ದಾರೆ. ನೀವು ತಂದಿರುವ ಸರ್ಕಾರ ಇದು. ಸರ್ಕಾರ ಮಾಡುವ ಕೆಲಸವನ್ನು ನೀವು ಮಾಡುತ್ತಿದ್ದೀರ. ನಮ್ಮ ನಮ್ಮಲ್ಲಿ ಬೇಧ ಭಾವ ತರುವಂಥದ್ದು ಒಳ್ಳೆಯ ಬೆಳವಣಿಗೆ ಅಲ್ಲ. ವೈಯಕ್ತಿಕ ಪ್ರತಿಷ್ಠೆ ಹೆಚ್ಚಾದರೆ, ಸಮಾಜಕ್ಕೆ ಲಾಭ ಆಗಲ್ಲ. ಸಮಾಜಕ್ಕೆ ಒಳ್ಳೆಯದಾಗಬೇಕಾದರೆ ಒಂದಾಗಿ ಒಟ್ಟಾಗಿ ನಡೆಯಬೇಕು. ತಲೆತಲಾಂತರದಿಂದ ಬಂದ ರೈತಾಪಿ ವರ್ಗದ ವೃತ್ತಿ ಗಟ್ಟಿಯಾಗಬೇಕು. ಭವಿಷ್ಯ ಉಜ್ವಲವಾಗಬೇಕು. ಮಕ್ಕಳಿಗೆ ಒಳ್ಳೆಯ ಶಿಕ್ಷಣ ಸಿಗುವಂತಾಗಬೇಕು. ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದೇವೆ ಎಂದು ಹೇಳಿದರು.

ಭಾರತದಲ್ಲಿ ಹಸಿರು ಕ್ರಾಂತಿ ಆಗಿದೆ- ಮುಖ್ಯಮಂತ್ರಿ

ಭಾರತದಲ್ಲಿ ಹಸಿರು ಕ್ರಾಂತಿ ಆಗಿದೆ- ಮುಖ್ಯಮಂತ್ರಿ

ಜವಾಬ್ದಾರಿ ಸ್ಥಾನದಲ್ಲಿದ್ದು ಪಂಚಮಸಾಲಿ ಸಮುದಾಯಕ್ಕೆ ನ್ಯಾಯ ಕೊಡಿಸುವ ಕೆಲಸವನ್ನು ಮಾಡಿಯೇ ತೀರುತ್ತೇನೆ. ರೈತಾಪಿ ವರ್ಗ ಇಷ್ಟು ವರ್ಷ ಕೃಷಿ ಮಾಡಿದರೂ ಕುಟುಂಬದ ಸ್ಥಿತಿ ಉತ್ತಮಗೊಂಡಿಲ್ಲ. ದೇಶದಲ್ಲಿ ಹಸಿರು ಕ್ರಾಂತಿ ಆಗಿದೆ. 30 ಕೋಟಿ ಜನಸಂಖ್ಯೆ ಇದ್ದಾಗ ಅನ್ನ ಇರಲಿಲ್ಲ, ಈಗ 130 ಕೋಟಿ ಜನರಿಗೆ ಅನ್ನ ಸಿಗುತ್ತಿದೆ. 100 ಮನೆಗಳಲ್ಲಿ ಹತ್ತು ಆರ್‌ಸಿಸಿ ಮನೆಗಳಿದ್ದವು. 90 ಹಂಚಿನ ಮನೆಗಳಿದ್ದವು. ಭೂಮಿ ಎಷ್ಟು ಇದೆಯೋ ಅಷ್ಟೇ ಇದೆ. ಜನಸಂಖ್ಯೆ ಮಾತ್ರ ಹೆಚ್ಚಾಗಿದೆ. ಕೃಷಿ ಲಾಭದಾಯಕವಾಗಿಲ್ಲ. ವೃತ್ತಿಗೆ ಹೋಗಬೇಕಾದರೆ ವಿದ್ಯಾಭ್ಯಾಸ ಬೇಕು. ಹಾಗಾಗಿ ಸಿಎಂ ವಿದ್ಯಾನಿಧಿ ಯೋಜನೆ ಜಾರಿಗೊಳಿಸಿದ್ದು, 11 ಲಕ್ಷ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ ಎಂದು ವಿವರಿಸಿದರು.

ನಮ್ಮ ಸರ್ಕಾರ ರೈತಪರ ಕೆಲಸ ಮಾಡಿದೆ

ನಮ್ಮ ಸರ್ಕಾರ ರೈತಪರ ಕೆಲಸ ಮಾಡಿದೆ

30 ಲಕ್ಷ ರೈತರಿಗೆ ಸಾಲವನ್ನು ಬಿಜೆಪಿ ಸರ್ಕಾರ ನೀಡಿದೆ. ಕೃಷಿಗೆ ಎಲ್ಲಾ ರೀತಿಯ ಸಹಕಾರ, ಬೆಂಬಲ ನೀಡಿದೆ. ಮಳೆ, ಪ್ರವಾಹಕ್ಕೆ ಒಳಗಾದವರಿಗೆ ಕೇಂದ್ರ ಸರ್ಕಾರ ನೀಡುವುದಕ್ಕಿಂತ ದುಪ್ಪಟ್ಟು ಹಣ ನಾವು ಕೊಟ್ಟಿದ್ದೇವೆ. ನಮ್ಮ ಸರ್ಕಾರ ರೈತಪರ ಕೆಲಸ ಮಾಡಿದೆ. ಆದರೆ ಬೇರೆ ಸರ್ಕಾರಗಳು ಅಧಿಕಾರಕ್ಕೆ ಬಂದಾಗ ಯಾಕೆ ಮಾಡಲಿಲ್ಲ? ರೈತರಿಗೆ ಸಹಾಯ ಮಾಡಿದರೆ ನಮಗೇನೂ ಲಾಭವಿಲ್ಲ ಎಂಬ ಮನೋಭಾವನೆ ಅವರದ್ದಾಗಿದೆ ಎಂದು ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು.

ವೇದಿಕೆಯಲ್ಲಿ ಹರಿಹರ ಪಂಚಮಸಾಲಿ ಪೀಠಾಧ್ಯಕ್ಷ ಶ್ರೀ ವಚನಾನಂದ ಸ್ವಾಮೀಜಿ, ಅಲಗೂರು ವೀರಶೈವ ಲಿಂಗಾಯತ ಪಂಚಮಶಾಲಿ ಪೀಠದ ಶ್ರೀ ಮಹದೇವ ಶಿವಾಚಾರ್ಯ ಸ್ವಾಮೀಜಿ, ಕನಕ ಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ, ಶ್ರೀ ವಾಲ್ಮೀಕಿ ಗುರುಪೀಠದ ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮಿಗಳು, ಮನಗುಳಿ ಹಿರೇಮಠದ ಶ್ರೀ ಸಂಗನ ಬಸವ ಶಿವಾಚಾರ್ಯ ಮಹಾಸ್ವಾಮಿಗಳು, ಸಚಿವರಾದ ಸಿ.ಸಿ.ಪಾಟೀಲ್, ಮುರುಗೇಶ್ ನಿರಾಣಿ, ಸಂಸದ ಜಿ.ಎಂ.ಸಿದ್ದೇಶ್ವರ, ಜಾತ್ರಾ ಮಹೋತ್ಸವ ಸಮಿತಿಯ ಅಧ್ಯಕ್ಷ ಪ್ರಕಾಶ್ ಪಾಟೀಲ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

English summary
Panchamasali reservation: Basavaraj Bommai said in Harihara, Basavaraj Bommai reaction about Panchamasali reservation,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X