ರಾಜ್ಯ ಮೈತ್ರಿ ಸರ್ಕಾರ, ರಾಜ್ಯ ಹವಾಮಾನದ ಬಗ್ಗೆ ಕೋಡಿಮಠ ಶ್ರೀ ಭವಿಷ್ಯ
Recommended Video
ದಾವಣಗೆರೆ, ಜುಲೈ 01: ಕೋಡಿಮಠ ಶ್ರೀಗಳು ಮತ್ತೆ ಮೈತ್ರಿ ಸರ್ಕಾರದ ಬಗ್ಗೆ ಭವಿಷ್ಯ ನುಡಿದಿದ್ದು, ಈ ಸರ್ಕಾರಕ್ಕೆ ಹೆಚ್ಚು ಕಾಲ ಆಯುಷ್ಯವಿಲ್ಲ ಎಂದು ಹೇಳಿದ್ದಾರೆ.
'ಬಿತ್ತಿದ ಬೆಳಸು ಪರರು ಕೊಯ್ದಾರು, ಹಂಚಿದ ಬೀಜ ಒಂದು, ಬೆಳೆದ ಪೈರು ಮತ್ತೊಂದು' ಎಂದು ಕಳೆದ ವಿಧಾನಸಭೆ ಚುನಾವಣೆ ಸಮಯದಲ್ಲಿ ದೆಹಲಿಯಲ್ಲಿ ನಾನು ಹೇಳಿದ್ದೆ ಎಂದ ಕೋಡಿಮಠ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು ಹೇಳಿದ್ದರು.
ಒಂದು ವರ್ಷದಿಂದ 18 ತಿಂಗಳ ಒಳಗೆ ಮತ್ತೆ ಮತ ಕೇಳುತ್ತಾರೆ ಎಂದು ಕಳೆದ ವಿಧಾನಸಭೆ ಚುನಾವಣೆಗೆ ಮುನ್ನವೇ ಹೇಳಿದ್ದೆ, ಈಗಲೂ ಅದೇ ಮಾತಿಗೆ ಬದ್ಧನಾಗಿದ್ದೇನೆ ಎಂದು ಕೊಡಿಮಠ ಶ್ರೀಗಳುಗಳು ಹೇಳಿದರು.

ಹವಾಮಾನದ ಬಗ್ಗೆ ಮಾತನಾಡಿದ ಶ್ರೀಗಳು, ಈ ಬಾರಿ ಮಳೆಯ ಕೊರತೆ ಆಗುವುದಿಲ್ಲ, ಗಾಳಿ ಹೋದ ನಂತರ ಮಳೆ ಬರುತ್ತದೆ, ಆತಂಕ ಪಡುವ ಅವಶ್ಯಕತೆ ಇಲ್ಲ ಎಂದಿದ್ದಾರೆ.
ಕೋಡಿಮಠ ಶ್ರೀಗಳ ಭವಿಷ್ಯ ವಾಣಿ ಬಹುತೇಕ ಸತ್ಯವಾಗಿದೆ. ವಿಧಾನಸಭೆ ಚುನಾವಣೆಗೆ ಮುನ್ನವೇ ಅವರು ಮೈತ್ರಿ ಸರ್ಕಾರ ಬರುತ್ತದೆ ಎಂದೂ ಕುಮಾರಸ್ವಾಮಿ ಅವರು ಸಿಎಂ ಆಗುತ್ತಾರೆಂದು ಭವಿಷ್ಯ ನುಡಿದಿದ್ದರು, ಅಂತೆಯೇ ಆಗಿತ್ತು.












Click it and Unblock the Notifications