Davanagere South Constituency: ವಯಸ್ಸಾದರೂ ಹಠ ಬಿಡದ ಶಾಮನೂರು ಶಿವಶಂಕರಪ್ಪ
ದಾವಣಗೆರೆ ದಕ್ಷಿಣ ಕ್ಷೇತ್ರ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದು, ಈ ಬಾರಿಯು ಶಾಮನೂರು ಶಿವಶಂಕರಪ್ಪ ಟಿಕೆಟ್ ಬಯಸಿದ್ದಾರೆ. ಹಾಗಾದರೆ ಈ ಕ್ಷೇತ್ರದಲ್ಲಿ ಚುನಾವಣೆ ಕಾವು ಹೇಗಿದೆ ಅನ್ನುವ ಮಾಹಿತಿ ಇಲ್ಲಿದೆ.
ರಾಜ್ಯದಲ್ಲಿ ವಿಧಾನಸಭೆ ಚುನಾವಣೆಯ ಸದ್ದು ಜೋರಾಗಿಯೇ ಇದೆ. ಹಾಗೆಯೇ ರಾಜಕೀಯ ವ್ಯಕ್ತಿಗಳು ಕೂಡ ತಮ್ಮ ತಮ್ಮ ಗೆಲುವಿನ ತಂತ್ರಗಳನ್ನು ರೂಪಿಸುತ್ತಲೇ ಇದ್ದಾರೆ. ಹಾಗೆಯೇ ಬೆಣ್ಣೆ ನಗರಿ ಅಂತಲೇ ಪ್ರಸಿದ್ಧಿ ಪಡೆದಿರುವ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಚುನಾವಣೆಯ ರಣರಂಗ ಯಾವ ರೀತಿ ಇದೆ ಅನ್ನುವುದನ್ನು ನೋಡೋಣ ಬನ್ನಿ.
ದಾವಣಗೆರೆಯ ಹೆಸರು ಕೇಳಿದಾಕ್ಷಣ ಮೊದಲಿಗೆ ನೆನಪಾಗುವುದೇ ಬೆಣ್ಣೆ ದೋಸೆ. ಹಾಗೆಯೇ ಮಿರ್ಚಿ- ಮಂಡಕ್ಕಿ ಕೂಡ ಇಲ್ಲಿ ಹೆಚ್ಚಿನದಾಗಿ ವಿಶೇಷತೆ ಪಡೆದುಕೊಂಡಿದೆ. ಇಲ್ಲಿನ ಬೆಣ್ಣೆ ದೋಸೆಯೂ ವಿಶ್ವಮಟ್ಟದಲ್ಲಿ ಪ್ರಖ್ಯಾತಿ ಪಡೆದಿದೆ. ಮಧ್ಯ ಕರ್ನಾಟಕದ ಪ್ರಮುಖ ಜಿಲ್ಲೆಯಾದ ದಾವಣಗೆರೆ ಕರ್ನಾಟಕದ ಮ್ಯಾಂಚೆಸ್ಟರ್ ಅಂತಲೂ ಹೆಸರುವಾಸಿಯಾಗಿದೆ. ಹಾಗೆಯೇ ಈ ಜಿಲ್ಲೆ ಇದೀಗ ರಾಜಕೀಯ ರಣರಂಗಕ್ಕೂ ಕೂಡ ಪ್ರಖ್ಯಾತಿ ಪಡೆದಿದೆ. ಹಾಗಾದರೆ ದಾವಣಗೆರೆ ದಕ್ಕಿಣದಲ್ಲಿನ ರಾಜಕೀಯದ ಸದ್ದು ಯಾವ ರೀತಿ ಇದೆ ಎಂದು ತಿಳಿಯಿರಿ.

1997ರಲ್ಲಿ ಅಂದಿನ ಮುಖ್ಯಮಂತ್ರಿ ಜೆ.ಹೆಚ್. ಪಟೇಲ್ ದಾವಣಗೆರೆಯನ್ನು ಸ್ವತಂತ್ರ ಜಿಲ್ಲೆಯಾಗಿಸಿದರು. ಇದಕ್ಕೂ ಮೊದಲು ದಾವಣಗೆರೆಯು ಚಿತ್ರದುರ್ಗ ಜಿಲ್ಲೆಯ ತಾಲ್ಲೂಕುಗಳಲ್ಲಿ ಒಂದಾಗಿತ್ತು. ದಾವಣಗೆರೆ ಜಿಲ್ಲೆಯು 5 ತಾಲೂಕುಗಳಿಂದ ಕೂಡಿದ್ದು, ಇದು ರಾಜ್ಯದ ಪ್ರಮುಖ ವಾಣಿಜ್ಯ ಕೇಂದ್ರಗಳಲ್ಲಿ ಒಂದಾಗಿದೆ. ಇಲ್ಲಿಯೂ ಚುನಾವಾಣೆ ಪ್ರಕ್ರಿಯೆಗಳು ಜೋರಾಗಿದ್ದು, ಇಲ್ಲಿನ ಜನರ ಒಲವು ಯಾರ ಕಡೆ ಉದೆ ಇದೆ, ಹಾಗೂ ಇಲ್ಲಿ ಯಾವ ಜಾತಿಯ ಮತದಾರರು ಹೆಚ್ಚಿನ ಸಂಖೆಯಲ್ಲಿದ್ದಾರೆ ಎನ್ನುವುದನ್ನು ನೋಡೋಣ ಬನ್ನಿ.
ದಾವಣಗೆರೆ ಜಿಲ್ಲೆ ರಚನೆಯ ಸೂತ್ರದಾರ ಯಾರು?
ದಾವಣಗೆರೆ ಮೊದಲು ಚಿತ್ರದುರ್ಗ ಜಿಲ್ಲೆಗೆ ಸೇರಿತ್ತು. ಆಗಸ್ಟ್ 15, 1997 ಅಂದಿನ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರ ನಿರ್ಧಾರದ ಮೇರೆಗೆ ಚಿತ್ರದುರ್ಗ ಜಿಲ್ಲೆಯಿಂದ ದಾವಣಗೆರೆ, ಹರಿಹರ, ಮತ್ತು ಜಗಳೂರು ತಾಲ್ಲೂಕುಗಳನ್ನು, ಶಿವಮೊಗ್ಗ ಜಿಲ್ಲೆಯಿಂದ ಹೊನ್ನಾಳಿ ಮತ್ತು ಚನ್ನಗಿರಿ ತಾಕುಗಳನ್ನು ಹಾಗೂ ಬಳ್ಳಾರಿ ಜಿಲ್ಲೆಯಿಂದ ಹರಪನಹಳ್ಳಿ ತಾಲೂಕುಗಳನ್ನು ಸೇರಿಸಿ ನೂತನ ದಾವಣಗೆರೆ ಜಿಲ್ಲೆಯನ್ನು ರಚಿಸಲಾಯಿತು. 2019ರಲ್ಲಿ ಪುನಃ ಹರಪನಹಳ್ಳಿ ತಾಲೂಕನ್ನು ವಿಜಯನಗರಕ್ಕೆ ಸೇರಿಸಲಾಯಿತು. ಇದೀಗ ದಾವಣಗೆರೆ ಜಿಲ್ಲೆ 5 ತಾಲೂಕುಗಳನ್ನು ಹೊಂದಿದೆ.

ದಕ್ಷಿಣ ಕ್ಷೇತ್ರದಲ್ಲಿ ಪ್ರಬಲ ಅಭ್ಯರ್ಥಿ ಯಾರು?
ಕ್ಷೇತ್ರ ಪುನರ್ ವಿಂಗಡಣೆಯಿಂದ ದಾವಣಗೆರೆ ವಿಧಾನಸಭಾ ಕ್ಷೇತ್ರ 2008ರಲ್ಲಿ ದಾವಣಗೆರೆ ವಿಧಾನಸಭಾ ಕ್ಷೇತ್ರವನ್ನು ವಿಂಗಡನೆ ಮಾಡಲಾಯಿತು. ಆಗ ದಾವಣಗೆರೆ ಉತ್ತರ ಮತ್ತು ದಾವಣಗೆರೆ ದಕ್ಷಿಣ ಎಂಬ ಎರಡು ಕ್ಷೇತ್ರಗಳಾಗಿ ವಿಭಜನೆಯಾದವು. ದಾವಣಗೆರೆ ದಕ್ಷಿಣ ಕ್ಷೇತ್ರ ಪ್ರತ್ಯೇಕ ಆದಾಗಿನಿಂದ ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಅವರೇ ಟಿಕೆಟ್ ಗಿಟ್ಟಿಸಿಕೊಳ್ಳುತ್ತಾ ಬಂದಿದ್ದಾರೆ. ಈ ಕ್ಷೇತ್ರದಲ್ಲಿ 2008, 2013 ಎರಡೂ ಚುನಾವಣೆಗಳಲ್ಲೂ ಶಾಮನೂರು ಶಿವಶಂಕರಪ್ಪನವರೇ ವಿಜಯ ಪತಾಕೆಯನ್ನು ಹಾರಿಸಿದ್ದಾರೆ.
ಅತಿ ಹೆಚ್ಚು ಬಾರಿ ಗೆದ್ದ ಪಕ್ಷ ಯಾವುದು?
ಕ್ಷೇತ್ರ ಪುನರ್ ವಿಂಗಡಣೆಯಾದಾಗ ದಾವಣಗೆರೆ ವಿಧಾನಸಭಾ ಕ್ಷೇತ್ರ ದಕ್ಷಿಣ, ಉತ್ತರ ಎಂದು ಎರಡು ಕ್ಷೇತ್ರಗಳಾದವು. ಇದಕ್ಕೂ ಮೊದಲು ದಾವಣಗೆರೆ ವಿಧಾನಸಭಾ ಕ್ಷೇತ್ರದಲ್ಲಿ 1952ರಿಂದ 2018ರವರೆಗೆ ಒಟ್ಟು 13 ಚುನಾವಣೆಗಳು ನಡೆದಿವೆ. ಇದರಲ್ಲಿ 11 ಬಾರಿ ಕಾಂಗ್ರೆಸ್, ಸಿಪಿಐ 3 ಬಾರಿ ಹಾಗೂ ಪ್ರಜಾ ಸೋಷಲಿಸ್ಟ್ ಪಕ್ಷ (ಪಿಎಸ್‌ಪಿ) 1 ಬಾರಿ ವಿಜಯ ಪತಾಕೆಯನ್ನು ಹಾರಿಸಿವೆ.

ಶಿವಶಂಕರಪ್ಪಗೆ ಪ್ರಬಲ ಎದುರಾಳಿ ಯಾರು?
ಇದೀಗ ಕಾಂಗ್ರೆಸ್‌ನಿಂದ ಶಾಮನೂರು ಶಿವಶಂಕರಪ್ಪನವರೇ ಮತ್ತೊಮ್ಮೆ ಟಿಕೆಟ್ ಬಯಸಿದ್ದಾರೆ. ಸದ್ಯ ಅವರಿಗೆ ಕ್ಷೇತ್ರದಲ್ಲಿ ಟಿಕೆಟ್‌ಗೆ ಪೈಪೋಟಿ ಇದ್ದಂತೆ ಕಾಣುತ್ತಿಲ್ಲ. ಬಿಜೆಪಿಯಲ್ಲಿ ಕಳೆದ ಬಾರಿ ಸೋತಿದ್ದ ಯಶವಂತರಾವ್ ಜಾಧವ್ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಇನ್ನು ಮಾಜಿ ಮೇಯರ್ ಬಿ.ಜಿ. ಅಜಯ್ ಕುಮಾರ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಶ್ರೀನಿವಾಸ ದಾಸಕರಿಯಪ್ಪ ಸೇರಿದಂತೆ ಹಲವರು ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಜಾತಿವಾರು ಮತದಾರರ ವಿವರ
ಒಟ್ಟಾರೆಯಾಗಿ ನೋಡುವುದಾದರೆ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಲಿಂಗಾಯತರದ್ದೇ ದರ್ಬಾರ್ ಆಗಿದೆ. ಜಾತಿವಾರು ಮತದಾರರ ವಿವರವನ್ನು ಇಲ್ಲಿ ನೀಡಲಾಗಿದೆ. (ಅಂದಾಜು)
ಲಿಂಗಾಯತರು- 38,000
ಕುರುಬ - 20,000
ಮುಸ್ಲಿಂ - 59,000
ಎಸ್‌ಟಿ - 15,000
ಎಸ್‌ಸಿ - 21,000
ಮರಾಠ - 16,000,
ಈಡಿಗ -2,500
ಉಪ್ಪಾರ - 8,000 ಮತದಾರರಿದ್ದಾರೆ.
ದಾವಣಗೆರೆ ದಕ್ಷಿಣದಲ್ಲಿ ಜಾತಿವಾರು ಮತರದಾರರನ್ನು ನೋಡುವುದಾದರೆ ಲಿಂಗಾಯತ ಮತದಾರರ ಸಂಖ್ಯೆಯೇ ಹೆಚ್ಚಾಗಿದೆ. ಇಲ್ಲಿ ಕಾಂಗ್ರೆಸ್‌ನಿಂದ ಮತ್ತೆ ಟಿಕೆಟ್ ಶಾಮನೂರು ಶಿವಶಂಕರಪ್ಪನವರು ಕೂಡ ಅದೇ ಜಾತಿಯವರಾಗಿದ್ದು, ಅವರೇ ಮತ್ತೆ ವಿಜಯ ಪಾತಾಕೆಯನ್ನು ಹಾರಿಸಲಿದ್ದಾರೆ ಎನ್ನುವ ಮಾತುಗಳು ಜೋರಾಗಿಯೇ ಕೇಳಿಬರುತ್ತಿವೆ. ಹಾಗಾದರೆ ಬೇರೆ ಜಾತಿಯವರ ಮಾತದಾರರು ಯಾರ ಕಡೆ ಒಲವು ತೋರಲಿದ್ದಾರೆ ಎನ್ನುವುದನ್ನು ಕಾದುನೋಡಬೇಕಿದೆ.












Click it and Unblock the Notifications