ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಶೇ 62ರಷ್ಟು ಮತದಾನ

ದಾವಣಗೆರೆ, ಅಕ್ಟೋಬರ್ 28: ಕರ್ನಾಟಕ ವಿಧಾನ ಪರಿಷತ್ತಿಗೆ ನಾಲ್ವರು ಸದಸ್ಯರನ್ನು ಆಯ್ಕೆ ಮಾಡಲು ಬುಧವಾರ ಮತದಾನ ನಡೆಯಿತು. ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಶಾಂತಿಯುತವಾಗಿ ಮತದಾನ ನಡೆದಿದ್ದು, ಶೇ.62.55 ಮತದಾನವಾಗಿದೆ.

ಆಗ್ನೇಯ ಪದವೀಧರ ಕ್ಷೇತ್ರದ ವ್ಯಾಪ್ತಿಗೆ ದಾವಣಗೆರೆ ಜಿಲ್ಲೆಯ ದಾವಣಗೆರೆ, ಹರಿಹರ ಮತ್ತು ಜಗಳೂರು ಮತ ಕ್ಷೇತ್ರಗಳ ಒಟ್ಟು 32 ಮತಗಟ್ಟೆ ಕೇಂದ್ರಗಳಲ್ಲಿ ಮತದಾನ ನಡೆಯಿತು. ಒಟ್ಟು 12,813 ಪುರುಷ ಮತದಾರರ ಪೈಕಿ 8,641 ಜನರು ಮತದಾನ ಮಾಡಿದರು. 8,143 ಮಹಿಳಾ ಮತದಾರರ ಪೈಕಿ 4,471 ಮಹಿಳೆಯರು ಮತದಾನ ಮಾಡಿದರು.

ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 13,112 ಮತದಾರರು ಮತದಾನ ಮಾಡಿದ್ದು ಶೇ. 62.55 ರಷ್ಟು ಮತದಾನವಾಗಿದೆ. ನವೆಂಬರ್ 2ರಂದು ಮತ ಎಣಿಕೆ ನಡೆಯಲಿದೆ. ಮಲೆಬೆನ್ನೂರು ಮತಗಟ್ಟೆ ಸಂಖ್ಯೆ 2ರಲ್ಲಿ ಅತಿ ಹೆಚ್ಚು ಶೇ. 85.64 ಮತದಾನವಾಗಿದ್ದರೆ, ದಾವಣಗೆರೆ ಮತಗಟ್ಟೆ ಸಂಖ್ಯೆ 13ರಲ್ಲಿ ಅತಿ ಕಡಿಮೆ ಶೇ.42.56 ರಷ್ಟು ಮತದಾನವಾಗಿದೆ.

 Legislative Council Election 62 Per Cent Voting In South East Graduates Constituency

ಬೆಳಗ್ಗೆ 10 ಗಂಟೆಗೆ ಶೇ.5 ರಷ್ಟು ಮತದಾನವಾಗಿತ್ತು. ಮಧ್ಯಾಹ್ನ 12 ಗಂಟೆಗೆ ಶೇ 19.54 ಮತದಾನವಾಯಿತು. ಮಧ್ಯಾಹ್ನ 2 ಗಂಟೆಗೆ ಶೇ. 32.20 ಮತದಾನವಾದರೆ, ಸಂಜೆ 4 ಗಂಟೆಗೆ ಶೇ. 52.80 ಮತದಾನವಾಗಿತ್ತು.

ಬೆಳಗ್ಗೆ 8 ರಿಂದ ಸಂಜೆ 5 ಗಂಟೆಯ ತನಕ ಮತದಾನ ಮಾಡಲು ಅವಕಾಶ ನೀಡಲಾಗಿತ್ತು. ಮತದಾನ ಎಲ್ಲಾ ಕಡೆ ಶಾಂತಿಯುತವಾಗಿ ನಡೆಯಿತು. ಕೋವಿಡ್ 19 ನಿಯಮಗಳನ್ನು ಸಹ ಮತದಾರರು ಪಾಲನೆ ಮಾಡಿದರು.

ಎಲ್ಲಾ ಮತಗಟ್ಟೆಗಳಲ್ಲಿ ಆಶಾ ಕಾರ್ಯಕರ್ತೆಯರು ಮತದಾರರಿಗೆ ಸ್ಯಾನಿಟೈಸರ್ ನೀಡಿದರು. ಥರ್ಮಲ್ ಸ್ಕ್ಯಾನರ್ ಮೂಲಕ ದೇಹದ ಉಷ್ಣತೆ ಪರಿಶೀಲನೆ ನಡೆಸಲಾಯಿತು. ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೈಸ್ಕೂಲ್ ಮೈದಾನದಲ್ಲಿನ ಮತಗಟ್ಟೆಯಲ್ಲಿ ಮತದಾನ ಮಾಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+