• search
 • Live TV
ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಆಡಳಿತ ಯಂತ್ರ ಮನೆ ಬಾಗಿಲಿಗೆ ಬರಲಿದೆ: ಸಚಿವ ಬಿ.ಎ.ಬಸವರಾಜ

By ದಾವಣಗೆರೆ ಪ್ರತಿನಿಧಿ
|

ದಾವಣಗೆರೆ, ನವೆಂಬರ್ 25: ಮನೆ ಬಾಗಿಲಿಗೆ ಮಹಾನಗರ ಪಾಲಿಕೆ ಎಂಬ ವಿನೂತನ ಕಾರ್ಯಕ್ರಮದಿಂದ ಆಡಳಿತ ಯಂತ್ರವೇ ತಮ್ಮ ಮನೆ ಬಾಗಿಲಿಗೆ ಬಂದು ಸೇವೆ ನೀಡಲಿರುವುದು ಸಂತಸದಾಯಕ ವಿಚಾರ ಎಂದು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎ.ಬಸವರಾಜ ಹೇಳಿದರು.

ದಾವಣಗೆರೆ ಮಹಾನಗರ ಪಾಲಿಕೆ ವತಿಯಿಂದ ಗಾಂಧಿನಗರದ ಚೌಡೇಶ್ವರಿ ದೇವಾಲಯದ ಆವರಣದಲ್ಲಿ ಇಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೂಲಭೂತ ಸೌಕರ್ಯ ಒದಗಿಸುವ ದಿಸೆಯಲ್ಲಿ ದಾವಣಗೆರೆ ಮಹಾನಗರ ಪಾಲಿಕೆ ಮುಂಚೂಣಿಯಲ್ಲಿದ್ದು, ಇಡೀ ರಾಷ್ಟ್ರದಲ್ಲಿಯೇ ಇದು ಮೊದಲ ಕಾರ್ಯಕ್ರಮ ಎಂದರೂ ತಪ್ಪಾಗಲಾರದು ಎಂದರು.

ದಾವಣಗೆರೆ ಚಿಗಟೇರಿ ಆಸ್ಪತ್ರೆ ಕಟ್ಟಡ ನವೀಕರಣಕ್ಕೆ ಪ್ರಸ್ತಾವನೆ

ಜನರು ಪಾಲಿಕೆ ಕಚೇರಿಗೆ ಅಲೆಯುವುದು ತಪ್ಪುವುದರ ಜೊತೆಗೆ, ಕಾಲಮಿತಿಯೊಳಗೆ ತಮ್ಮ ಕೆಲಸಗಳಾಗಲಿವೆ. ಸಾರ್ವಜನಿಕರು ಯಾರೇ ಮಧ್ಯವರ್ತಿಗಳನ್ನು ಅವಲಂಬಿಸಬೇಕಿಲ್ಲ. ಜನನ, ಮರಣ ಪ್ರಮಾಣ ಪತ್ರದಿಂದ ಖಾತಾ ಎಕ್ಸ್‍ಟ್ರಾಕ್ಟ್, ಕಟ್ಟಡ ನವೀಕರಣ, ಕುಡಿಯುವ ನೀರು ಬೀದಿ ದೀಪದಂತಹ ಸೌಲಭ್ಯಗಳು ದೊರೆಯುವುದರಿಂದ ದಾವಣಗೆರೆ ಜನತೆ ಸುಖ ಸಂತೋಷ ನೆಮ್ಮದಿಯಿಂದ ಇರಬಹುದಾಗಿದೆ ಎಂದು ಹೇಳಿದರು.

ಕೊರೊನಾ ವೈರಸ್ ಪ್ರಕರಣಗಳು ಇಳಿಗೆ ಕಾಣುತ್ತಿದ್ದು, ಸಾವಿನ ಪ್ರಮಾಣವೂ ತಗ್ಗುತ್ತಿದೆ. ಇದೂ ಕೂಡ ಒಳ್ಳೆಯ ಬೆಳೆವಣಿಗೆ. ಅದಕ್ಕಾಗಿ ಜಿಲ್ಲಾಡಳಿತ ಸಾಕಷ್ಟು ಶ್ರಮಿಸುತ್ತಿದೆ. ಹಾಗಾಗಿ ದಾವಣಗೆರೆ ಜಿಲ್ಲೆಯನ್ನು ಕೊರೊನಾ ಮುಕ್ತ ಮಾಡಲು ತಮ್ಮೆಲ್ಲರ ಸಹಕಾರ ಮುಖ್ಯ ಅಂದರು.

ಸಂಸದರಾದ ಜಿ.ಎಂ.ಸಿದ್ದೇಶ್ವರ ಮಾತನಾಡಿ, ಕೊರೊನಾದಿಂದ ಪಾಲಿಕೆ ಕೆಲಸಗಳಿಗೆ ಹಿನ್ನೆಡೆಯಾಗಿತ್ತು. ಈಗ ಮತ್ತೆ ಕಾಮಗಾರಿಗಳು ವೇಗ ಪಡೆಯಲಿವೆ. ಮಹಾನಗರ ಪಾಲಿಕೆ ಹಾಗೂ ಸ್ಮಾರ್ಟ್ ಸಿಟಿ ಕಾಮಗಾರಿಗಳನ್ನು ಬೇಗ ಬೇಗ ಪೂರ್ಣಗೊಳಿಸಬೇಕು ಹಾಗೂ ನಗರದಲ್ಲಿ ಸ್ವಚ್ಛತೆಗೆ ಹೆಚ್ಚು ಒತ್ತು ನೀಡಬೇಕು. ಆಯಾ ವಾರ್ಡ್‍ನ ಪಾಲಿಕೆ ಸದಸ್ಯರು ಮತ್ತು ಅಧಿಕಾರಿಗಳು ಗಿಡಗಳ ಆರೈಕೆಯತ್ತ ಗಮನ ನೀಡಬೇಕೆಂದರು.

ಮಹಾನಗರ ಪಾಲಿಕೆ ಮೇಯರ್ ಬಿ.ಜಿ.ಅಜಯಕುಮಾರ್ ಮಾತನಾಡಿ, ಮಹಾತ್ಮಾ ಗಾಂಧಿ ಗ್ರಾಮ ವಿಕಾಸ ಯೋಜನೆಯಡಿ ದಾವಣಗೆರೆ ಮಹಾನಗರ ಪಾಲಿಕೆಗೆ ರೂ.125 ಕೋಟಿ ಹಣ ಬಂದಿದ್ದು, ನಗರ ಹೆಚ್ಚು ಅಭಿವೃದ್ದಿ ಕಾಣಲಿದೆ. ನಗರದಾದ್ಯಂತ 21 ಸಾವಿರ ಬೀದಿ ದೀಪಗಳಿದ್ದು, ಅವುಗಳನ್ನು ಎಲ್ಇಡಿ ದೀಪಗಳನ್ನಾಗಿ ಪರಿವರ್ತಿಸಲಾಗುತ್ತಿದೆ. ಇದರಿಂದ 80 ಲಕ್ಷ ರೂ. ಬರುತ್ತಿದ್ದ ಒಂದು ತಿಂಗಳ ವಿದ್ಯುತ್ ಬಿಲ್ ನಲ್ಲಿ 50 ಲಕ್ಷ ರೂ. ಉಳಿತಾಯ ಆಗಲಿದೆ ಎಂದರು.

ಇದರೊಂದಿಗೆ 1 ಲಕ್ಷ ಗಿಡಗಳನ್ನು ನೆಡಲು ಕಾರ್ಯಕ್ರಮ ರೂಪಿಸಿದ್ದು, 1500 ಹಣ್ಣಿನ ಗಿಡ ನೆಡಲಾಗುತ್ತಿದೆ. ಇದರಿಂದ ಪಕ್ಷಿಗಳಿಗೆ ಯಥೇಚ್ಚ ಆಹಾರ ದೊರೆಯಲಿದೆ. ಜೂನ್ ತಿಂಗಳಲ್ಲಿ 95,200 ಗಿಡಗಳನ್ನು ನೆಡಲಾಗುತ್ತಿದ್ದು, ಹಸಿರು ದಾವಣಗೆರೆ ಆಗಲಿದೆ ಎಂದರು.

   Diego Maradona ಅಗಲಿಕೆಗೆ ಫುಟ್ಬಾಲ್ ಜಗತ್ತು ಮರುಕ | Oneindia Kannada

   ಕಾರ್ಯಕ್ರಮದಲ್ಲಿ ಶಾಸಕರಾದ ಎಸ್.ಎ.ರವೀಂದ್ರನಾಥ, ಉಪ ಮಹಾಪೌರರಾದ ಸೌಮ್ಯ ನರೇಂದ್ರಕುಮಾರ್, ದೂಡಾ ಅಧ್ಯಕ್ಷರಾದ ರಾಜನಹಳ್ಳಿ ಶಿವಕುಮಾರ್, ಪಾಲಿಕೆ ವಿರೋಧ ಪಕ್ಷದ ನಾಯಕ ನಾಗರಾಜು, ಗಾಂಧಿನಗರ ಪಾಲಿಕೆ ಸದಸ್ಯ ಜಿ.ಡಿ.ಪ್ರಕಾಶ, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ರಾಜೀವ್, ಮಹಾನಗರ ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಇದ್ದರು.

   English summary
   Davanagere District In Charge Minister BA Basavaraja said that it was a pleasure to see the administrative machinery come to their doorstep through a new program called 'Mahanagara Palike'.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X