Get Updates
Get notified of breaking news, exclusive insights, and must-see stories!

Shamanuru Shivashankarappa: ಹ್ಯಾಟ್ರಿಕ್ ಬಾರಿಸಿರುವ ಶಾಮನೂರು ಶಿವಶಂಕರಪ್ಪನವರ ಪರಿಚಯ, ರಾಜಕೀಯ ಜೀವನ

ಬೆಂಗಳೂರು ಮಾರ್ಚ್‌ 30: ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕರು ಆಗಿರುವ ಶಾಮನೂರು ಶಿವಶಂಕರಪ್ಪನವರು ಮಧ್ಯ ಕರ್ನಾಟಕದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ. 2023ರ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವುದರಿಂದ ಕ್ಷೇತ್ರದಲ್ಲಿ ಹೆಚ್ಚು ಸಕ್ರಿಯರಾದ ರಾಜಕಾರಣಗಳಲ್ಲಿ ಇವರು ಒಬ್ಬರು.

ದಾವಣಗೆರೆ ಜಿಲ್ಲೆಯಲ್ಲಿ 1931 ರಲ್ಲಿ ಜನಿಸಿದ ಅವರು ಜಿಲ್ಲೆಯ ದಕ್ಷಿಣ ಭಾಗದಿಂದ ಕಳೆದ ಒಂದು ದಶಕಕ್ಕಿಂತಲೂ ಹೆಚ್ಚು ಕಾಲದಿಂದ ಪ್ರತಿನಿಧಿಸುತ್ತಿದ್ದಾರೆ. 2008 ಹಾಗೂ 2013ರ ವಿಧಾನಸಭಾ ಚುನಾವಣೆಯಲ್ಲಿ ಅದೇ ಕ್ಷೇತ್ರದಿಂದ ಬಹುಮತ ಸಹಿತ ಅವರು ಆಯ್ಕೆಯಾದರು. 2008ರಲ್ಲಿ ಬಿಜೆಪಿಯ ಯಶವಂತ ರಾವ್ ಜಾಧವ್ ವಿರುದ್ಧ ಗೆದ್ದಿದ್ದರು.

Karnataka Assembly Election 2023: Congress MLA Shamanur Shivashankarappa Profile, Political Details

ಕಾಂಗ್ರೆಸ್ ಪಕ್ಷದ ಅತ್ಯಂತ ಹಿರಿಯ ನಾಯರಕ ಮತ್ತು ಅನುಭವಿ ರಾಜಕಾರಣಿಯಾಗಿದ್ದಾರೆ. ಸಚಿವ ಸ್ಥಾನದಲ್ಲಿದ್ದುಕೊಂಡು ವಿವಿಧ ಖಾತೆಗಳನ್ನು ನಿರ್ವಹಿಸದ ಸಚಿವ ಸಂಪುಟದ ಅನುಭವ ಅವರಿಗಿದೆ. ಈ ಭಾಗದ ಅತ್ಯಂತ ಪ್ರಭಾವಿ ರಾಜಕಾರಣಿಯಾಗಿ ಅವರು ಗುರುತಿಸಿಕೊಂಡಿದ್ದಾರೆ. 2013 ಹಾಗೂ 2018ರಲ್ಲೂ ಸಹ ಅವರು ಗೆಲುವು ಸಾಧಿಸಿದ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ.

2008ರಲ್ಲಿ ವಿಧಾನಸಭಾ ಕ್ಷೇತ್ರಗಳ ವಿಂಗಡಣೆ ವೇಳೆ ಬೆಣ್ಣೆ ನಗರಿ ದಾವಣೆಗೆರೆ ಉತ್ತರ ಮತ್ತು ದಕ್ಷಿಣ ಕ್ಷೇತ್ರವಾಗಿ ಮಾಡಲಾಯಿತು. ಅದಾದ ಬಳಿಕ ದಾವಣಗೆರೆ ದಕ್ಷಿಣದಿಂದ ವಿಧಾನ ಸತತವಾಗಿ ದಾವಣಗೆರೆ ದಕ್ಷಿಣದಲ್ಲಿ ಹ್ಯಾಟ್ರಿಕ್ ಭಾರಿಸಿರುವ ಶಿವಶಂಕರಪ್ಪನವರು ಈ ಬಾರಿಯು ಅವರಿಗೆ ಟಿಕೆಟ್ ಪಕ್ಕಾ ಆಗಿದ್ದು, ಅವರೇ ಸ್ಪರ್ಧಿಸಲಿದ್ದಾರೆ.

Karnataka Assembly Election 2023: Congress MLA Shamanur Shivashankarappa Profile, Political Details

ಕಾಂಗ್ರೆಸ್‌ ಟಿಕೆಟ್ ಪಕ್ಕಾ, ಬಿಜೆಪಿಯಲ್ಲಿ ಹೆಚ್ಚಾದ ಆಕಾಂಕ್ಷಿಗಳು

ಶಿವಶಂಕರಪ್ಪನವರ ವಿರುದ್ಧವಾಗಿ ಬಿಜೆಪಿಯಿಂದ ಹಾಗೂ ಜೆಡಿಎಸ್ ನಿಂದ ಯಾರು ಕಣಕ್ಕಿಳಿಯಲಿದ್ದಾರೆ ಎಂಬುದು ಇನ್ನೂ ಅಂತಿಮವಾಗಿಲ್ಲ. ಬಿಜೆಪಿಯಿಂದ ಯಶವಂತ ರಾವ್ ಜಾಧವ್ ಮತ್ತೆ ಟಿಕೆಟ್ ಬಯಸಿದ್ದಾರೆ, ಅವರ ಜೊತೆಗೆ ಮಾಜಿ ಮೇಯರ್ ಬಿ.ಜಿ. ಅಜಯ್ ಕುಮಾರ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಶ್ರೀನಿವಾಸ ದಾಸಕರಿಯಪ್ಪ ಸೇರಿದಂತೆ ಹಲವರು ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಮತ್ತು ಜೆಡಿಎಸ್ ಯಾರು ಎಂಬುದು ತಿಳಿಯಬೇಕಿದೆ.

ದಾವಣಗೆರೆಯಲ್ಲಿ ಲಿಂಗಾಯತ ಮತದಾರರೆ ಹೆಚ್ಚಿದ್ದು, ಅವರೇ ನೀರ್ಣಾಯಕ ಎನ್ನಲಾಗುತ್ತಿದೆ. ಹೀಗಾಗಿ ನಿರಂತರವಾಗಿ ಶಿವಶಂಕರಪ್ಪನವರು ಶಾಸಕರಾಗಿ ಚುನಾಯಿತರಾಗಿದ್ದಾರೆ. ಈ ಸಲವು ಅವರೆ ಗೆಲ್ಲಲ್ಲಿದ್ದಾರೆ ಎಂಬ ಜನಾಭಿಪ್ರಾಯವು ಕೇಳಿ ಬಂದಿದ್ದೆ. ಆದರೆ ಅವರ ಮತದಾರರ ಓಲೈಕೆಗೆ ಮಾಡಿ ಕಸರತ್ತು ಅವರಿಗೆ ಮುಳ್ಳಾಗಿದೆ.

ಸೀರೆ ಕೊಟ್ಟು ಸುದ್ದಿಯಾದ ಶಾಮನೂರು

ಕಾಂಗ್ರೆಸ್‌ ಶಾಮನೂರು ಶಿವಶಂಕರಪ್ಪನವರಿಗೆ ದಾವಣಗೆರೆ ದಕ್ಷಿಣದ ಟಿಕೆಟ್ ಹಾಗೆಯೇ ಅವರ ಪುತ್ರ ಎಸ್‌.ಎಸ್‌.ಮಲ್ಲಿಕಾರ್ಜುನ ಅವರಿಗೆ ದಾವಣಗೆರೆ ಉತ್ತರ ಕ್ಷೇತ್ರದ ಟಿಕೆಟ್ ನೀಡಲಾಗಿದೆ. ಬುಧವಾರವಷ್ಟೇ ಚುನಾವಣೆ ದಿನಾಂಕ ಘೋಷಣೆ ಆಗಿದೆ. ಈ ಮಧ್ಯೆ ಮತದಾರರನ್ನು ಓಲೈಸಿ ಚುನಾವಣೆ ಗೆಲ್ಲಬೇಕೆಂದು ನಿರ್ಧರಿರುವ ಶಾಮನೂರು ಶಿವಶಂಕರಪ್ಪನವರು ಮತ್ತವರ ಪತ್ರ ಕ್ಷೇತ್ರದಲ್ಲಿ ಸೀರೆ ಹಂಚಿದ್ದಾರೆ.

ಈ ಮೂಲಕ ಚುನಾವಣಾ ನೀತಿ ಸಂಹಿತೆ ಜಾರಿಯಾದರೂ ಅದನ್ನೆಲ್ಲ ಲೆಕ್ಕಿಸದೇ ಇಂತಹ ಆಮಿಷ ಒಡ್ಡಿದ್ದಾರೆ. ಆದರೆ ಮತದಾರರು ಅವರು ಕೊಟ್ಟ ಸೀರೆಯನ್ನು ಬೆಂಕಿ ಹಾಕಿ ಸುಟ್ಟಿದ್ದಾರೆ. ನೀವು ಕೊಡುಗೆ 60 ರೂಪಾಯಿ ಸೀರೆ ಉಡಲು ನಾವೇನು ಗತಿಗೆಟ್ಟಿಲ್ಲ, ನಿರ್ಗತಿಕರಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸುವ ಮೂಲಕ ಶಾಸಕರಿಗೆ ತಕ್ಕ ಪಾಠ ಕಲಿಸಿದ್ದಾರೆ. ಇತರರಿಗೆ ಮಾದರಿಯಾಗಿದ್ದಾರೆ.

ಫಲಿತಾಂಶದ ಮೇಲೆ ಕುತೂಹಲ

ಶಿವಶಂಕರಪ್ಪನವರು ವಿರುದ್ಧ ಅಭಿವೃದ್ಧಿ ವಿಚಾರವಾಗಿ ಜನರು ಬೇಸರಗೊಂಡಿದ್ದಾರೆ. ಕ್ಷೇತ್ರ ಅಭಿವೃದ್ಧಿಗೊಂಡಿಲ್ಲ. ಅಭಿವೃದ್ಧಿ ಮಾಡದೇ ಓಲೈಕೆ ರಾಜಕರಾಣ ಮಾಡಿದ್ದಾರೆ ಎಂದು ಆರೋಪ ಮಾಡಲಾಗಿದೆ. ಮತ್ತೊಂದೆಡೆ ಶಾಸಕರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಅನುಭವಿ ಮತ್ತು ಹಿರಿಯ ರಾಜಕಾರಣಿಯೊಬ್ಬರು ಈ ರೀತಿ ಸುದ್ದಿಯಾಗಿರುವುದು ಪಕ್ಷದ ವರ್ಚಸ್ಸಿಗೆ ಧಕ್ಕೆ ತಂದಿದ್ದಂತೂ ಸುಳ್ಳಲ್ಲ. ಇದೆಲ್ಲವನ್ನು ನೋಡಿದರೆ ಮುಂದಿನ ಮೇ 13ರಂದು ಹೊರ ಬೀಳುವ ಫಲಿತಾಂಶವು ಹೆಚ್ಚು ಕುತೂಹಲಕಾರಿಯಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+