ಲೋಕಸಭೆ ಚುನಾವಣೆ; ದಾವಣಗೆರೆಯ ಮತದಾರರ ಪಟ್ಟಿ

ದಾವಣಗೆರೆ, ಜನವರಿ 25: ಕೇಂದ್ರ ಚುನಾವಣಾ ಆಯೋಗದ ಸೂಚನೆಯಂತೆ ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ದಾವಣಗೆರೆ ಜಿಲ್ಲೆಯ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ನಡೆಸಲಾಗಿದೆ. ಅಂತಿಮ ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

ದಾವಣಗೆರೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ. ವೆಂಕಟೇಶ್ ಎಂ. ವಿ. ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಿದರು. "ಚುನಾವಣಾ ಆಯೋಗದ ನಿರ್ದೇಶನದನ್ವಯ ಮತದಾರರ ಪಟ್ಟಿಯನ್ನು ಪರಿಷ್ಕರಿಸಿ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಜಿಲ್ಲೆಯಲ್ಲಿ 14,58,594 ಮತದಾರರಿದ್ದಾರೆ" ಎಂದು ಹೇಳಿದರು.

Lok Sabha Election 2024 Davanagere District Voters

ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಸಭೆ ನಡೆಸಿದ ಅವರು, "ಆಯೋಗದ ನಿರ್ದೇಶನದನ್ವಯ ಅಕ್ಟೋಬರ್ 27 ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದ್ದು ಅದರಲ್ಲಿ 14,53,818 ಮತದಾರರಿದ್ದರು. ಮತದಾರರ ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು 2024 ರ ಜನವರಿ 12 ರ ವರೆಗೆ ಅವಕಾಶ ಕಲ್ಪಿಸಲಾಗಿದ್ದು ಈ ವೇಳೆ ಹೊಸ ನೊಂದಣಿ, ಬೇರೆ ಕ್ಷೇತ್ರಕ್ಕೆ ವರ್ಗಾವಣೆ ಹಾಗೂ ಮರಣ ಹೊಂದಿದವರನ್ನು ಪಟ್ಟಿಯಿಂದ ರದ್ದುಪಡಿಸಲಾಗಿದೆ" ಎಂದರು.

"ಅಂತಿಮ ಮತದಾರರ ಪಟ್ಟಿಯನ್ವಯ ಜಿಲ್ಲೆಯಲ್ಲಿ 7,27,246 ಪುರುಷ, 7,31,230 ಮಹಿಳೆಯರು, 118 ಇತರೆ ಸೇರಿ 14,58,594 ಮತದಾರರಿದ್ದಾರೆ. ಮತದಾರರ ಪಟ್ಟಿಯನ್ನು ಎಲ್ಲಾ ತಹಶೀಲ್ದಾರ್ ಕಛೇರಿ, ಉಪವಿಭಾಗಾಧಿಕಾರಿಗಳ ಕಛೇರಿ ಹಾಗೂ ವೆಬ್‍ಸೈಟ್‍ನಲ್ಲಿ ಪ್ರಕಟಿಸಲಾಗಿದ್ದು ಸಾರ್ವಜನಿಕರು ತಮ್ಮ ಮತದಾರರ ವಿವರವನ್ನು ಪರಿಶೀಲಿಸಿಕೊಳ್ಳಬೇಕು" ಎಂದು ಹೇಳಿದರು.

ಯವ ಮತದಾರರು ಎಷ್ಟು?; ಮತದಾರರ ಪಟ್ಟಿ ಪರಿಷ್ಕರಣೆಯ ವೇಳೆ ಒಟ್ಟು 18714 ಮತದಾರರನ್ನು ದಾಖಲೆಗಳ ಪರಿಶೀಲನೆ ಮಾಡಿ ಪಟ್ಟಿಯಿಂದ ತೆಗೆದು ಹಾಕಲಾಗಿದೆ. ಇದರಲ್ಲಿ ಶೇ 90ರಷ್ಟು ಮರಣ ಹೊಂದಿದವರು ಹಾಗೂ ಎರಡೂ ಕಡೆ ಪಟ್ಟಿಯಲ್ಲಿ ಸೇರ್ಪಡೆಯಾದವುಗಳಾಗಿರುತ್ತವೆ.

ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಅವಧಿಯಲ್ಲಿ 29081 ಯುವ ಮತದಾರರನ್ನು ಹೊಸದಾಗಿ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ. ಸೇರ್ಪಡೆಯಾದವರಲ್ಲಿ ಜಗಳೂರು 4239, ಹರಿಹರ 4646, ದಾವಣಗೆರೆ ಉತ್ತರ 4032, ದಾವಣಗೆರೆ ದಕ್ಷಿಣ 3581, ಮಾಯಕೊಂಡ 4176, ಚನ್ನಗಿರಿ 3884, ಹೊನ್ನಾಳಿ ಕ್ಷೇತ್ರದಲ್ಲಿ 4523 ಯುವ ಮತದಾರರು ನೋಂದಾಯಿಸಿದ್ದಾರೆ.

ಅಂತಿಮ ಮತದಾರರ ಪಟ್ಟಿಯನ್ವಯ ಜಗಳೂರು 195640, ಹರಿಹರ 209708, ದಾವಣಗೆರೆ ಉತ್ತರ 245823, ದಾವಣಗೆರೆ ದಕ್ಷಿಣ 215300, ಮಾಯಕೊಂಡ 192925, ಚನ್ನಗಿರಿ 200828, ಹೊನ್ನಾಳಿ 198370 ಮತದಾರಿದ್ದಾರೆ.

ದಾವಣಗೆರೆ ಜಿಲ್ಲೆಯಲ್ಲಿ 1,693 ಮತಗಟ್ಟೆಗಳಿದ್ದು ಜಗಳೂರು 263, ಹರಿಹರ 228, ದಾವಣಗೆರೆ ಉತ್ತರ 245, ದಾವಣಗೆರೆ ದಕ್ಷಿಣ 217, ಮಾಯಕೊಂಡ 240, ಚನ್ನಗಿರಿ 255, ಹೊನ್ನಾಳಿ 245 ಮತಗಟ್ಟೆಗಳಿವೆ.

18 ವರ್ಷ ತುಂಬುವರು ನೋಂದಣಿಗೆ ಅವಕಾಶ; ಹೊಸ ಮತದಾರರು https;//voters.eci.gov.in ಹಾಗೂ https;//ceo.karnataka.gov.in ಮೂಲಕ ಹೆಸರು ನೋಂದಾಯಿಸಬಹುದಾಗಿದ್ದು 2024ರ ಏಪ್ರಿಲ್ 1, ಜುಲೈ 1 ಹಾಗೂ ಅಕ್ಟೋಬರ್ 1 ಕ್ಕೆ 18 ವರ್ಷ ಪೂರ್ಣಗೊಳ್ಳುವವರು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಲು ಅವಕಾಶ ಇರುತ್ತದೆ.

ಆದರೆ ಚುನಾವಣೆ ವೇಳಾಪಟ್ಟಿ ಒಳಗೆ 18 ವರ್ಷ ತುಂಬುವವರು ಮಾತ್ರ ಮತದಾನ ಮಾಡಲು ಅರ್ಹರಾಗುತ್ತಾರೆ. ಮತದಾರರು ಯಾವುದೇ ಸಹಾಯ ಬೇಕಿದ್ದಲ್ಲಿ ಜಿಲ್ಲಾ ಸಂಪರ್ಕ ಸಂಖ್ಯೆ 1950ಗೆ ಕರೆ ಮಾಡಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+