ಕುತೂಹಲ ಮೂಡಿಸಿದ ರೇಣುಕಾಚಾರ್ಯ ಫೇಸ್ ಬುಕ್ ಪೋಸ್ಟ್

ದಾವಣಗೆರೆ, ಮಾರ್ಚ್ 14; ಸಾಮಾಜಿಕ ಜಾಲತಾಣದ ಫೇಸ್ ಬುಕ್‌ನಲ್ಲಿ ಸಕ್ರಿಯರಾಗಿರುವ ರಾಜಕೀಯ ನಾಯಕರಲ್ಲಿ ಎಂ. ಪಿ. ರೇಣುಕಾಚಾರ್ಯ ಸಹ ಒಬ್ಬರು. ರೇಣುಕಾಚಾರ್ಯ ಅವರ ಫೇಸ್ ಬುಕ್ ಪೋಸ್ಟ್ ಒಂದುದ ಕುತೂಹಲಕ್ಕೆ ಕಾರಣವಾಗಿದೆ.

ರಾಜಕೀಯ ವಿರೋಧಿಗಳನ್ನು ಗುರಿಯಾಗಿಸಿಕೊಂಡು ಹೊನ್ನಾಳಿಯ ಬಿಜೆಪಿ ಶಾಸಕ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ ಫೇಸ್ ಬುಕ್‌ ಪೋಸ್ಟ್‌ ವೊಂದನ್ನು ಹಾಕಿದ್ದಾರೆ.

"ಕೋವಿಡ್ ಸಮಯದಲ್ಲಿ ನಿಮ್ಮಗಳ ಅಡ್ರೆಸ್ಸೇ ಇದ್ದಿಲ್ಲ, ಅವಳಿ ತಾಲ್ಲೂಕುಗಳ (ಹೊನ್ನಾಳಿ-ನ್ಯಾಮತಿ) ಅಭಿವೃದ್ಧಿಗೆ ನಿಮ್ಮ ಕೊಡುಗೆ ಏನು? ನಿಮ್ಮ ದರ್ಪ ದಬ್ಬಾಳಿಕೆ ದೌರ್ಜನ್ಯ ಕ್ಷೇತ್ರದ ಯುವ ಜನತೆಗೆ ಚೆನ್ನಾಗಿ ಗೊತ್ತಿದೆ" ಎಂದು ರೇಣುಕಾಚಾರ್ಯ ಪೋಸ್ಟ್‌ನಲ್ಲಿ ಹೇಳಿದ್ದಾರೆ.

 MP Renukacharya Facebook Post For Opposition Leaders

ಫೇಸ್ ಬುಕ್ ಪೋಸ್ಟ್

ನಮ್ಮ ಕ್ಷೇತ್ರದ ರಾಜಕೀಯ ವಿರೋಧಿಗಳಿಗೆ ಹತಾಶೆ ಮನೋಭಾವನೆ ಎಷ್ಟರಮಟ್ಟಿಗಿದೆ ಇದ್ರೆ ನನ್ನ ಸೋಷಿಯಲ್ ಮೀಡಿಯಾ ನೋಡಿಯೇ ತೆಲೆತಿರುಗಿದೆಯಂತೆ!. ಹೌದು ಸ್ವಾಮಿ ನಾನು ಸದಾ ಜನರ ಮಧ್ಯೆ ಇದ್ದು ಜನಸೇವೆ ಮಾಡುತ್ತೇನೆ, ಜನ ಸೇವೆಗೆಂದೇ ನನ್ನ ಸಂಪೂರ್ಣ ಜೀವನವನ್ನು ಮುಡಿಪಿಟ್ಟಿದ್ದೇನೆ. ಸಹಾಯ ಕೇಳಿ ನನ್ನ ಮನೆ ಬಾಗಿಲಿಗೆ ಬಂದವರನ್ನು ಎಂದು ನಾನು ಬರಿಗೈಯುಲ್ಲಿ ವಾಪಾಸ್ ಕಳುಹಿಸುವುದಿಲ್ಲ.

ಸರ್ಕಾರದ ಸೌಲಭ್ಯಗಳ ಜೊತೆಗೆ ಪ್ರತಿನಿತ್ಯ ಸಹಾಯ ಕೇಳಲು ಬಂದವರಿಗೆ ನನ್ನ ಕೈಲಾದ ವೈಯಕ್ತಿಕ ಸಹಾಯವನ್ನು ಮಾಡುತ್ತೇನೆ. ಜನತೆಯ ದುಃಖ ದುಮ್ಮಾನಗಳಿಗೆ ಸ್ಪಂದಿಸುತ್ತೇನೆ. ಅಭಿವೃದ್ಧಿ ವಿಚಾರದಲ್ಲಿ ಹೊನ್ನಾಳಿ ನ್ಯಾಮತಿ ಅವಳಿ ತಾಲ್ಲೂಕುಗಳಿಗೆ ಅನೇಕ ಶಾಶ್ವತ ಯೋಜನೆಗಳನ್ನು ತರುವ ಮೂಲಕ ಸಾವಿರಾರು ಕೋಟಿ ಅನುದಾನವನ್ನು ತರುತ್ತಿದ್ದೇನೆ.

ಕ್ಷೇತ್ರದ ಪ್ರತಿಯೊಬ್ಬ ನನ್ನ ಬಂಧುಗಳ ಮನೆಯ ಕಾರ್ಯಗಳಲ್ಲಿ ಮನೆ ಮಗನಂತೆ ಪಾಲ್ಗೊಳ್ಳುತ್ತೇನೆ, ಅವರ ಕಷ್ಟ ಸುಖಗಳನ್ನು ಹಂಚಿಕೊಳ್ಳುತ್ತೇನೆ, ಈ ನನ್ನ ಎಲ್ಲಾ ಕಾರ್ಯಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತೇನೆ.

ನೀವು ಸಹ ಜನರ ಮಧ್ಯೆ ಇದ್ದು ಜನರ ಕಷ್ಟಗಳಿಗೆ ಸ್ಪಂದಿಸಿ ನಿಮ್ಮ ಸಾಧನೆಗಳನ್ನು ನಿಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಾಕಿಕೊಳ್ಳಿ, ಕೋವಿಡ್ ಸಮಯದಲ್ಲಿ ನಿಮ್ಮಗಳ ಅಡ್ರೆಸ್ಸೇ ಇದ್ದಿಲ್ಲ, ಅವಳಿ ತಾಲ್ಲೂಕುಗಳ ಅಭಿವೃದ್ಧಿಗೆ ನಿಮ್ಮ ಕೊಡುಗೆ ಏನು? ನಿಮ್ಮ ದರ್ಪ ದಬ್ಬಾಳಿಕೆ ದೌರ್ಜನ್ಯ ಕ್ಷೇತ್ರದ ಯುವ ಜನತೆಗೆ ಚನ್ನಾಗಿ ಗೊತ್ತಿದೆ.

'ಕೆಲಸಕ್ಕೆ ಕರೆಯಬೇಡಿ ಊಟಕ್ಕೆ ಮರೆಯಬೇಡಿ' ಎನ್ನುವಂತೆ ಚುನಾವಣೆ ಸಮಯದಲ್ಲಿ ಮಾತ್ರ ಪ್ರತ್ಯಕ್ಷರಾಗುವ ನಿಮ್ಮನ್ನು ಅವಳಿ ತಾಲೂಕಿನ ಜನತೆ ಶಾಶ್ವತವಾಗಿ ವಿರೋಧ ಪಕ್ಷದ ಸ್ಥಾನದಲ್ಲಿ ಕೂರಿಸುತ್ತಾರೆ ಎನ್ನುವುದನ್ನು ಮರೆಯಬೇಡಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+