ದಾವಣಗೆರೆ ಫಲಿತಾಂಶ: ಮತ್ತೆ ಅರಳಿದ ಕಮಲ, ಎರಡು ಅಚ್ಚರಿ ಸೋಲು

ಬೆಂಗಳೂರು, ಮೇ 17: ರಾಜ್ಯದ ಹೃದಯ ಭಾಗವಾಗಿರುವ ದಾವಣಗೆರೆ-ಕಾಟನ್ ಸಿಟಿ, ವಿದ್ಯಾನಗರಿ, ಮ್ಯಾಂಚೆಸ್ಟರ್ ಆಫ್ ಸೌಥ್ ಎಂದೆಲ್ಲ ಕರೆಸಿಕೊಳ್ಳುವ ಜಿಲ್ಲೆ.

ದಾವಣಗೆರೆ ಕರ್ನಾಟಕದ ರಾಜಧಾನಿಯಾಗುವ ಎಲ್ಲಾ ಅರ್ಹತೆ ಹೊಂದಿದ್ದರೂ ರಾಜಕೀಯ ನಾಯಕರ ಇಚ್ಛಾಶಕ್ತಿಯ ಕೊರತೆಯಿಂದಾಗಿ ಇನ್ನೂ ಕೇವಲ ಜಿಲ್ಲೆಯಾಗಿ ಉಳಿದಿದೆ.

ಲಿಂಗಾಯತ, ಬ್ರಾಹ್ಮಣ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮುಸ್ಲಿಂ, ಕುರುಬರು, ಲಂಬಾಣಿಗಳು ಇಲ್ಲಿ ನಿರ್ಣಾಯಕವಾಗಿವೆ. ದಾವಣಗೆರೆಯು ಒಟ್ಟು ಏಳು ತಾಲೂಕುಗಳು ಮತ್ತು ಒಂದು ಮೀಸಲು ವಿಧಾನಸಭಾ ಕ್ಷೇತ್ರವನ್ನು ಒಳಗೊಂಡಿದೆ.2008ರ ಚುನಾವಣೆವರೆಗೂ ಹೆಚ್ಚು ಕೈ' ಹಿಡಿತದಲ್ಲಿದ್ದ ಜಿಲ್ಲೆಯಲ್ಲಿ ಸದ್ಯ ಕಮಲದ್ದೇ ಅಧಿಪತ್ಯ ನಡೆದಿತ್ತು.

Karnataka Assembly elections 2018 : Davanagere District Winners Losers

2013ರ ಫಲಿತಾಂಶದಂತೆ ದಾವಣಗೆರೆ ಜಿಲ್ಲೆಯ 8 ಕ್ಷೇತ್ರಗಳ ಕಾಂಗ್ರೆಸ್ 7 ಹಾಗೂ ಜೆಡಿಎಸ್ 1 ರಲ್ಲಿ ಗಳಿಸಿತ್ತು. 2018ರಲ್ಲಿ ದಾವಣೆಗೆರೆಯಲ್ಲಿ ಬಿಜೆಪಿ ಭರ್ಜರಿ ಬೆಳೆ ತೆಗೆದಿದ್ದು, 6 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು, ಕಾಂಗ್ರೆಸ್ 2 ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸಿದೆ.

ದಾವಣಗೆರೆ ಉತ್ತರದಲ್ಲಿ ಕಾಂಗ್ರೆಸ್ಸಿನ ಎಸ್ ಎಸ್ ಮಲ್ಲಿಕಾರ್ಜುನ ಅವರನ್ನು ಬಿಜೆಪಿಯ ಎಸ್ ಎ ರವೀಂದ್ರನಾಥ್ ಅವರು ಸೋಲಿಸಿದರೆ, ಜೆ ಕರುಣಾಕರ ರೆಡ್ಡಿ ಹಾಗೂ ಎಂಪಿ ರೇಣುಕಾಚಾರ್ಯ ಕೂಡಾ ಗೆಲುವಿನ ನಗೆ ಬೀರಿದ್ದಾರೆ. ಆದರೆ, ಹರಿಹರದಲ್ಲಿ ಬಿಜೆಪಿಯ ಹರೀಶ್ ಸೋಲು ಕಂಡಿದ್ದಾರೆ.

ದಾವಣಗೆರೆ ಜಿಲ್ಲಾ ಪರಿಚಯ ಓದಿ

ದಾವಣಗೆರೆ ಜಿಲ್ಲೆ ವಿಧಾನಸಭಾ ಕ್ಷೇತ್ರಗಳಲ್ಲಿ : ಗೆದ್ದವರು, ಸೋತವರ ವಿವರ ಹೀಗಿದೆ:

ಕ್ಷೇತ್ರ ಗೆದ್ದವರು ಪಕ್ಷ ಪಡೆದ ಮತಗಳು ಸೋತವರು ಪಕ್ಷ ಪಡೆದ ಮತಗಳು
ದಾವಣಗೆರೆ (ದಕ್ಷಿಣ) ಶಾಮನೂರು ಶಿವಶಂಕರಪ್ಪ
ಕಾಂಗ್ರೆಸ್
71369 ಯಶವಂತರಾವ್ ಜಾಧವ್
ಬಿಜೆಪಿ
55485
ದಾವಣಗೆರೆ (ಉತ್ತರ)
ಎಸ್.ವಿ.ರವೀಂದ್ರನಾಥ್
ಬಿಜೆಪಿ 76540 ಎಸ್ ಎಸ್ ಮಲ್ಲಿಕಾರ್ಜುನ
ಕಾಂಗ್ರೆಸ್
72469
ಜಗಳೂರು (ಎಸ್ ಟಿ)
ಎಸ್.ವಿ.ರಾಮಚಂದ್ರ
ಬಿಜೆಪಿ
78498 ಎಚ್.ಪಿ.ರಾಜೇಶ್
ಕಾಂಗ್ರೆಸ್
49727
ಹರಿಹರ
ಎಸ್.ರಾಮಪ್ಪ
ಕಾಂಗ್ರೆಸ್
64801 ಬಿಪಿ ಹರೀಶ್
ಬಿಜೆಪಿ
57541
ಮಾಯಕೊಂಡ (ಮೀಸಲು)
ಎನ್ ಲಿಂಗಣ್ಣ
ಬಿಜೆಪಿ
50556 ಕೆಎನ್ ಬಸವರಾಜ
ಕಾಂಗ್ರೆಸ್ 44098
ಚನ್ನಗಿರಿ ಮಾಡಾಳು ವಿರೂಪಾಕ್ಷಪ್ಪ
ಬಿಜೆಪಿ 73794 ವಡ್ನಾಳ್ ರಾಜಣ್ಣ
ಕಾಂಗ್ರೆಸ್ 48014
ಹೊನ್ನಾಳಿ ಎಂ.ಪಿ.ರೇಣುಕಾಚಾರ್ಯ
ಬಿಜೆಪಿ 80624 ಡಿ.ಜಿ.ಶಾಂತನಗೌಡ
ಕಾಂಗ್ರೆಸ್ 76391
ಹರಪನಹಳ್ಳಿ ಕರುಣಾಕರ ರೆಡ್ಡಿ
ಬಿಜೆಪಿ 67603
ಎಂ.ಪಿ.ರವೀಂದ್ರ
ಬಿಜೆಪಿ 57956
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+