ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೋಗಸ್ ವಿಳಾಸ; ದಾವಣಗೆರೆ ಮೇಯರ್ ಎಲೆಕ್ಷನ್ ಮುಂದೂಡಿಕೆ?

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಫೆಬ್ರವರಿ 17: ದಾವಣಗೆರೆ ಮಹಾನಗರ ಪಾಲಿಕೆಯ ಗದ್ದಿಗೆ ಹಿಡಿಯಲು ಕಾಂಗ್ರೆಸ್ ಹಾಗೂ ಬಿಜೆಪಿ ಜಿದ್ದಾಜಿದ್ದಿ ನಡೆಸುತ್ತಿದ್ದು, 45 ವಾರ್ಡ್ ಗಳಲ್ಲಿ ಕಾಂಗ್ರೆಸ್ 22, ಬಿಜೆಪಿ 17, ಜೆಡಿಎಸ್ 1 ಹಾಗೂ ಪಕ್ಷೇತರರ 5 ಸ್ಥಾನಗಳನ್ನು ಪಡೆದುಕೊಂಡಿದೆ.

ಅಧಿಕಾರ ಚುಕ್ಕಾಣಿ ಹಿಡಿಯಲು ರಾಷ್ಟ್ರೀಯ ಪಕ್ಷಗಳು ಎಂಎಲ್ಸಿಗಳ ಪಟ್ಟಿಯನ್ನು ಹೆಚ್ಚಿಸಿದ್ದು, ಕಾಂಗ್ರೆಸ್ ನಿಂದ 6 ಬಿಜೆಪಿಯಿಂದ 8 ಜನ ಎಂಎಲ್ಸ್ ಗಳು ಮೇಯರ್ ಚುನಾವಣೆಗೆಗೆ ಮತದಾರರನ್ನಾಗಿ ಸೇರ್ಪಡೆ ಮಾಡಿದ್ದಾರೆ. ಐದು ಜನ ಪಕ್ಷೇತರರಲ್ಲಿ ನಾಲ್ಕು ಜನ ಬಿಜೆಪಿಗೆ ಸೇರ್ಪಡೆಯಾದರೆ, ಮತ್ತೊಬ್ಬರು ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದಾರೆ. ಇದೇ ತಿಂಗಳ 19ರಂದು ನಡೆಯಲಿರುವ ಮೇಯರ್ ಚುನಾವಣೆಗೆ ಪಾಲಿಕೆ ಸದಸ್ಯರನ್ನು ಸೇರಿ ಬಿಜೆಪಿ 31 ಕಾಂಗ್ರೆಸ್ 30 ಸ್ಥಾನಗಳ ಬಲಾಬಲದಲ್ಲಿ ಇದ್ದಾರೆ.

ದಾವಣಗೆರೆ ಮೇಯರ್ ಚುನಾವಣೆ: ಪಾಲಿಕೆ ಸದಸ್ಯರು ರೆಸಾರ್ಟ್ ಗೆ ಶಿಫ್ಟ್ದಾವಣಗೆರೆ ಮೇಯರ್ ಚುನಾವಣೆ: ಪಾಲಿಕೆ ಸದಸ್ಯರು ರೆಸಾರ್ಟ್ ಗೆ ಶಿಫ್ಟ್

ಆದರೆ ಬಿಜೆಪಿ ಹಾಗೂ ಕಾಂಗ್ರೆಸ್ ಎಂಎಲ್ಸಿಗಳು ಬೋಗಸ್ ವಿಳಾಸವನ್ನು ನೀಡಿ ಮತದಾರರ ಪಟ್ಟಿಗೆ ಸೇರ್ಪಡೆಯಾಯಾಗಿದ್ದಾರೆ ಎಂದು ದೂರುಗಳು ಬಂದ ಹಿನ್ನೆಲೆ ಮತದಾರರ ಪಟ್ಟಿ ಚುನಾವಣಾ ವೀಕ್ಷಕರಾಗಿ ನೇಮಕವಾಗಿರುವ ಹರ್ಷಗುಪ್ತಾರವರು ಮತದಾರರ ಪಟ್ಟಿ ಹಿಡಿದು ಎಂಎಲ್ ಸಿಗಳ ವಿಳಾಸ ಪರಿಶೀಲಿಸಿದರು. ಕೆ.ಸಿ ಕೊಂಡಯ್ಯ, ಡಾ ತೇಜಸ್ವಿನಿ ಗೌಡ, ನಾರಾಯಣಸ್ವಾಮಿ ಸೇರಿದಂತೆ 12 ಜನ ಎಂಎಲ್ಸಿಗಳ ವಿಳಾಸ ಪರಿಶೀಲಿಸಿದ್ದು, ಸಣ್ಣ ಸಣ್ಣ ಕೊಠಡಿಗಳ ವಿಳಾಸ ನೀಡಿರುವುದರ ಬಗ್ಗೆ ತಿಳಿದುಬಂದಿದೆ.

Mayor Election May Postpone Informed Harsha Gupta

ವಿಳಾಸ ಪರೀಶೀಲನೆ ನಂತರ ಮಾತನಾಡಿದ ಮೇಯರ್ ಚುನಾವಣಾ ವೀಕ್ಷಕ ಹರ್ಷ ಗುಪ್ತಾರವರು, ಬೋಗಸ್ ವಿಳಾಸ ನೀಡಿ ಮತದಾರರ ಪಟ್ಟಿಗೆ ಸೇರ್ಪಡೆಯಾಗಿದೆ ಎಂಬ ದೂರುಗಳು ಬಂದಿದ್ದು, ಸ್ಥಳ ಪರಿಶೀಲನೆ ಮಾಡಿದ ನಂತರ ಎಲ್ಲವೂ ಬೋಗಸ್ ಎನ್ನುವ ಅನುಮಾನ ವ್ಯಕ್ತವಾಗಿದೆ. ಇದರ ಬಗ್ಗೆ ಬೆಂಗಳೂರಿನ ಚುನಾವಣಾಧಿಕಾರಿಗಳಿಗೆ ವಿವರ ಒಪ್ಪಿಸುತ್ತೇನೆ. ಅಲ್ಲದೆ ಸಾಕಷ್ಟು ಮನೆಗಳಲ್ಲಿ ಮತದಾರರೇ ಇಲ್ಲದಿರುವುದು ಕಂಡುಬಂದಿದೆ ಎಂದರು. ಇದರಿಂದ ನಾಳೆ ಏನಾದರೂ ಬೋಗಸ್ ವಿಳಾಸ ನೀಡಿದವರ ಮೇಲೆ ನೋಟೀಸ್ ನೀಡಿ ಮತದಾರರ ಪಟ್ಟಿಯಿಂದ ತೆಗೆದುಹಾಕಿದರೆ ಫೆಬ್ರವರಿ 19ಕ್ಕೆ ನಡೆಯುವ ಪಾಲಿಕೆ ಮೇಯರ್ ಚುನಾವಣೆ ಮುಂದೂಡುವ ಸಾಧ್ಯತೆ ಹೆಚ್ಚಾಗಿದೆ.

English summary
Harsha Gupta has informed that the mayor election could be postponed following the complaints that the BJP and the Congress MLC's gave bogus address
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X