BS Yediyurappa: ಕರ್ನಾಟಕದ ಬಗ್ಗೆ ರಾಹುಲ್ ಗಾಂಧಿಗೆ ಏನು ಗೊತ್ತು?, ಮೋದಿ ಮುಂದೆ ಅವರು ಯಾವ ಲೆಕ್ಕ?: ಬಿ.ಎಸ್‌.ವೈ ವ್ಯಂಗ್ಯ

ದಾವಣಗೆರೆ, ಏಪ್ರಿಲ್‌, 26: ಸಿದ್ದರಾಮಯ್ಯ ಲಿಂಗಾಯತ ಸಿಎಂ ಭ್ರಷ್ಟರು ಎಂಬ ಹೇಳಿಕೆ ವಿಚಾರಕ್ಕೆ ಜಗಳೂರಿನಲ್ಲಿ ಬಿ.ಎಸ್‌.ವೈ.ಪ್ರತಿಕ್ರಿಯಿಸಿದ್ದು, ಸಿದ್ದರಾಮಯ್ಯರಿಗೆ ಸೋಲು ನಿಶ್ಚಿತ ಅಂತಾ ಗೊತ್ತಾಗಿ ಬಹಳ ಹಗುರವಾಗಿ ಮಾತನಾಡುತ್ತಿದ್ದಾರೆ. ಅವರು ಈ ರೀತಿಯ ಹೇಳಿಕೆಯನ್ನು ಕೊಡಬಾರದು. ಅವರು ರಾಜ್ಯದ ಜನರನ್ನು ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದರು. ಇನ್ನು ಕರ್ನಾಟಕದ ಬಗ್ಗೆ ರಾಹುಲ್ ಗಾಂಧಿಗೆ ಏನು ಗೊತ್ತು? ಪ್ರಧಾನಿ ಮೋದಿ ಅವರ ಮುಂದೆ ಅವರು ಯಾವ ಲೆಕ್ಕ? ಎಂದು ಪ್ರಶ್ನಿಸುವ ಮೂಲಕ ವ್ಯಂಗ್ಯವಾಡಿದರು.

ನಂತರ ಮುಸ್ಲಿಂ ಮೀಸಲಾತಿ ರದ್ದತಿಗೆ ಸುಪ್ರೀಂಕೋರ್ಟ್ ತಡೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು, ಇದು ಸ್ವಾಗತಾರ್ಹ ಕ್ರಮವಾಗಿದೆ. ಸುಪ್ರೀಂ ಕೋರ್ಟ್ ನಿರ್ಧಾರಕ್ಕೆ ನಾವೆಲ್ಲರೂ ತಲೆಬಾಗಬೇಕು. ಅದಕ್ಕೆ ಬದ್ದರಾಗಬೇಕಾಗುತ್ತದೆ‌ ಎಂದು ಹೇಳಿದರು.

Karnataka election 2023: B.S.Yediyurappa outraged against Rahul Gandhi in Jagaluru

ಹಾಗೆಯೆ ಜಗಳೂರು ಬಿಜೆಪಿ ಅಭ್ಯರ್ಥಿ ರಾಮಚಂದ್ರ ದೊಡ್ಡ ಅಂತರದಿಂದ ಗೆಲ್ಲಲಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಪರ ವಾತಾವರಣ ಇದೆ. ಈ ಬಾರಿ 140 ಸ್ಥಾನ ಗೆದ್ದು ಮತ್ತೆ ನಾವೇ ಅಧಿಕಾರಕ್ಕೆ ಬರುತ್ತೇವೆ. ಮತ್ತೆ ರಾಜ್ಯದಲ್ಲಿ ನಾವೇ ಸರ್ಕಾರ ರಚನೆ ಮಾಡುತ್ತೇವೆ. ಈಗಿನಿಂದ ನನ್ನ ರಾಜ್ಯ ಪ್ರವಾಸ ಆರಂಭವಾಗಿದೆ ಎಂದು ನಿನ್ನೆ ಹೇಳಿದ್ದರು. ರಾಜ್ಯದಲ್ಲಿ 70 ಕ್ಷೇತ್ರದಲ್ಲಿ ಓಡಾಡಿ ಪ್ರಚಾರ ಮಾಡುತ್ತೇನೆ‌. ಕೊನೆ ದಿನದವರೆಗೂ ಪ್ರಚಾರಕ್ಕೆ ಹೋಗುತ್ತೇನೆ ಎಂದು ತಿಳಿಸಿದರು.

ಈ ಬಾರಿಯೂ ಬಿಜೆಪಿ ಸರ್ಕಾರ ಅಧಿಕಾರಕ್ಕೇರಲಿದೆ

ಹಾಗೆಯೆ ಹರಿಹರದಲ್ಲಿ ಬಿಜೆಪಿಯ ಸುನಾಮಿ ಬೀಸಿದೆ. ಚುನಾವಣೆಯ ಕಾವು ಏರುತ್ತಿದೆ. ನಾನು ರಾಜ್ಯದ ಉದ್ದಗಲಕ್ಕೂ ಪ್ರಯಾಣ ಬೆಳೆಸಿದ್ದೇನೆ. ಈ ಬಾರಿ ಬಿಜೆಪಿಯ ಸರ್ಕಾರ ನೂರಕ್ಕೆ ನೂರು ಬರಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದ್ದರು.

ಹರಿಹರ ಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ಹರೀಶ್ ಪರ ರೋಡ್ ಶೋ ನಡೆಸಿದ ಬಳಿಕ ಮಾತನಾಡಿದ ಅವರು, ಕಾಂಗ್ರೆಸ್ ನವರಿಗೆ ದಿಕ್ಕು ತಪ್ಪಿದೆ. ಸಿದ್ದರಾಮಯ್ಯ ಒಂದು ರೀತಿ, ಡಿಕೆಶಿ ಒಂದು ರೀತಿ ಮಾತನಾಡುತ್ತಾರೆ. 2013-18ರಿಂದ ಕಾಂಗ್ರೆಸ್ ಅವಧಿಯಲ್ಲಿ ನೀರಾವರಿ ಇಲಾಖೆಯಲ್ಲಿ, ಬಿಡಿಎ, ಎಸ್ಸಿ ಎಸ್ಟಿ ಮಕ್ಕಳ ದಿಂಬು ಹಾಸಿಗೆಯಲ್ಲಿ ಲಂಚ ಹೊಡೆದಿದ್ದಾರೆ. ಕಾಂಗ್ರೆಸ್ ಅನೇಕ ಯೋಜನೆಗಳಲ್ಲಿ 100% ಭ್ರಷ್ಟಾಚಾರ ಮಾಡಿದೆ ಎಂದರು.

ಕಾಂಗ್ರೆಸ್ ನಾಯಕರು ಈಗ ಲಿಂಗಾಯತ ಜಪ ಮಾಡುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಮನೆಯ ಒಳಗೆ ಬಿಟ್ಟುಕೊಳ್ಳುತ್ತಾರೆ. ಚುನಾವಣೆ ಮುಗಿದ ಮೇಲೆ ಮನೆಯ ಹೊರಗೆ ಹಾಕುತ್ತಾರೆ. ಕಾಂಗ್ರೆಸ್ ಅಂದರೆ ಬ್ರಿಟಿಷರ ಬೀಜ, ಅವರು ಒಡೆದು ಆಳುವ ನೀತಿ ಅನುಸರಿಸುತ್ತಾರೆ. ಧರ್ಮ ಒಡೆಯಲು ಪ್ರಯತ್ನ ಮಾಡಿದರು. ಜಾತಿಗಳನ್ನು ಸಣ್ಣ ಸಣ್ಣ ಜಾತಿಗಳಾಗಿ ಒಡೆದಿದ್ದಾರೆ ಎಂದು ಕಿಡಿಕಾರಿದ್ದರು.

ಎಸ್ಸಿ, ಎಸ್ಟಿಗೆ ಕಾಂಗ್ರೆಸ್ ಏನು ಮಾಡಿದೆ. ನಮ್ಮ ಅಂಬೇಡ್ಕರ್‌ ಅವರು ಎಸ್ಸಿ ಎಸ್ಟಿ ಜನಸಂಖ್ಯೆಗೆ ಅನುಗುಣವಾಗಿ ನೀಡಬೇಕು ಅಂತ ಹೇಳಿದರು. ಹರಿಹರದ ಪ್ರೊ. ಕೃಷ್ಣಪ್ಪನವರು ಎಸ್ಸಿ ಎಸ್ಟಿ ಮೀಸಲಾತಿಗಾಗಿ ಹೋರಾಟ ಮಾಡಿದರು. ಅವರ ಒಂದು ಸ್ಮಾರಕ ಮಾಡಲು ಆಗಲಿಲ್ಲ. ಹಿಂದೆ ಇಲ್ಲಿನವರೇ ಸಮಾಜ ಕಲ್ಯಾಣ ಇಲಾಖೆ ಸಚಿವರಿದ್ದರು. ಮೀಸಲಾತಿ ಹೆಚ್ಚಳ ಮಾಡಲು ವಿರೋಧ ಮಾಡಿದರು. ನಾನು ಜೇನು ಹುಳ ಕಡಿಸಿಕೊಂಡು ಆ ಸಮುದಾಯಕ್ಕೆ ಜೇನು ತುಪ್ಪ ತಿನ್ನಿಸಿದ್ದೇನೆ ಎಂದಿದ್ದರು.

ಸಿದ್ದರಾಮಯ್ಯ ಅವರು ಒಳ ಮೀಸಲಾತಿ ನೀಡಲು ಹಿಂದೇಟು ಹಾಕಿದರು. ನಾನು ಒಳ ಮೀಸಲಾತಿ ನೀಡಲು ಕೇಂದ್ರಕ್ಕೆ ಶಿಫಾರಸ್ಸು ಮಾಡಿದ್ದೇನೆ. ಒಕ್ಕಲಿಗರು, ಲಿಂಗಾಯತರು ಮೀಸಲಾತಿ ಹೆಚ್ಚಳಕ್ಕೆ ಮನವಿ ಮಾಡಿದ್ದರು. ಅವರಿಗೆ ನ್ಯಾಯ ಕೊಡುವ ಕೆಲಸ ಮಾಡಿದ್ದೇವೆ ಎಂದಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+