ದಾವಣಗೆರೆ: ನಿರುದ್ಯೋಗಿಗಳಿಗೆ ಸ್ವಉದ್ಯೋಗ ಶಿಬಿರ
ದಾವಣಗೆರೆ, ಸೆ. 14: ತೋಳಹುಣಸೆಯ ರೇಷ್ಮೆ ಇಲಾಖೆ ಆವರಣದಲ್ಲಿರುವ ಕೆನರಾ ಬ್ಯಾಂಕ್ ಗ್ರಾಮೀಣ ಸ್ವಉದ್ಯೋಗ ತರಬೇತಿ ಶಿಬಿರ ನಡೆಸಲಾಗುತ್ತಿದೆ. ಆಸಕ್ತ ಯುವಕ/ತಿಯರು ತಕ್ಷಣವೇ ಅರ್ಜಿ ಸಲ್ಲಿಸಬಹುದಾಗಿದೆ.
ಸಂಸ್ಥೆ ವತಿಯಿಂದ ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ಜಿಲ್ಲೆಯ ನಿರುದ್ಯೋಗಿಗಳಿಗೆ ವಿವಿಧ ರೀತಿಯ ಸ್ವ ಉದ್ಯೋಗ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
* ಸೆಪ್ಟೆಂಬರ್ 15 ರಿಂದ 10 ದಿನಗಳ ಕಾಲ ಈ ತರಬೇತಿ ಶಿಬಿರ ನಡೆಸಲಾಗುತ್ತದೆ. ಕೃಷಿ ಹಾಗೂ ಕೃಷಿಯೇತರ ಚಟುವಟಿಕೆ ಕುರಿತು ತರಬೇತಿ,
* ಸೆಪ್ಟೆಂಬರ್ 16 ರಿಂದ 21 ದಿನಗಳ ಬೇಸಿಕ್ ಫೋಟೋಗ್ರಫಿ ಮತ್ತು ವೀಡಿಯೋಗ್ರಾಫಿ

* ಸೆಪ್ಟೆಂಬರ್ 26 ರಿಂದ ವಿಕಲಚೇತನರಿಗೆ 13 ದಿನಗಳ ಸಣ್ಣ ಆದಾಯ ಚಟುವಟಿಕೆಗಳು ರಾಗಿಯಿಂದ ಶಕ್ತಿವರ್ಧಕ ಆಹಾರ, ಅಗರಬತ್ತಿ, ಸೋಪ್ ಆಯಿಲ್, ಪೆನಾಯಿಲ್, ವ್ಯಾಸಲಿನ್, ಬಟ್ಟೆ ಒಗೆಯುವ ಸೋಪಿನ ಪೌಡರ್ ತಯಾರಿಕೆ ಕುರಿತು ತರಬೇತಿ ನೀಡಲಾಗುವುದು.
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ:
ಕೆ. ನಾಗರಾಜ್,
ನಿರ್ದೇಶಕರು, ಕೆನರಾ ಬ್ಯಾಂಕ್
ಗ್ರಾಮೀಣ ಸ್ವಉದ್ಯೋಗ ತರಬೇತಿ
ಸಂಸ್ಥೆ, ತೋಳಹುಣಸೆ, ರೇಷ್ಮೆ
ಇಲಾಖೆ ಆವರಣ. ದಾವಣಗೆರೆ.
ದೂರವಾಣಿ : 08192-210 707/95383 95817.
(ಒನ್ಇಂಡಿಯಾ ಸುದ್ದಿ)












Click it and Unblock the Notifications