ಅಕ್ಕ ಸಮ್ಮೇಳನ, ದಲಿತ ಕಲಾವಿದರ ಬಗ್ಗೆ ಸಚಿವ ಆಂಜನೇಯ

Posted By:
Subscribe to Oneindia Kannada

ಬೆಂಗಳೂರು, ಸೆಪ್ಟೆಂಬರ್ 02: ಅಮೆರಿಕದ ಅಟ್ಲಾಂಟಿಕ್ ಸಿಟಿಯಲ್ಲಿ ನಡೆಯಲಿರುವ ಅಕ್ಕ ಸಮ್ಮೇಳನದಲ್ಲಿ ದಲಿತ ಕಲಾವಿದರಿಗೆ ಪಾಲ್ಗೊಳ್ಳಲು ಅವಕಾಶ ಸಿಗದೇ ಇರುವ ಹಿನ್ನೆಲೆಯಲ್ಲಿ ತಾವು ಕೂಡಾ ಅಕ್ಕ ಸಮ್ಮೇಳನದಲ್ಲಿ ಭಾಗವಹಿಸುತ್ತಿಲ್ಲ ಎಂದು ಸಮಾಜ ಕಲ್ಯಾಣ ಸಚಿವ ಹೆಚ್.ಆಂಜನೇಯ ಹೇಳಿದ್ದಾರೆ.

ದಲಿತ ಕಲಾವಿದರಿಗೆ ಅಕ್ಕ ಸಮ್ಮೇಳನದಲ್ಲಿ ಭಾಗವಹಿಸಲು ಅವಕಾಶವಾಗದೇ ಇರುವುದರಿಂದ ತಾವು ಅಕ್ಕ ಸಮ್ಮೇಳನದಲ್ಲಿ ಭಾಗವಹಿಸುವುದರಲ್ಲಿ ಅರ್ಥವಿಲ್ಲ ಎಂದು ಸಚಿವ ಆಂಜನೇಯ ಸಮ್ಮೇಳನದ ಪದಾಧಿಕಾರಿಗಳಿಗೆ ಸಂದೇಶ ರವಾನೆ ಮಾಡಿದ್ದಾರೆ. [ಅಕ್ಕ ಸಮ್ಮೇಳನ ಕುರಿತ ಸಮಗ್ರ ಸುದ್ದಿಗಳು]

Minister H Anjaneya on AKKA Sammelana Dalit Artists

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಈ ವಿಷಯದಲ್ಲಿ ಹೆಚ್ಚಿನ ಮುತುವರ್ಜಿ ವಹಿಸಿ ದಲಿತ ಕಲಾವಿದರು ಅಕ್ಕ ಸಮ್ಮೇಳನದಲ್ಲ ಭಾಗವಹಿಸಲು ಅನುಕೂಲ ಮಾಡಿಕೊಡಬೇಕಿತ್ತು.

ಆದರೆ,ಅದು ಮಾಡಿದ ವಿಳಂಬದಿಂದಾಗಿ ದಲಿತ ಕಲಾವಿದರಿಗೆ ಅಕ್ಕ ಸಮ್ಮೇಳನದಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ. ಇದೇ ಕಾರಣಕ್ಕಾಗಿ ಮುಂದಿನ ವರ್ಷ ದಲಿತ ಕಲಾವಿದರಿಗೆ ತಾವೇ ಮುಂದಾಗಿ ನಿಂತು ವೀಸಾ ಸಿಗುವ ವ್ಯವಸ್ಥೆ ಮಾಡುತ್ತೇನೆ. ಆದ್ದರಿಂದ ಅಮೆರಿಕದಲ್ಲಿ ನಡೆಯುವ ಅಕ್ಕ ಸಮ್ಮೇಳನಕ್ಕೆ ಈ ವರ್ಷ ಹೋಗದೆ ಮುಂದಿನ ವರ್ಷವೇ ಬರುವುದಾಗಿ ತಿಳಿಸಿದ್ದಾರೆ.

ಅಕ್ಕ ಸಮ್ಮೇಳನ: ಅಮೆರಿಕದ ನ್ಯೂಜೆರ್ಸಿಯ ಅಟ್ಲಾಂಟಿಕ್ ಸಿಟಿಯಲ್ಲಿ ಸೆಪ್ಟೆಂಬರ್ 02ರಿಂದ ಮೂರು ದಿನಗಳ ಅಸೋಸಿಯೇಷನ್ಸ್ ಆಫ್ ಕನ್ನಡ ಕೂಟಾಸ್ ಆಫ್ ಅಮೆರಿಕ(AKKA) ಸಮ್ಮೇಳನ ನಡೆಯಲಿದೆ. ಇದು 9ನೇ ಅಕ್ಕ ಸಮ್ಮೇಳನವಾಗಿದ್ದು, ಈ ಬಾರಿ 90ಕ್ಕೂ ಅಧಿಕ ದಲಿತ ಕಲಾವಿದರನ್ನು ಅಮೆರಿಕಕ್ಕೆ ಕಳಿಸಲು ಸಮಾಜ ಕಲ್ಯಾಣ ಇಲಾಖೆ ಸೂಚಿಸಿತ್ತು. ಆದರೆ, ಕೊನೆಕ್ಷಣದಲ್ಲಿ ವೀಸಾ ಸಮಸ್ಯೆಯಾಗಿದ್ದರಿಂದ ಅನೇಕ ಕಲಾವಿದರು ವಿಮಾನಯಾನ ಮಿಸ್ ಮಾಡಿಕೊಂಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
As many as 90 dalit artistes of Karnataka miss the three-day 9th Association of Kannada Kootas of America (AKKA) world conference to be held at Atlantic City of New Jersey in USA from September 2. Here is reaction from Social welfare minister H Anjaneya regarding this matter.
Please Wait while comments are loading...