ಒಂದೇ ಕುಟುಂಬದ ಮೂವರು ನಾಪತ್ತೆ ಪ್ರಕರಣ ಮತ್ತಷ್ಟು ನಿಗೂಢ; ಮೂಡಿದೆ ಸಾಕಷ್ಟು ಅನುಮಾನ
ಅದು ಪುಟ್ಟ ಸಂಸಾರ. ಗಂಡ, ಹೆಂಡತಿ, ಮಗು ಇದ್ದ ಮನೆ. ಆದ್ರೆ, ಈ ಮನೆಯ ಮೂವರು ಇದೀಗ ನಿಗೂಢವಾಗಿ ನಾಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಪೊಲೀಸರಿಗೂ ಈ ಪ್ರಕರಣ ತಲೆಬಿಸಿ ತಂದಿದ್ದು, ಹುಡುಕಿಕೊಡಿ ಎಂದು ಅವರ ಕುಟುಂಬ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ತಂದೆ, ತಾಯಿ ಹಾಗೂ ಎರಡು ವರ್ಷದ ಮಗು ನಿಗೂಢವಾಗಿ ಕಣ್ಮರೆಯಾಗಿರುವುದು ಬೆಣ್ಣೆನಗರಿ ದಾವಣಗೆರೆಯಲ್ಲಿ ಈಗ ಸಾಕಷ್ಟು ಅನುಮಾನು ಮೂಡುವಂತೆ ಮಾಡಿದೆ. 34 ವರ್ಷದ ಅಂಜನ್ ಬಾಬು, 24 ವರ್ಷದ ನಾಗವೇಣಿ, ಎರಡು ವರ್ಷದ ನಕ್ಷತ್ರ ಕಾಣೆಯಾಗಿದ್ದಾರೆ.

ನಗರದ ವಿನೋಬ ನಗರದಲ್ಲಿ ಬಾಡಿಗೆಗೆ ವಾಸವಾಗಿದ್ದ ಈ ಕುಟುಂಬ ಕೊನೆಯದಾಗಿ ಕಾಣಿಸಿಕೊಂಡಿದ್ಧು ಕಳೆದ ತಿಂಗಳು ಏಪ್ರಿಲ್ 12ರಂದು. ಅದಾದ ನಂತರ ಈ ಮೂವರು ಎಲ್ಲಿಗೆ ಹೋಗಿದ್ದಾರೆ ಅನ್ನೋದು ಗೊತ್ತಾಗದೆ ಕುಟುಂಬದವರು ಪರಿತಪಿಸುವಂತಾಗಿದೆ. ನಾಗವೇಣಿ ನಾಗವೇಣಿ ತಾಯಿ ರುದ್ರವ್ವ ಬಡಾವಣೆ ಪೊಲೀಸ್ ಠಾಣೆಯಲ್ಲಿ ನನ್ನ ಮಗಳು, ಅಳಿಯ ಮತ್ತು ಮೊಮ್ಮಗಳನ್ನು ಹುಡುಕಿ ಕೊಡಿ ಎಂದು ದೂರು ನೀಡಿದ್ದಾರೆ.
ಐದು ವರ್ಷದ ಹಿಂದೆ ಮದುವೆ
ಅಂಜನ್ ಬಾಬು ಮತ್ತು ನಾಗವೇಣಿ 5 ವರ್ಷದ ಹಿಂದೆ ಮದುವೆ ಆಗಿದ್ದರು. ಈ ದಂಪತಿಗೆ ಎರಡು ವರ್ಷದ ಹೆಣ್ಣು ಮಗು ಇದೆ. ವಿನೋಬನಗರದಲ್ಲಿ ವಾಸವಾಗಿದ್ದರು, ಅಂಜನ್ ಬಾಬು ಪಿಜಿ ಬಡಾವಣೆ ಬ್ಯಾಡಗಿ ಶೆಟ್ಟರ್ ಶಾಲೆ ಹತ್ತಿರ ಇರುವ ಷೇರು ಮಾರ್ಕೇಟ್ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದರು. ಇವರ ಮನೆಗೆ ನಾಗವೇಣಿ ಅವರ ತಾಯಿ ರುದ್ರವ್ವ ವಾರಕ್ಕೊಮ್ಮೆ ಬಂದು ಹೋಗುತ್ತಿದ್ದರು. ಕಳೆದ ತಿಂಗಳು ಅಂದರೆ ಏಪ್ರಿಲ್ 12ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ರುದ್ರವ್ವ ಮಗಳ ಮನೆಗೆ ಬಂದಿದ್ದಾರೆ. ಸಂಜೆಯವರೆಗೆ ಮಗಳು, ಮೊಮ್ಮಗಳ ಜೊತೆ ಸಂಜೆವರೆಗೂ ರುದ್ರವ್ವ ಕಾಲ ಕಳೆದಿದ್ದಾರೆ.
ಸಂಜೆ ಆರು ಗಂಟೆಗೆ ನಾಗವೇಣಿ ಗಂಡ ಅಂಜನ್ ಬಾಬು ಪತ್ನಿಗೆ ಪೋನ್ ಮಾಡಿದ್ದಾರೆ. ಆಗ ತನ್ನ ಪುತ್ರಿ ಜೊತೆ ನಾಗವೇಣಿ ತೆರಳಿದ್ದಾರೆ. ಆ ಬಳಿಕ ತಾಯಿಗೆ ನೀನು ಮನೆಯಲ್ಲಿ ಇರು ಎಂದು ಹೇಳಿದ್ದಾರೆ. ಅದಕ್ಕೆ ನಿನ್ನ ಗಂಡ ಎಲ್ಲಿಗೆ ಹೋಗಿದ್ದಾನೆಂದು ತಾಯಿ ಕೇಳಿದಕ್ಕೆ, ಕರೆದುಕೊಂಡು ಬಂದ ಮೇಲೆ ಹೇಳುತ್ತೇನೆಂದು ತನ್ನ ಮಗಳು ನಕ್ಷತ್ರಾಳನ್ನು ಕರೆದುಕೊಂಡು ಹೋಗಿದ್ದಾರೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ರಾತ್ರಿ 8.30ಕ್ಕೆ ಪೋನ್ ಮಾಡಿದ ಮಗಳು ನಾಗವೇಣಿ ನಾವು ಬೆಳಿಗ್ಗೆ ಬರುತ್ತೇವೆ, ನೀನು ಊಟ ಮಾಡಿ ಮಲಗಿಕೋ ಎಂದು ತಾಯಿಗೆ ಹೇಳಿದ್ದಾರೆ. ಅದರಂತೆ ಬೆಳಿಗ್ಗೆ ಪೋನ್ ಮಾಡಿದಾಗ ಸ್ವೀಚ್ ಆಪ್ ಆಗಿತ್ತಂತೆ. ಇದಾದ ನಂತರ ರುದ್ರವ್ವ ಕೆಲಸಕ್ಕೆ ಹೋಗಬೇಕಾಗಿದ್ದರಿಂದ ಮಗಳ ಮನೆಗೆ ಬೀಗ ಹಾಕಿಕೊಂಡು ಮರಳಿ ಊರಿಗೆ ಹೋಗಿದ್ದಾರೆ. ಸುಮಾರು ದಿನಗಳಾದರೂ ಬರದೆ ಇರುವ ಕಾರಣ ಸಂಬಂಧಿಕರಿಗೆ ಪೋನ್ ಮಾಡಿ ವಿಚಾರಿಸಿದ್ದಾರೆ. ಎಲ್ಲಾ ಕಡೆ ಹುಡುಕಾಟ ನಡೆಸಿದರೂ ಪ್ರಯೋಜನವಾಗಿಲ್ಲ. ಇದರಿಂದ ಆತಂಕಗೊಂಡ ರುದ್ರವ್ವ ಬಡಾವಣೆ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದು, ಪುತ್ರಿ, ಅಳಿಯ ಹಾಗೂ ಮೊಮ್ಮಗಳನ್ನು ಹುಡುಕಿಕೊಡಿ ಎಂದು ಮನವಿ ಮಾಡಿದ್ದಾರೆ.
ಇನ್ನೂ ಕಾಣೆಯಾದವರ ವಿಚಾರದಲ್ಲಿ ಅಂಜನ್ ಬಾಬು ಸಾಕಷ್ಟು ಸಾಲ ಮಾಡಿಕೊಂಡಿದ್ದ ಎಂದು ಹೇಳಲಾಗಿದೆ. ಇನ್ನೊಂದು ಕಡೆ ಆಸ್ತಿ ವಿಚಾರದಲ್ಲಿ ಗೋಲ್ಮಾಲ್ ಆಗಿದೆ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಈ ರೀತಿಯ ಘಟನೆ ನಡೆದಿರಬಹುದು ಎಂಬ ಅನುಮಾನವೂ ವ್ಯಕ್ತವಾಗಿದೆ. ಒಟ್ಟಾರೆ ಅಂಜನ್ ಮತ್ತು ಕುಟುಂಬ ಕಾಣೆಯಾಗಲು ನಿಜವಾದ ಕಾರಣ ಪೊಲೀಸ್ ತನಿಖೆಯಿಂದ ತಿಳಿಯಬೇಕಿದೆ.
ಮಾಹಿತಿ ಪ್ರಕಾರ ಬಿಜಾಪುರ ಜಿಲ್ಲೆಯಲ್ಲಿ ತಿಕೋಟದ ಗ್ರಾಮವೊಂದರಲ್ಲಿ ಇರುವ ಕುರಿತಂತೆ ಶಂಕೆ ವ್ಯಕ್ತವಾಗಿದೆ. ಸಾಲ ಹೆಚ್ಚಾದ ಹಿನ್ನೆಲೆಯಲ್ಲಿ ಅಂಜನ್ ಬಾಬು ಕುಟುಂಬ ಹೋಗಿರಬಹುದಾ? ಆಸ್ತಿ ಕಲಹದಿಂದ ಏನಾದರೂ ಕಿಡ್ನಾಪ್ ಆಗಿರಬಹುದಾ? ಬೇರೆ ಏನಾದರೂ ವಿಚಾರ ಇರಬಹುದಾ ಎಂಬುದು ಸೇರಿದಂತೆ ನಾನಾ ಪ್ರಶ್ನೆಗಳು ಹುಟ್ಟಿಕೊಂಡಿದ್ದು, ಮೂವರು ಪತ್ತೆಯಾದ ಬಳಿಕ ನಿಖರ ಕಾರಣ ಗೊತ್ತಾಗಲಿದೆ.
-
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
ದುಬೈಗೂ ಮೊದಲೇ ನಟಿ ರನ್ಯಾ ರಾವ್ಗೆ ಉಗಾಂಡಾ ಏಜೆಂಟ್ ಕೋಟ್ಯಂತರ ರೂಪಾಯಿ ವಂಚನೆ: ಚಾರ್ಜ್ಶೀಟ್ನಲ್ಲಿ ಸ್ಫೋಟಕ ಮಾಹಿತಿ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು











Click it and Unblock the Notifications