KSRTC: ದಾವಣಗೆರೆ-ಶ್ರೀಶೈಲಕ್ಕೆ ಕೆಎಸ್‌ಆರ್‌ಟಿಸಿ ಪಲ್ಲಕ್ಕಿ ಬಸ್ ಸೇವೆ ಆರಂಭ: ಸಮಯ, ಟಿಕೆಟ್ ದರ ಮಾರ್ಗಗಳ ವಿವರ
KSRTC: ಕೆಎಸ್‌ಆರ್‌ಟಿಸಿ ರಾಜ್ಯದ ಜೀವನಾಡಿ ಸಾರಿಗೆ ಆಗಿದೆ. ಇದು ಆಗಾಗ ಕೈಗೆಟಕುವ ದರದಲ್ಲಿ ಟೂರ್ ಪ್ಯಾಕೇಜ್‌ಗಳನ್ನು ಘೋಷಣೆ ಮಾಡುತ್ತಲಿರುತ್ತದೆ. ಅಲ್ಲದೆ, ಪ್ರಯಾಣಿಕರ ಬೇಡಿಕೆ ತಕ್ಕಂತೆ ಹೊಸ ಮಾರ್ಗಗಳಲ್ಲಿ ಬಸ್ ಸೇವೆಯನ್ನು ನೀಡುತ್ತಲೇ ಬಂದಿದೆ. ಹಾಗೆಯೇ ಇದೀಗ ದಾವಣಗೆರೆ-ಶ್ರೀಶೈಲಕ್ಕೆ ಹವಾನಿಯಂತ್ರಿತ ರಹಿತ ಸ್ಲೀಪರ್ ಪಲ್ಲಕಿ ಬಸ್ ಸೇವೆ ಆರಂಭಿಸಿದೆ. ಹಾಗಾದ್ರೆ ಮಾರ್ಗಗಳು ಹಾಗೂ ದರಗಳ ವಿವರವನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಕೆಎಸ್‌ಆರ್‌ಟಿಸಿ ಕರುನಾಡ ರಥ ಆಗಿದ್ದು, ಇದರ ಸೇವೆಯನ್ನು ಪ್ರಯಾಣಿಕ ಅನುಕೂಲಕ್ಕೆ ತಕ್ಕಂತೆ ವಿಸ್ತರಣೆ ಮಾಡಲಾಗುತ್ತಿದೆ. ಹಾಗೆಯೇ ಇದೀಗ ಕೆಎಸ್‌ಆರ್‌ಟಿಸಿ ದಾವಣಗೆರೆ ವಿಭಾಗದಿಂದ ಪ್ರತಿನಿತ್ಯ ಹವಾನಿಯಂತ್ರಿತ ರಹಿತ ಸ್ಲೀಪರ್ ಪಲ್ಲಕ್ಕಿ ಸಾರಿಗೆ ಸೌಕರ್ಯವನ್ನು ಪ್ರಯಾಣಿಕರ ಹಿತದೃಷ್ಠಿಯಿಂದ ದಾವಣಗೆರೆಯಿಂದ ಶ್ರೀಶೈಲಕ್ಕೆ ಆರಂಭಿಸಲಾಗಿದೆ. ಸಮಯ, ದರ, ಯಾವ ಮಾರ್ಗಗಲ್ಲಿ ಸಂಚಾರ ಮಾಡಲಿದ ಎನ್ನುವ ಪ್ರಶ್ನೆಗಳಿಗೆ ಉತ್ತರವನ್ನು ಇಲ್ಲಿ ನೀಡಲಾಗಿದೆ ನೋಡಿ.

ಸಮಯಗಳು ಹಾಗೂ ದರಗಳ ವಿವರ: ದಾವಣಗೆರೆಯಿಂದ-ಹರಿಹರ-ಹರಪನಹಳ್ಳಿ-ಹೊಸಪೇಟೆ-ಬಳ್ಳಾರಿ-ಶ್ರೀಶೈಲಂಗೆ ಸಂಜೆ 5:15ಕ್ಕೆ ಹೊರಟು ಬೆಳಗ್ಗೆ 6.30 ಗಂಟೆಗೆ ತಲುಪುತ್ತದೆ. ಪ್ರಯಾಣ ದರ 1,216 ರೂಪಾಯಿ ನಿಗದಿಪಡಿಸಲಾಗಿದೆ. ಶ್ರೀಶೈಲದಿಂದ ದಾವಣಗೆರೆಗೆ ಹೊರಡುವ ಸಮಯ? ದರಗಳನ್ನು ಈ ಕೆಳಗೆ ನೀಡಲಾಗಿದೆ ತಿಳಿಯಿರಿ.
ಶ್ರೀಶೈಲ-ಬಳ್ಳಾರಿ-ಹೊಸಪೇಟೆ-ಹರಪನಹಳ್ಳಿ-ಹರಿಹರ-ದಾವಣಗೆರೆಗೆ ಸಂಜೆ 5:15ಕ್ಕೆ ಹೊರಟು ಬೆಳಗ್ಗೆ 6.30ಕ್ಕೆ ತಲುಪುತ್ತದೆ. ಪ್ರಯಾಣ ದರ 1,216 ರೂಪಾಯಿ ನಿಗದಿ ಮಾಡಲಾಗಿದೆ. ಮುಂಗಡ ಬುಕ್ಕಿಂಗ್ ಕೌಂಟರ್‌ಳಲ್ಲಿ ಹಾಗೂ ksrtc.karnataka.gov.inಗೆ ಭೇಟಿ ನೀಡಿ ಆನ್‌ಲೈನ್‌ನಲ್ಲಿ ಕಾಯ್ದಿರಿಸಲು ಅವಕಾಶ ಕಲ್ಪಿಸಲಾಗಿದೆ.
ಇನ್ನೂ ಪ್ರಯಾಣಿಕರು ಈ ಸೌಲಭ್ಯವನ್ನು ಸದುಪಯೋಗ ಪಡೆದುಕೊಳ್ಳುವಂತೆ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ಬಿ.ಎಸ್. ಶಿವಕುಮಾರಯ್ಯ ತಿಳಿಸಿದ್ದಾರೆ ಎಂದು ವರದಿಯಾಗಿದೆ. ಇನ್ನೂ ಕೆಎಸ್‌ಆರ್‌ಟಿಸಿ ಹೀಗೆ ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ತನ್ನ ಸೇವೆಯನ್ನು ವಿಸ್ತರಣೆ ಮಾಡಿರುವುದು ಇದೇ ಮೊದಲೇನಲ್ಲ. ಈ ಹಿಂದಿನಿಂದಲೂ ಸಹ ಪ್ರಯಾಣಿಕರ ಅನುಕೂಲತೆಗಳನ್ನು ಅರಿತು ಹೊಸ ಮಾರ್ಗಗಳಲ್ಲಿ ಬಸ್ ಸೇವೆಯನ್ನು ಕಲ್ಪಿಸುತ್ತಲೇ ಬಂದಿದೆ.
ಟೂರ್ ಪ್ಯಾಕೇಜ್ ಘೋಷಣೆ: ಮತ್ತೊಂದೆಡೆ, ಕೈಗೆಟಕುವ ದರದಲ್ಲಿ ಟೂರ್ ಪ್ಯಾಕೇಜ್‌ಗಳನ್ನು ಘೋಷಿಸುತ್ತಲೇ ಬಂದಿದೆ. ಇತ್ತೀಚೆಗಷ್ಟೇ ದಾವಣಗೆರೆಯಿಂದ ಜೋಗಕ್ಕೆ ಟೂರ್ ಪ್ಯಾಕೇಜ್ ಘೋಷಣೆ ಮಾಡಲಾಗಿತ್ತು. ಇದಾದ ಬಳಿಕ ಮಳೆಗಾಲದ ವೇಳೆ ಕೆಎಸ್‌ಆರ್‌ಟಿಸಿ ಕೈಗೆಟಕುವ ದರದಲ್ಲಿ ರಾಜ್ಯದ ಹಲವು ಪ್ರವಾಸಿ ತಾಣಗಳಿಗೆ ಟೂರ್ ಪ್ಯಾಕೇಜ್ ಘೋಷಣೆ ಮಾಡಿಯತ್ತು. ದಾವಣಗೆರೆ, ಸಿಂಗದೂರು, ಇಕ್ಕೇರಿಕೋಟೆ, ವರದಮೂಲ, ಜೋಗಫಾಲ್ಸ್‌ಗೆ ಟೂರ್ ಪ್ಯಾಕೇಜ್ ಘೋಷಣೆ ಮಾಡಿತ್ತು.
ಎರಡು ಕಡೆಯಿಂದ ಸೇರಿ ಒಬ್ಬ ವ್ಯಕ್ತಿಗೆ 600 ರೂಪಾಯಿ, ಮಕ್ಕಳಿಗೆ 460 ರೂಪಾಯಿ ಇರಲಿದೆ. ದಾವಣಗೆರೆ, ಅಂಜನಾದ್ರಿಬೆಟ್ಟ, ಹಂಪಿ, ತುಂಗಾಭದ್ರಾ ಡ್ಯಾಂಗೆ ಎರಡು ಕಡೆಯಿಂದ ಸೇರಿ ಒಬ್ಬ ವ್ಯಕ್ತಿಗೆ 500 ರೂಪಾಯಿ, ಮಕ್ಕಳಿಗೆ 475 ರೂಪಾಯಿ ನಿಗದಿಪಡಿಲಾಗಿತ್ತು. ದಾವಣಗೆರೆಯಿಂದ ಹೊರಟು ಇಡಗುಂಜಿ, ಅಪ್ಸರಕೊಂಡ ವಾಟರ್ ಫಾಲ್ಸ್, ಇಕೋಬೀಚ್, ಬ್ಯಾಕ್ ವಾಟರ್ ಬೋಟಿಂಗ್‍ಗೆ ಎರಡು ಕಡೆಯಿಂದ ಸೇರಿ ಪ್ರತಿ ವ್ಯಕ್ತಿಗೆ 685 ರೂಪಾಯಿ, ಮಕ್ಕಳಿಗೆ 515 ರೂಪಾಯಿ ನಿಗದಿ ಮಾಡಲಾಗಿತ್ತು. ಮುಂಗಡ ಬುಕ್ಕಿಂಗ್ ಕೌಂಟರ್‌ಗಳಲ್ಲಿ ಅಥವಾ ಅಧಿಕೃತ ವೆಬ್‌ಸೈಟ್ ksrtc.karnataka.gov.inಗೆ ಭೇಟಿ ನೀಡಿ ಟಿಕೆಟ್ ಬುಕ್ ಮಾಡಬಹುದು ಅಂತಲೂ ತಿಳಿಸಲಾಗಿತ್ತು.












Click it and Unblock the Notifications