Get Updates
Get notified of breaking news, exclusive insights, and must-see stories!

ದಾವಣಗೆರೆ Lok Sabha Election 2024 Results LIVE: ಪ್ರಭಾ ಮಲ್ಲಿಕಾರ್ಜುನ್ ಜಯ

ದಾವಣಗೆರೆ, ಜೂನ್ 04; ದಾವಣಗೆರೆ ಲೋಕಸಭಾ ಚುನಾವಣೆ 2024ರ ಫಲಿತಾಂಶ ಪ್ರಕಟವಾಗಿದೆ. ಎರಡೂ ಪಕ್ಷದಿಂದ ಮಹಿಳಾ ಅಭ್ಯರ್ಥಿಗಳು ದಾವಣಗೆರೆಯಲ್ಲಿ ಕಣದಲ್ಲಿದ್ದರು. ಮೇ 7ರಂದು ಕ್ಷೇತ್ರದಲ್ಲಿ ಶೇ 76.99ರಷ್ಟು ಮತದಾನವಾಗಿತ್ತು.

ದಾವಣಗೆರೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ, ಕಾಂಗ್ರೆಸ್‌ನಿಂದ ಪ್ರಭಾ ಮಲ್ಲಿಕಾರ್ಜುನ್ ಕಣದಲ್ಲಿದ್ದರು. ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ, ಸಿದ್ದರಾಮಯ್ಯ ಆಪ್ತರಾದ ಜಿ. ಬಿ. ವಿನಯ್ ಕುಮಾರ್ ಟಿಕೆಟ್ ಕೈ ತಪ್ಪಿದ ಬಳಿಕ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು.

Davanagere Lok Sabha Election 2024 Results LIVE Who Will Win Prabha Mallikarjun Vs Gayatri Siddheshwar

2024ರ ದಾವಣಗೆರೆ ಲೋಕಸಭಾ ಕ್ಷೇತ್ರದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ. ಚಿತ್ರಗಳು, ವಿಡಿಯೋ, ಫಲಿತಾಂಶದ ಕುರಿತು ನಾಯಕರ ಪ್ರತಿಕ್ರಿಯೆ, ಪಡೆದ ಮತಗಳ ನಿಖರ ಅಂಕಿ ಅಂಶಗಳ ಮಾಹಿತಿ ಈ ಪುಟದಲ್ಲಿದೆ.

ಚುನಾವಣೆ ಫಲಿತಾಂಶದ ಕ್ಷಣ-ಕ್ಷಣದ ಮಾಹಿತಿ

* 2024ರ ಲೋಕಸಭೆ ಚುನಾವಣೆಯಲ್ಲಿ ದಾವಣಗೆರೆ ಕ್ಷೇತ್ರದಲ್ಲಿ ಪ್ರಭಾ ಮಲ್ಲಿಕಾರ್ಜುನ್ ಗೆಲವು ಸಾಧಿಸಿದ್ದಾರೆ.

* ಸಮಯ 11.40: ದಾವಣಗೆರೆಯಲ್ಲಿ ಪ್ರಭಾ ಮಲ್ಲಿಕಾರ್ಜುನ್ 192826 ಮತಗಳನ್ನು ಪಡೆದಿದ್ದಾರೆ. ಗಾಯತ್ರಿ ಸಿದ್ದೇಶ್ವರ 180796 ಮತಗಳನ್ನು ಪಡೆದಿದ್ದಾರೆ. ಜಿ. ಬಿ. ವಿನಯ್ ಕುಮಾರ್ 12690 ಮತಗಳನ್ನು ಪಡೆದಿದ್ದಾರೆ.

* ಸಮಯ 10.36: ದಾವಣಗೆರೆಯಲ್ಲಿ ಪ್ರಭಾ ಮಲ್ಲಿಕಾರ್ಜುನ್ 107481 ಮತಗಳು. ಗಾಯತ್ರಿ ಸಿದ್ದೇಶ್ವರ 104061 ಮತ ಮತ್ತು ಜಿ. ಬಿ. ವಿನಯ್ ಕುಮಾರ್ 7823.

* ಸಮಯ 9.36: ದಾವಣಗೆರೆಯಲ್ಲಿ ಪ್ರಭಾ ಮಲ್ಲಿಕಾರ್ಜುನ್ 32544 ಮತಗಳು. ಗಾಯಿತ್ರಿ ಸಿದ್ದೇಶ್ವರ್ 26226 ಮತಗಳು ಮತ್ತು ಜಿ. ಬಿ. ವಿನಯ್ ಕುಮಾರ್ 3312 ಮತಗಳನ್ನು ಪಡೆದಿದ್ದಾರೆ.

*ಸಮಯ 8.30: ದಾವಣಗೆರೆ ಕ್ಷೇತ್ರದಲ್ಲಿ ಒಟ್ಟು 4,918 ಅಂಚೆ ಮತಗಳು ಚಲಾವಣೆಯಾಗಿವೆ. ಅಂಚೆ ಮತಗಳ ಎಣಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಮುನ್ನಡೆ ಪಡೆದಿದ್ದಾರೆ. ಕಾಂಗ್ರೆಸ್‌ಗೆ 742, ಬಿಜೆಪಿಗೆ 714 ಮತಗಳು ಬಂದಿವೆ.

* ಸಮಯ 7.45: ಮತ ಯಂತ್ರಗಳನ್ನು ಇಟ್ಟಿರುವ ಸ್ಟ್ರಾಂಗ್‌ ರೂಂ ಅನ್ನು ಚುನಾವಣಾಧಿಕಾರಿಗಳು, ವಿವಿಧ ಪಕ್ಷಗಳ ಏಜೆಂಟರ ಸಮ್ಮುಖದಲ್ಲಿ ಓಪನ್ ಮಾಡಲಾಗಿದೆ. ಮತ ಎಣಿಕೆ ಕೆಲವೇ ಕ್ಷಣಗಳಲ್ಲಿ ಆರಂಭವಾಗಲಿದೆ.

* ಸಮಯ 7 ಗಂಟೆ: ದಾವಣಗೆರೆ ಲೋಕಸಭೆ ಚುನಾವಣೆಯಲ್ಲಿ ಜಿ. ಎಂ. ಸಿದ್ದೇಶ್ವರ, ಶಾಮನೂರು ಶಿವಶಂಕರಪ್ಪ ಕುಟುಂಬದ ಪ್ರತಿಷ್ಠೆ ಅಡಗಿದೆ. ಚುನಾವಣೆಯಲ್ಲಿ ಯಾವ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ ಎಂಬ ಚರ್ಚೆಗಳು ಜೋರಾಗಿವೆ.

* ಸಮಯ 6 ಗಂಟೆ: ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳು ಮಹಿಳಾ ಅಭ್ಯರ್ಥಿಗೆ ಟಿಕೆಟ್ ನೀಡಿವೆ. ಯಾರು ಗೆದ್ದರೂ ಸಹ ಕರ್ನಾಟಕದಿಂದ ಮಹಿಳಾ ಸಂಸದರೊಬ್ಬರು ಆಯ್ಕೆಯಾಗಲಿದ್ದಾರೆ.

* ದಾವಣಗೆರೆ ಲೋಕಸಭಾ ಚುನಾವಣೆ 2024ರ ಮತ ಎಣಿಕೆ ತೋಳಹುಣಸೆ ದಾವಣಗೆರೆ ವಿಶ್ಯವಿದ್ಯಾನಿಲಯದಲ್ಲಿನ ಶಿವಗಂಗೋತ್ರಿಯಲ್ಲಿ ಜೂನ್ 4ರ ಬೆಳಗ್ಗೆ 8 ಗಂಟೆಯಿಂದ ನಡೆಯಲಿದೆ. ಲೋಕಸಭಾ ಕ್ಷೇತ್ರವು 8 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದ್ದು ಪ್ರತಿ ಕ್ಷೇತ್ರದಲ್ಲಿ 14 ಟೇಬಲ್‍ಗಳಲ್ಲಿ ಎಣಿಕೆ ನಡೆಯಲಿದ್ದು ಒಂದು ಸುತ್ತಿಗೆ 112 ಮತಗಟ್ಟೆಗಳ ಎಣಿಕೆ ನಡೆಯಲಿದೆ.

* ಕ್ಷೇತ್ರದಲ್ಲಿ 1946 ಮತಗಟ್ಟೆಗಳಿದ್ದು ಕನಿಷ್ಠ 16 ಹಾಗೂ ಗರಿಷ್ಠ 19 ಸುತ್ತುಗಳಲ್ಲಿ ಮತ ಎಣಿಕೆ ನಡೆಯಲಿದೆ. ಪ್ರತಿ ಎಣಿಕೆ ಟೇಬಲ್‍ನಲ್ಲಿ ಎಣಿಕೆ ವೀಕ್ಷಕರು, ಎಣಿಕೆ ಸಹಾಯಕರು ಕಾರ್ಯನಿರ್ವಹಿಸುವರು ಮತ್ತು ಅಂಚೆ ಮತ ಎಣಿಕೆಗೆ 12 ಟೇಬಲ್‍ಗಳನ್ನು ಹಾಕಲಾಗಿದ್ದು ಸೇವಾ ಮತದಾರರ ಮತ ಎಣಿಕೆಗೆ 1 ಟೇಬಲ್‍ನಲ್ಲಿ ನಡೆಯಲಿದೆ.

* ದಾವಣಗೆರೆ ಚುನಾವಣೆ ಎಂದರೆ ಅದು ಬಿಜೆಪಿಯ ಜಿ. ಎಂ. ಸಿದ್ದೇಶ್ವರ ಮತ್ತು ಕಾಂಗ್ರೆಸ್‌ನ ಶಾಮನೂರು ಶಿವಶಂಕರಪ್ಪ ಕುಟುಂಬದ ನಡುವಿನ ಹೋರಾಟ. ಈ ಬಾರಿಯ ಚುನಾವಣೆಯಲ್ಲಿ ಜಿ. ಎಂ. ಸಿದ್ದೇಶ್ವರ ಪತ್ನಿ ಗಾಯತ್ರಿ ಸಿದ್ದೇಶ್ವರ ಬಿಜೆಪಿ ಅಭ್ಯರ್ಥಿ. ಶಾಮನೂರು ಶಿವಶಂಕರಪ್ಪ ಸೊಸೆ, ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಪತ್ನಿ ಡಾ. ಪ್ರಭಾ ಮಲ್ಲಿಕಾರ್ಜುನ್ ಕಾಂಗ್ರೆಸ್ ಅಭ್ಯರ್ಥಿ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+