ಕೆಪಿಸಿಸಿ ಅಧ್ಯಕ್ಷ ಸ್ಥಾನ ಯಾರಿಗಾದರೂ ಕೊಟ್ಟುಕೊಳ್ಳಲಿ: ಶಾಮನೂರು
ದಾವಣಗೆರೆ, ಜನವರಿ 16: ಕೆಪಿಸಿಸಿ ಅಧ್ಯಕ್ಷ ಸ್ಥಾನ ಲಿಂಗಾಯತರಾಗದರೂ ಕೊಡಲಿ, ದಲಿತರಿಗಾದರೂ ಕೊಡಲಿ ನನ್ನದೇನು ಅಭ್ಯಂತರ ಇಲ್ಲ ಎಂದು ಮಾಜಿ ಸಚಿವ, ದಾವಣಗೆರೆ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.
ದಾವಣಗೆರೆಯಲ್ಲಿ ಮಾತನಾಡಿದ ಶಿವಶಂಕರಪ್ಪ ಅವರು, ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಕಾಂಗ್ರೆಸ್ ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ. ಯಾರಿಗಾದ್ರು ಕೊಡಲಿ. ಇವರಿಗೇ ಕೊಡಿ ಎಂದು ನಾನು ಎಲ್ಲಿಯೂ ಹೇಳಿಲ್ಲ. ಎಂ.ಬಿ.ಪಾಟೀಲ್ ಬಗ್ಗೆ ನಾನು ಏನೂ ಹೇಳಿಲ್ಲ. ಕೆಲವರು ನನ್ನ ಹೆಸರಿನಲ್ಲಿ ತಪ್ಪು ಮಾಹಿತಿ ಹಬ್ಬಿಸುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಪಂಚಮಸಾಲಿ ಮಠದ ವಚನಾನಂದ ಸ್ವಾಮೀಜಿ ಅವರು ಸಿಎಂ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಸಮಾವೇಶದಲ್ಲಿ ನಡೆದುಕೊಂಡ ಬಗ್ಗೆ ಮಾತಾನಾಡಿ, ನಾನು ಸಹ ಅದೇ ವೇದಿಕೆಯಲ್ಲಿ ಇದ್ದೆ. ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿ ಬಗ್ಗೆ ಏನೂ ಮಾತಾಡಲ್ಲ. ನಮ್ಮ ಸಿಎಂ ಬಗ್ಗೆನೂ ಹೇಳಿಕೆ ನೀಡಲ್ಲ ಎಂದು ಉತ್ತರಿಸಿದರು.












Click it and Unblock the Notifications