ಮಹದಾಯಿಗಾಗಿ ಮಿಡಿದ ಹೊನ್ನಾಳಿ, ದಾವಣಗೆರೆ ಜನತೆ

Posted By:
Subscribe to Oneindia Kannada

ಹೊನ್ನಾಳಿ, ಜುಲೈ 28: ಮಹದಾಯಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕ ರಾಜ್ಯಕ್ಕೆ ವ್ಯತಿರಿಕ್ತವಾಗಿ ನ್ಯಾಯಾಧೀಕರಣದ ತೀರ್ಪು ಬಂದಿರುವ ಹಿನ್ನಲೆಯಲ್ಲಿ ಗುರುವಾರಂದು ಹೊನ್ನಾಳಿಯಲ್ಲಿ ಬಂದ್ ಆಚರಿಸಲಾಗಿದೆ.

ಕರುನಾಡ ಸಮರ ಸೇನೆ, ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ವಿವಿಧ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಶಾಲಾ ಕಾಲೇಜು, ಅಂಗಡಿ ಮುಂಗಟ್ಟುಗಳು ಮುಚಲಾಗಿತ್ತು. ಸರ್ಕಾರಿ ಕಚೇರಿಗಳು ಕೂಡಾ ಬಂದ್ ಆಗಿದ್ದು, ಸಾರ್ವಜನಿಕರ ಬೆಂಬಲದಿಂದ ಬಂದ್ ಯಶಸ್ವಿಯಾಗಿದೆ.[ಮಹದಾಯಿ ವಿವಾದದಲ್ಲಿ ಹೊಲಸು ರಾಜಕೀಯದ ವಾಸನೆ!]

Mahadayi Verdict : Davanagere, Honnali Bandh Protest

ಕನ್ನಡ ಪರ ಸಂಘಟನೆ ಮುಖಂಡರಾದ ಹಳದಪ್ಪ, ಚಿನ್ನಪ್ಪ, ಮಲ್ಲೇಶ್, ಪಾಲಾಕ್ಷಪ್ಪ, ಜಾವೀದ್ ಮುಂತಾದವರು ಪ್ರತಿಭಟನೆಯ ಮುಂದಾಳತ್ವ ವಹಿಸಿದ್ದರು.[ಮಹದಾಯಿ ನೀರು ಹಂಚಿಕೆ : ಕಥೆ ವ್ಯಥೆ ಟೈಮ್ ಲೈನ್]

ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ಕಾರ್ಯಕರ್ತರು ದಾವಣಗೆರೆಯ ಜಯದೇವ ವೃತ್ತದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಕರವೇ ಕಾರ್ಯಕರ್ತರು(ಪ್ರವೀಣ್ ಶೆಟ್ಟಿ ಬಣ) ಟೈರ್ ಗಳಿಗೆ ಬೆಂಕಿ ಹಚ್ಚಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.[ಕರ್ನಾಟಕ ಬಂದ್: ಮಹದಾಯಿಗಾಗಿ ಟ್ವಿಟ್ಟರಲ್ಲೂ ಆಕ್ರೋಶದ ಕಿಡಿ]

ಇದು ಉತ್ತರ ಕರ್ನಾಟಕ ಜನರ ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವಂಥ ಮಾನವೀಯ ವಿಚಾರವಾಗಿದ್ದು, ನ್ಯಾಯಾಧೀಕರಣ ನೀಡಿದ ತೀರ್ಪು ಸರಿಯಿಲ್ಲ ಎಂದು ಪ್ರತಿಭಟನಾನಿರತರು ಖಂಡಿಸಿದರು. ಲೋಕಸಭೆಯಲ್ಲಿ ಜನರ ಪರ ಧ್ವನಿಯಾದಬೇಕಿರುವ ಜನಪ್ರತಿನಿಧಿಗಳು ತೀರ್ಪಿನ ವಿದುದ್ಧ ಧ್ವನಿ ಎತ್ತುವ ಮೂಲಕ ಜನರ ಹಿತ ಕಾಯಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.[Live : ಮಂಡ್ಯದಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿ ತಡೆ]

ಸಂಬಳಕ್ಕಾಗಿ ಪ್ರತಿಭಟನೆ, ಧ್ವನಿ ಎತ್ತುವ ಸಂಸದರು, ಈಗ ಕೇಂದ್ರದ ಮೇಲೆ ಒತ್ತಡ ಹೇರಿ, ಉತ್ತರ ಕರ್ನಾಟಕದ ಜನರ ಬದುಕಿನ ಪ್ರಶ್ನೆಗೆ ಸರಿಯಾದ ಸಮಾಧಾನ ನೀಡಲು ಎಂದು ಮನವಿ ಮಾಡಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Mahadayi Verdict : Pro Kannada organisations and Farmer's associations staged dharna and protested against the Tribunal verdict. Honnalli and Davanagere Bandh was successful
Please Wait while comments are loading...