ದಾವಣಗೆರೆ : ಬಿಜೆಪಿ ಅಧ್ಯಕ್ಷರ ಮನೆಗೆ ನಾಗಾಸಾಧುಗಳ ಭೇಟಿ
ದಾವಣಗೆರೆ, ಮಾರ್ಚ್ 29 : ಚುನಾವಣೆ ಹತ್ತಿರ ಬರುತ್ತಿದ್ದಂತೆ ನಾಗಸಾಧುಗಳು ರಾಜಕೀಯ ಮುಖಂಡರ ಮನೆಗೆ ಭೇಟಿ ನೀಡುತ್ತಿದ್ದಾರೆ. ಕರ್ನಾಟಕದ ಚುನಾವಣೆ ಬಗ್ಗೆ ಭವಿಷ್ಯವನ್ನು ಹೇಳುತ್ತಿದ್ದಾರೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ |ಚುನಾವಣೆಯ ಮುಖ್ಯ ದಿನಾಂಕಗಳು
ಬುಧವಾರ ದಾವಣಗೆರೆಯ ಬಿಜೆಪಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾದವ್ ಮನೆಗೆ ನಾಗಾಸಾಧುಗಳು ಭೇಟಿ ನೀಡಿದ್ದರು. ಯಶವಂತರಾವ್ ಜಾದವ್ ಅವರಿಗೆ ಆಶೀರ್ವಾದ ಮಾಡಿದ್ದಾರೆ. ಅಲ್ಲದೇ ಮುಂದಿನ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತೀಯಾ ಭವಿಷ್ಯ ನುಡಿದಿದ್ದಾರೆ.

ಯಶವಂತರಾವ್ ಜಾದವ್ ದಾವಣಗೆರೆ ದಕ್ಷಿಣ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ನಾಗಾಸಾಧುಗಳು ಮನೆಗೆ ಬಂದು ಆತಿಥ್ಯ ಸ್ವೀಕರಿಸಿದರು. ಬಳಿಕ ಎಲ್ಲಾ ಕುಟುಂಬ ಸದಸ್ಯರಿಗೆ ಆಶೀರ್ವಾದ ಮಾಡಿದ್ದಾರೆ.
'ಸಾಧುಗಳು ಎಲ್ಲಿಯವರು ಎಂಬುದು ಗೊತ್ತಿಲ್ಲ, ಅವರ ಪರಿಚಯವಿಲ್ಲ. ಮನೆಗೆ ಆಗಮಿಸಿದ್ದರು. ಆತಿಥ್ಯ ನೀಡಿ ದರ್ಶನ ಪಡೆದೆವು' ಎಂದು ಯಶವಂತರಾವ್ ಜಾದವ್ ಹೇಳಿದ್ದಾರೆ.

ಕೆಲವು ದಿನಗಳ ಹಿಂದೆ ಚಿತ್ರದುರ್ಗ ಸೇರಿದಂತೆ ವಿವಿಧ ಜಿಲ್ಲೆಗಳ ರಾಜಕಾರಣಿಗಳ ಮನೆಗೆ ನಾಗಸಾಧುಗಳು ಭೇಟಿ ನೀಡಿ, ಆಶೀರ್ವಾದ ಮಾಡಿದ್ದರು.
ಬಿ.ಎಸ್.ಯಡಿಯೂರಪ್ಪ, ವರ್ತೂರು ಪ್ರಕಾಶ್, ಸಿ.ಟಿ.ರವಿ ಸೇರಿದಂತೆ ವಿವಿಧ ರಾಜಕೀಯ ನಾಯಕರ ಮನೆಗೆ ನಾಗಾಸಾಧುಗಳು ಭೇಟಿ ನೀಡಿದ್ದರು.












Click it and Unblock the Notifications